‘ಶಿವಾಜಿ ಸುರತ್ಕಲ್​ 2’ ಬಿಡುಗಡೆ ದಿನಾಂಕ ಘೋಷಣೆ​; ರಮೇಶ್ ಅರವಿಂದ್ ಸಿನಿಮಾಗೆ ಲಕ್ಕಿ ಡೇಟ್​

Shivaji Surathkal 2 Release Date: ‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್ 14ರಂದು ರಿಲೀಸ್ ಆಯಿತು. ಈ ಚಿತ್ರ ದೊಡ್ಡ ಗೆಲುವು ಕಂಡಿತು. ‘ಶಿವಾಜಿ ಸುರತ್ಕಲ್ 2’ ಚಿತ್ರ ಈ ವರ್ಷ ಏಪ್ರಿಲ್ 14ರಂದು ಬಿಡುಗಡೆ ಆಗುತ್ತಿದೆ.

‘ಶಿವಾಜಿ ಸುರತ್ಕಲ್​ 2’ ಬಿಡುಗಡೆ ದಿನಾಂಕ ಘೋಷಣೆ​; ರಮೇಶ್ ಅರವಿಂದ್ ಸಿನಿಮಾಗೆ ಲಕ್ಕಿ ಡೇಟ್​
ರಮೇಶ್ ಅರವಿಂದ್
Follow us
ರಾಜೇಶ್ ದುಗ್ಗುಮನೆ
|

Updated on:Mar 07, 2023 | 9:52 AM

‘ಶಿವಾಜಿ ಸುರತ್ಕಲ್’ ಚಿತ್ರ (Shivaji Surathkal) ಸಸ್ಪೆನ್ಸ್​ ಶೈಲಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರ ಗೆದ್ದ ನಂತರ ರಮೇಶ್ ಅರವಿಂದ್ (Ramesh Aravind) ಅವರು ‘ಶಿವಾಜಿ ಸುರತ್ಕಲ್ 2’ ಚಿತ್ರ ಘೋಷಿಸಿದರು. ‘ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಎಂಬ ಅಡಿಬರಹ ಇರುವ ಈ ಚಿತ್ರಕ್ಕೆ ಈಗ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆಗಲಿದೆ. ಲಕ್ಕಿ ದಿನಾಂಕದಂದು ಈ ಚಿತ್ರ ಬಿಡುಗಡೆ ಆಗುತ್ತಿದೆ ಎನ್ನುವ ಅಭಿಪ್ರಾಯ ಸಿನಿಪ್ರಿಯರ ವಲಯದಲ್ಲಿ ವ್ಯಕ್ತವಾಗಿದೆ.

‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್ 14ರಂದು ರಿಲೀಸ್ ಆಯಿತು. ಈ ಚಿತ್ರ ದೊಡ್ಡ ಗೆಲುವು ಕಂಡಿತು. ‘ಶಿವಾಜಿ ಸುರತ್ಕಲ್ 2’ ಚಿತ್ರ ಈ ವರ್ಷ ಏಪ್ರಿಲ್ 14ರಂದು ಬಿಡುಗಡೆ ಆಗುತ್ತಿದೆ. ಈ ಕಾರಣಕ್ಕೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಆಕಾಶ್ ಶ್ರೀವತ್ಸ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ಅನೂಪ್ ಗೌಡ ಮತ್ತು ರೇಖಾ ಕೆ ಎನ್. ಸಿನಿಮಾ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಸ್ಥೆ ಕೆಆರ್​ಜಿ ಸ್ಟುಡಿಯೋಸ್ ಮೂಲಕ ಸಿನಿಮಾ ಬಿಡುಗಡೆ ಆಗಲಿದೆ. ಇದು ರಮೇಶ್ ಅರವಿಂದ್ ಅವರ 103ನೇ ಚಿತ್ರ ಅನ್ನೋದು ವಿಶೇಷ.

ಇತ್ತೀಚೆಗೆ ಸಂಗೀತಾ ಶೃಂಗೇರಿ ಅವರು ಸಿನಿಮಾ ತಂಡ ಸೇರಿಕೊಂಡ ವಿಚಾರ ರಿವೀಲ್ ಆಗಿತ್ತು. ಈ ಚಿತ್ರದಲ್ಲಿ ಬರುವ ವಿಶೇಷ ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ. ಧನಂಜಯ್ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಈ ಹಾಡಿನ ಶೂಟಿಂಗ್ ಕೂಡ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್ ಹಾಗೂ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಹಲವಾರು ಕಲಾವಿದರು ಪಾತ್ರವರ್ಗದಲ್ಲಿದ್ದಾರೆ.

ಇದನ್ನೂ ಓದಿ: ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್​ 2’ ತಂಡಕ್ಕೆ ಸಂಗೀತಾ ಶೃಂಗೇರಿ ಸೇರ್ಪಡೆ; ಯಾವ ಪಾತ್ರ?

‘ಶಿವಾಜಿ ಸುರತ್ಕಲ್​’ ಚಿತ್ರದಲ್ಲಿ ರಣಗಿರಿ ರಹಸ್ಯವನ್ನು ಶಿವಾಜಿ ಬೇಧಿಸಿದ್ದರು. ಈಗ ಹೊಸ ಚಿತ್ರದಲ್ಲಿ ಮತ್ತೊಂದು ದೊಡ್ಡ ಸವಾಲನ್ನು ಶಿವಾಜಿ ಎದುರಿಸಲಿದ್ದಾರೆ. ಮೊದಲ ಚಿತ್ರದಲ್ಲಿ ಇದ್ದಂತೆ ಈ ಚಿತ್ರದಲ್ಲಿಯೂ, ಶಿವಾಜಿಯ ಖಾಸಗಿ ಬದುಕಿನ ಒಂದು ಕಿರುನೋಟ ಬರುತ್ತದೆ. ಚಿತ್ರದ ಶೀರ್ಷಿಕೆಯಲ್ಲಿರುವ ಆ ಮಾಯಾವಿ ಯಾರು? ಅವನ ಇಂದ್ರಜಾಲವನ್ನು ಶಿವಾಜಿ ಹೇಗೆ ಬೇಧಿಸುತ್ತಾನೆ ಎಂಬ ಪ್ರಶ್ನೆಗಳಿಗೆ ಚಿತ್ರಮಂದಿರದಲ್ಲಿಯೇ ಉತ್ತರ ಸಿಗಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:26 am, Tue, 7 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ