ರಂಗಾಯಣ ರಘು (Rangayana Raghu) ಅವರು ಓರ್ವ ಶ್ರೇಷ್ಠ ನಟ. ಅವರ ನಟನೆಯನ್ನು ಎಲ್ಲರೂ ಹೊಗಳುತ್ತಾರೆ. ಯಾವುದೇ ಪಾತ್ರ ಕೊಟ್ಟರೂ ಅವರು ನಟಿಸಿ ತೋರಿಸುತ್ತಾರೆ. ಪ್ರತಿ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಈಗ ಅವರ ನಟನೆಯ ‘ಮೂರನೇ ಕೃಷ್ಣಪ್ಪ’ ಸಿನಿಮಾ ರಿಲೀಸ್ ಆಗಿದೆ. ಹಾಸ್ಯ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾದ ಪ್ರಮೋಷನ್ ಕೂಡ ಫನ್ ರೀತಿಯಲ್ಲೇ ಮೂಡಿ ಬಂದಿದೆ ಅನ್ನೋದು ವಿಶೇಷ.
‘ಮೂರನೇ ಕೃಷ್ಣಪ್ಪ’ ಸಿನಿಮಾದಲ್ಲಿ ಸಂಪತ್ ಮೈತ್ರಿ, ರಂಗಾಯಣ ರಘು, ಶ್ರೀಪ್ರಿಯಾ, ತುಕಾಲಿ ಸಂತೋಷ್, ಉಗ್ರಂ ಮಂಜು ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಮೋಹನ್ ರೆಡ್ಡಿ ಹಾಗೂ ವೈ. ರವಿ ಶಂಕರ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಪ್ರಚಾರವನ್ನು ರಂಗಾಯಣ ರಘು ಮಾಡಿದ್ದಾರೆ.
ನಮ್ ‘ಮೂರನೇ ಕೃಷ್ಣಪ್ಪ’ದ ಈರಣ್ಣು ಅಭಿನಯಾಸುರ ರಂಗಾಯಣ ರಘು ಗ ಆನೇಕಲ್ ಕನ್ನಡ ಹೇಳ್ಕೊಡ್ತೌರೆ ನೋಡ್ರಪ್ಪೋ!! #MooraneKrishnappa#RedDragonFilms #NaveenReddy #RangayanaRaghu #SampathMaitreya #Sripriya #AarohiNarayan #MohanReddyG #Ravishankar #AnandRajavikram #SuprithSharma #Yogi #SrikanthEditor… pic.twitter.com/jPeKyFSzJW
— KRG Connects (@KRG_Connects) May 21, 2024
‘ಮೂರನೇ ಕೃಷ್ಣಪ್ಪ’ ಸಿನಿಮಾ ಆನೇಕಲ್ ಕನ್ನಡ ಶೈಲಿಯಲ್ಲಿ ಮೂಡಿ ಬಂದಿದೆ. ಆಡು ಭಾಷೆಯ ಕನ್ನಡಕ್ಕಿಂತ ಆನೇಕಲ್ ಕನ್ನಡ ಸಖತ್ ಭಿನ್ನವಾಗಿದೆ. ಒಂದು ಸರಳ ವಾಕ್ಯವನ್ನು ಹೇಳಿ ಅದನ್ನು ಆನೇಕಲ್ ಕನ್ನಡದಲ್ಲಿ ಹೇಳಿದ್ದಾರೆ ಅವರು. ‘ಮೂರನೇ ಕೃಷ್ಣಪ್ಪ’ ಸಿನಿಮಾ ಹಳ್ಳಿಯ ಸೊಗಡಿನಲ್ಲಿ ಮೂಡಿ ಬಂದಿದೆ. ಹಳ್ಳಿಯಲ್ಲಿ ನಡೆಯೋ ರಾಜಕೀಯದ ಬಗ್ಗೆ ಇದೆ. ಈ ಸಿನಿಮಾದಲ್ಲಿ ರಂಗಾಯಣ ರಘು ಅವರ ಕನ್ನಡ ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬಂದಿದೆ ಅನ್ನೋ ಕುತೂಹಲ ಅಭಿಮಾನಿಗಳಿಗೆ ಇದೆ.
ಇದನ್ನೂ ಓದಿ: ‘ಮೂರನೇ ಕೃಷ್ಣಪ್ಪ’ ಟ್ರೇಲರ್ನಲ್ಲಿ ರಂಗಾಯಣ ರಘು, ಸಂಪತ್, ಯೋಗಿ ಕಮಾಲ್
ರಂಗಾಯಣ ರಘು ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ. ಈ ಸಿನಿಮಾದಲ್ಲಿ ಅವರೇ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಬೆಂಗಳೂರಲ್ಲಿ ಈ ಚಿತ್ರಕ್ಕೆ 50ಕ್ಕೂ ಅಧಿಕ ಶೋಗಳು ಸಿಕ್ಕಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.