‘ಮೂರನೇ ಕೃಷ್ಣಪ್ಪ’ ಟ್ರೇಲರ್‌ನಲ್ಲಿ ರಂಗಾಯಣ ರಘು, ಸಂಪತ್, ಯೋಗಿ ಕಮಾಲ್
ಲೂಸ್ ಮಾದ ಯೋಗಿ ಅವರ ಹಿನ್ನೆಲೆ ಧ್ವನಿಯಲ್ಲಿ ‘ಮೂರನೇ ಕೃಷ್ಣಪ್ಪಲ’ ಟ್ರೇಲರ್ನ ಮೆರುಗು ಹೆಚ್ಚಿದೆ. ಈ ಸಿನಿಮಾದಲ್ಲಿ ರಂಗಾಯಣ ರಘು, ಸಂಪತ್ ಮೈತ್ರೇಯ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಮೇ 24ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು, ಈಗ ಟ್ರೇಲರ್ ಮೂಲಕ ಗಮನ ಸೆಳೆಯಲಾಗಿದೆ.
ನಟ ರಂಗಾಯಣ ರಘು (Rangayana Raghu), ಸಂಪತ್ ಮೈತ್ರೇಯ ಅವರು ಡಿಫರೆಂಟ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರಿಬ್ಬರು ನಟಿಸಿರುವ ‘ಮೂರನೇ ಕೃಷ್ಣಪ್ಪ’ (Sampath Maitreya) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ವಿಭಿನ್ನ ಕಥಾನಕ ಈ ಸಿನಿಮಾದಲ್ಲಿ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸಲಾಗಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾ ಟ್ರೇಲರ್ (Moorane Krishnappa Trailer) ಬಿಡುಗಡೆ ಮಾಡಲಾಗಿದೆ. ಆನಂದ್ ರಾಜವಿಕ್ರಮ್ ಅವರು ಸಂಗೀತ ನೀಡಿದ್ದಾರೆ. ಶ್ರೀಕಾಂತ್ ಅವರು ಸಂಕಲನ ಮಾಡಿದ್ದಾರೆ. ಯೋಗಿ ಅವರ ಛಾಯಾಗ್ರಹಣ ಇರುವ ಈ ಸಿನಿಮಾ ಮೇ 24ರಂದು ಬಿಡುಗಡೆ ಆಗಲಿದೆ.
ವಿಶೇಷ ಏನೆಂದರೆ, ‘ಮೂರನೇ ಕೃಷ್ಣಪ್ಪ’ ಟ್ರೇಲರ್‌ನಲ್ಲಿ ಲೂಸ್ ಮಾದ ಯೋಗಿ ಅವರ ಧ್ವನಿ ಹೈಲೈಟ್ ಆಗಿದೆ. ಅವರ ಸಂಭಾಷಣೆಯಿಂದಲೇ ಆರಂಭ ಆಗುವ ಟ್ರೇಲರ್‌ನಲ್ಲಿ ಕೋಲಾರ ಕನ್ನಡ ಗಮನ ಸೆಳೆದಿದೆ. ರಂಗಾಯಣ ರಘು, ಸಂಪತ್ ಮೈತ್ರಿಯಾ ಅವರಂತಹ ಪ್ರತಿಭಾವಂತ ಕಲಾವಿದರ ಅಭಿನಯದಿಂದ ಟ್ರೇಲರ್ ಆಕರ್ಷಕವಾಗಿದೆ. ಹಳ್ಳಿ ಸೊಗಡಿನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.
ಇದನ್ನೂ ಓದಿ: Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್; ರಂಗಾಯಣ ರಘು ಬೆಸ್ಟ್
ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಮನರಂಜನೆಯ ಜೊತೆ ಸಂದೇಶ ಕೂಡ ಇರಲಿದೆಯಂತೆ. ‘ಮೂರನೇ ಕೃಷ್ಣಪ್ಪ’ ಚಿತ್ರಕ್ಕೆ ನವೀನ್ ರೆಡ್ಡಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಭಿನ್ನ ಟೈಟಲ್ನೊಂದಿಗೆ ನಿರ್ದೇಶಕ ನವೀನ್ ಅವರು ಆರಂಭದಲ್ಲೇ ಕೌತುಕ ಮೂಡಿಸಿದ್ದಾರೆ. ‘ರೆಡ್ ಡ್ರ್ಯಾಗನ್ ಫಿಲ್ಮ್ಸ್’ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸಿದೆ. ಮೋಹನ್ ರೆಡ್ಡಿ ಜಿ, ರವಿಶಂಕರ್ ಅವರು ಬಂಡವಾಳ ಹೂಡಿದ್ದಾರೆ.
ಆನೇಕಲ್ ಭಾಗದ ಭಾಷೆಯ ಸೊಗಡನ್ನು ಇಟ್ಟುಕೊಂಡು ‘ಮೂರನೇ ಕೃಷ್ಣಪ್ಪ’ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ಅವರು ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ರಂಗಾಯಣ ರಘು ಅಭಿನಯಿಸಿದ್ದಾರೆ. ಶ್ರೀಪ್ರಿಯಾ ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ತುಕಾಲಿ ಸಂತೋಷ್, ಉಗ್ರಂ ಮಂಜು ಮುಂತಾದವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.