AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಂದರ್ಯಾ ಜಗದೀಶ್​ ಡೆತ್​ ನೋಟ್​ ಪತ್ತೆ; ಶಾಕಿಂಗ್​ ವಿಷಯ ತಿಳಿಸಿದ ಪತ್ನಿ ರೇಖಾ

‘ಯಜಮಾನರು ಹೊರಟು ಹೋಗಿದ್ದಾರೆ. ಆ ನೋವು ನಮಗೆ ಕಡೆಯ ತನಕ ಇದ್ದೇ ಇರುತ್ತದೆ. ಕೊನೇ ಪಕ್ಷ ಅವರ ಸಾವಿಗೆ ನ್ಯಾಯ ಸಿಕ್ಕರೆ ಅವರ ಮನಸ್ಸಿಗೆ ಸಮಾಧಾನ ಆಗುತ್ತೆ ಅಂತ ನಾವು ಅಂದುಕೊಂಡಿದ್ದೇವೆ. ತನಿಖೆಗೆ ಎಲ್ಲ ದಾಖಲೆಗಳನ್ನು ಕೊಟ್ಟಿದ್ದೇನೆ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ’ ಎಂದು ಸೌಂದರ್ಯಾ ಜಗದೀಶ್​ ಅವರ ಪತ್ನಿ ರೇಖಾ ಕಣ್ಣೀರು ಹಾಕಿದ್ದಾರೆ.

ಸೌಂದರ್ಯಾ ಜಗದೀಶ್​ ಡೆತ್​ ನೋಟ್​ ಪತ್ತೆ; ಶಾಕಿಂಗ್​ ವಿಷಯ ತಿಳಿಸಿದ ಪತ್ನಿ ರೇಖಾ
ರೇಖಾ ಜಗದೀಶ್​
ಮದನ್​ ಕುಮಾರ್​
|

Updated on: May 24, 2024 | 6:29 PM

Share

ನಿರ್ಮಾಪಕ ಸೌಂದರ್ಯಾ ಜಗದೀಶ್ (Soundarya Jagadeesh) ಅವರು ಏಪ್ರಿಲ್​ 14ರಂದು ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಈಗ ಅವರ ಸಾವಿನ ಬಗ್ಗೆ ಪತ್ನಿ ರೇಖಾ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡೆತ್​ ನೋಟ್ (Soundarya Jagadeesh Death Note)​ ಬಗ್ಗೆ ವಿಷಯ ತಿಳಿಸಿದ್ದಾರೆ. ‘ಮೊದಲು ತಾಯಿ ನಿಧನರಾದರು. ಆಮೇಲೆ 15 ದಿನಕ್ಕೆ ಯಜಮಾನರು ತೀರಿಕೊಂಡರು. ಆ ಶಾಕ್​ನಲ್ಲಿ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ. ಈ ಮನೆಯನ್ನು ನಾನು ಮತ್ತು ಅವರು ಸೇರಿ ಕಟ್ಟಿದ್ದು. ಇಂದು ಅವರು ಇಲ್ಲ ಎಂದಾಗ ಈ ಮನೆಯಲ್ಲಿ ನಮಗೆ ಇರೋಕೆ ಆಗುತ್ತಿಲ್ಲ. ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯುವಾಗ ಡೆಟ್​ ನೋಟ್​ ಸಿಕ್ಕಿತು’ ಎಂದು ರೇಖಾ ಜಗದೀಶ್​ (Rekha Jagadeesh) ಹೇಳಿದ್ದಾರೆ.

‘ಜಗದೀಶ್​ ಬರೆದ ಡೆತ್​ ನೋಟ್​ ನೋಡಿ ತುಂಬ ನೋವಾಯಿತು ಮತ್ತು ಶಾಕ್​ ಆಯ್ತು. ಬಿಸ್ನೆಸ್​ ಪಾರ್ಟ್ನರ್​ಗಳ ಬಗ್ಗೆ ಅವರು ಬರೆದಿದ್ದಾರೆ. ಅನ್ಯಾಯ ಆಗಿದೆ ಅಂತ ಬರೆದಿದ್ದಾರೆ. ತಮಗೆ ತುಂಬ ಕಾಟ, ಕಿರುಕುಳು ಕೊಡುತ್ತಾರೆ ಅಂತ ಈ ಮೊದಲು ಒಮ್ಮೆ ನನ್ನ ಬಳಿ ಹೇಳಿದ್ದರು. ಆದರೆ ಈ ಮಟ್ಟಕ್ಕೆ ಆಗುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಏನೇ ಇದ್ದರೂ ನಮ್ಮ ಜೊತೆ ಹಂಚಿಕೊಳ್ಳಿ ಅಂತ ಧೈರ್ಯ ತುಂಬಿದ್ದೆವು. ಪಾರ್ಟ್ನರ್​ ಸುರೇಶ್​ ಅವರಿಂದ ತುಂಬ ಕಿರುಕುಳ ಆಗಿದೆ’ ಎಂದಿದ್ದಾರೆ ರೇಖಾ ಜಗದೀಶ್​.

ಇದನ್ನೂ ಓದಿ: ಜೆಟ್​ಲ್ಯಾಗ್ ಮಾರಲು ಮುಂದಾಗಿದ್ದ ಸೌಂದರ್ಯ ಜಗದೀಶ್? ಮಾಡಿಕೊಂಡ ಲಾಸ್ ಅಷ್ಟಿಷ್ಟಲ್ಲ

‘ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ. ಅಷ್ಟು ಗಟ್ಟಿಯಾಗಿ ಹುಲಿ ರೀತಿ ಇದ್ದ ಅವರನ್ನು ಕೊನೆಕೊನೆಗೆ ಇಷ್ಟು ಸೈಲೆಂಟ್​ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವನು ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾನೋ ಗೊತ್ತಿಲ್ಲ. ನನಗೆ ಆ ಭಯ ಇದೆ. ಅವರು ಬರೆದಿದ್ದನ್ನೆಲ್ಲ ನಾನು ವೀಕ್ಷಿಸಿದ ಮೇಲೆ ಪಾರ್ಟ್ನರ್​ಗಳಿಂದ ನನ್ನ ಗಂಡನಿಗೆ ತುಂಬಾ ಕಿರುಕುಳ ಆಗಿದೆ. ಫೋರ್ಚರಿ ಕೂಡ ಮಾಡಿದ್ದಾರೆ’ ಎಂದು ರೇಖಾ ಜಗದೀಶ್​ ಅಳಲು ತೋಡಿಕೊಂಡಿದ್ದಾರೆ.

‘ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಚೆಕ್​ಗಳಿಗೆ ಸೈನ್​ ಹಾಕಿಸಿಕೊಂಡಿದ್ದಾರೆ. ಹೀಗೆಲ್ಲ ಬ್ಲ್ಯಾಕ್​ ಮೇಲ್​ ಮಾಡಿದ್ದಕ್ಕೆ ನಮ್ಮ ಯಜಮಾನರು ಹೋಗಿದ್ದಾರೆ. ನಾವು ನಾಲ್ಕು ಜನ ಒಂದೇ ಗೋಡಿನ ಹಕ್ಕಿಗಳ ರೀತಿ ಇದ್ದೆವು. ನಮ್ಮನ್ನು ಬಿಟ್ಟು ಅವರು ಹೋಗುತ್ತಿರಲಿಲ್ಲ. ಸುರೇಶ್​ ಇದೆಲ್ಲವನ್ನೂ ಮಾಡಿದ್ದಾರೆ. ಅಕೌಂಟ್​ ಪಾಸ್​ವರ್ಡ್​ ಕೂಡ ಅವರೇ ಇಟ್ಟುಕೊಂಡು ಹೀಗೆಲ್ಲ ಮಾಡಿದರು. ನಮ್ಮ ಮನೆಯನ್ನು ಈ ಸ್ಥಿತಿಗೆ ತಂದು ಬಿಟ್ಟಿದ್ದಾರೆ. ಲಾಸ್ಟ್​ ಕಾಲ್​, ಮೆಸೇಜ್​ ಅವರದ್ದೇ ಇದೆ. ಫೋರ್ಜರಿ ಮಾಡಿದ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ. ತನಿಖೆ ಬಳಿಕ ಎಲ್ಲವೂ ನಿಮಗೆ ಗೊತ್ತಾಗುತ್ತದೆ’ ಎಂದು ರೇಖಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್