AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸವಣ್ಣನವರ ಕುರಿತ ‘ಶರಣರ ಶಕ್ತಿ’ ಸಿನಿಮಾದ ಹಾಡುಗಳ ಬಿಡುಗಡೆ

‘ಶರಣರ ಶಕ್ತಿ’ ಚಿತ್ರದಲ್ಲಿ ಬಸವಣ್ಣನ ಪಾತ್ರವನ್ನು ಮಂಜುನಾಥ ಗೌಡ ಪಾಟೀಲ್ ಅವರು ಮಾಡಿದ್ದಾರೆ. ನೀಲಾಂಬಿಕೆಯಾಗಿ ಸಂಗೀತಾ ಮಡ್ಲೂರು ನಟಿಸಿದ್ದಾರೆ. ಶೀಲವಂತನಾಗಿ ವಿಶ್ವರಾಜ್ ರಾಜ್‌ಗುರು ಅಭಿನಯಿಸಿದ್ದಾರೆ. ಈ ಸಿನಿಮಾದ ಹಾಡುಗಳು ಬಿಡುಗಡೆ ಆಗಿವೆ. ಆರಾಧನಾ ಕುಲಕರ್ಣಿ ಅವರು ನಿರ್ಮಾಣ ಮಾಡಿದ್ದು, ದಿಲೀಪ್​ ಶರ್ಮಾ ನಿರ್ದೇಶನ ಮಾಡಿದ್ದಾರೆ.

ಬಸವಣ್ಣನವರ ಕುರಿತ ‘ಶರಣರ ಶಕ್ತಿ’ ಸಿನಿಮಾದ ಹಾಡುಗಳ ಬಿಡುಗಡೆ
‘ಶರಣರ ಶಕ್ತಿ’ ಸಿನಿಮಾ ತಂಡ
ಮದನ್​ ಕುಮಾರ್​
|

Updated on: May 12, 2024 | 2:54 PM

Share

ಬಸವಣ್ಣನ (Basavanna) ವಚನಗಳು ಎಂದಿಗೂ ಪ್ರಸ್ತುತ. 12ನೇ ಶತಮಾನದಲ್ಲಿ ಶರಣರು, ಅನುಭವ ಮಂಟಪ ಹಾಗೂ ಬಸವಣ್ಣನವರ ವಿಚಾರಗಳು ಎಷ್ಟು ಆಕರ್ಷಕವಾಗಿತ್ತು ಎಂಬುದನ್ನು ಅಂಶಗಳನ್ನು ಸಂಶೋಧನೆ ಮಾಡಿ ‘ಶರಣರ ಶಕ್ತಿ’ (Sharanara Shakti) ಸಿನಿಮಾ ಮಾಡಲಾಗುತ್ತಿದೆ. ಈಗ ಈ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ‘ತಡಿವ್ಯರ ನೋಡು’ ಎನ್ನುವ ಅಡಿಬರಹವಿದೆ ಈ ಚಿತ್ರಕ್ಕಿದೆ. ಸಿನಿಮಾದ ಪ್ರಚಾರ ಕಾರ್ಯಕ್ಕೆ ಬಸವ ಜಯಂತಿ (Basava Jayanti) ಪ್ರಯುಕ್ತ ಚಾಲನೆ ನೀಡಲಾಗಿದೆ. ಅದ್ದೂರಿಯಾಗಿ ಹಾಡು ಬಿಡುಗಡೆ ಕಾರ್ಯಕ್ರಮ ಮಾಡಲಾಗಿದೆ. ಈ ಸಿನಿಮಾದ ಎಲ್ಲಾ ಕಲಾವಿದರು ಪಾತ್ರಗಳ ವೇಷದಲ್ಲೇ ವೇದಿಕೆಗೆ ಬಂದಿದ್ದು ವಿಶೇಷ.

‘ಶ್ರೀಷ ಫಿಲಂಸ್’ ಮೂಲಕ ಆರಾಧನಾ ಕುಲಕರ್ಣಿ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಲ್ಲದೇ, ಅಕ್ಕ ನಾಗಮ್ಮನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಡಾ. ರಾಜ್‌ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ದಿಲೀಪ್ ಶರ್ಮ ಅವರು ‘ಶರಣರ ಶಕ್ತಿ’ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಒಂದು ಪಾತ್ರ ಕೂಡ ಮಾಡಿದ್ದಾರೆ.

ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ಅನುಭವ ಮಂಟಪದ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ‘ಬಸವಣ್ಣ ಯಾಕೆ ಇಂದಿಗೂ ಪ್ರಸ್ತುತ ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅವರು ಹೆಸರು ಮಾಡಿದವರು. ಬಸವಣ್ಣ ಸಾರ್ವಕಾಲಿಕವಾದವರು. ಈ ಸಿನಿಮಾ ಎಲ್ಲರಿಗೂ ತಲುಪಲಿ’ ಎಂದು ಅವರು ಹೇಳಿದರು.

‘ಬಸವಣ್ಣನವರನ್ನು ಉತ್ತರ ಕರ್ನಾಟಕ ಭಾಗದವರು ಎಂಬುದು ಹೆಮ್ಮೆ. ಯಾಕೆ ಎಲ್ಲಾ ಶರಣರು ಅನುಭವ ಮಂಟಪಕ್ಕೆ ಬಂದರು? ಅಲ್ಲಿ ಮಹಾನ್ ಪುರುಷರ ಅವತಾರ ಹೇಗಿತ್ತು? ವಚನ ಸಾಹಿತ್ಯ, ಕಲ್ಯಾಣ ಕ್ರಾಂತಿ, ರಕ್ಷಣೆ ಮಾಡಲು ಹೇಗೆ ಹೋರಾಡಿದರು? ವಚನಗಳನ್ನು ಎಲ್ಲೆಲ್ಲಿ ಬಚ್ಚಿಟ್ಟರು? ಅದನ್ನು ಜನರಿಗೆ ಹೇಗೆ ಹರಡಿದರು? ತಳವಾರು ಕಾಮಿದೇವ ಶರಣರು ಕಲ್ಯಾಣಕ್ಕೆ ಯಾಕೆ ಬಂದರು? ಇಂತಹ ಹಲವು ವಿಷಯಗಳನ್ನು ಈ ಸಿನಿಮಾದಲ್ಲಿ ನೋಡಬಹುದು’ ಎಂದು ನಿರ್ದೇಶಕ ದಿಲೀಪ್​ ಶರ್ಮಾ ಹೇಳಿದರು.

ಇದನ್ನೂ ಓದಿ: ಬಸವ ಜಯಂತಿಯಂದು ಬಸವಣ್ಣನ ವಚನದ ಮೂಲಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್!

ಮಂಜುನಾಥ ಗೌಡ ಪಾಟೀಲ್ ಅವರು ಬಸವಣ್ಣನಾಗಿ ನಟಿಸಿದ್ದಾರೆ. ನೀಲಾಂಬಿಕೆಯಾಗಿ ಸಂಗೀತ ಮಡ್ಲೂರು ಅಭಿನಯಿಸಿದ್ದಾರೆ. ಶೀಲವಂತನ ಪಾತ್ರದಲ್ಲಿ ವಿಶ್ವರಾಜ್ ರಾಜ್‌ಗುರು, ಚನ್ನಬಸವಣ್ಣನಾಗಿ ಧ್ರುವಶರ್ಮ, ಉಳಿದ ಪಾತ್ರಗಳಲ್ಲಿ ರಮೇಶ್‌ ಪಂಡಿತ್, ವಿನೋದ್ ದಂಡಿನ, ಸಾಚಿ ಜೈನ್, ಅಬ್ದುಲ್‌ ಲತೀಫ್, ರಾಮಕೃಷ್ಣ ದೊಡ್ಡಮನಿ ಮುಂತಾದವರು ನಟಿಸಿದ್ದಾರೆ. ಉತ್ತರ ಕರ್ನಾಟದಕ 140 ರಂಗಭೂಮಿ ಕಲಾವಿದರಿಗೆ ಈ ಸಿನಿಮಾದಲ್ಲಿ ಚಾನ್ಸ್​ ಕೊಡಲಾಗಿದೆ.

‘ಶರಣರ ಶಕ್ತಿ’ ಸಿನಿಮಾಗೆ ಹುಬ್ಬಳ್ಳಿ ಸುತ್ತಮುತ್ತ 40 ದಿನಗಳ ಚಿತ್ರೀಕರಣ ನಡೆದಿದೆ. Hoptil Music ಮೂಲಕ ಹಾಡುಗಳು ಲಭ್ಯವಾಗಿವೆ. ವಿನು ಮನಸು ಅವರು ಸಂಗೀತ ನೀಡಿದ್ದಾರೆ. ಮಂಜು ಅವರು ಛಾಯಾಗ್ರಹಣ ಮಾಡಿದ್ದಾರೆ. ಮಹಾಂತೇಶ್ ಆರ್. ಸಂಕಲನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.