ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಬಗ್ಗೆ ಹುಟ್ಟಿಕೊಂಡ ಟ್ರೋಲ್ಗಳು ಒಂದೆರಡಲ್ಲ. ಒಂದಿಲ್ಲೊಂದು ವಿಚಾರಕ್ಕೆ ಅವರನ್ನು ಟ್ರೋಲ್ ಮಾಡಲಾಗುತ್ತದೆ. ಅದೇ ರೀತಿ ರಶ್ಮಿಕಾ ಮಂದಣ್ಣ ಅವರು ಒಳ್ಳೆಯ ಕೆಲಸಗಳಿಂದಲೂ ಸುದ್ದಿ ಆಗುತ್ತಾರೆ. ಅಭಿಮಾನಿಗಳು ಸೆಲ್ಫಿ ಕೇಳೋಕೆ ಬಂದರೆ ಅವರು ಬೇಸರ ಮಾಡಿಕೊಳ್ಳುವುದಿಲ್ಲ. ಅಭಿಮಾನಿಗಳು ತಳ್ಳಾಡಿದರೂ ಕೋಪ ಮಾಡಿಕೊಳ್ಳುವುದಿಲ್ಲ. ರಶ್ಮಿಕಾ ಮಂದಣ್ಣ ಅವರು ಸಹಾಯಕ ಸಾಯಿ ಅವರ ಮದುವೆಗೆ ಹಾಜರಿ ಹಾಕಿದ್ದಾರೆ. ಈ ಮದುವೆಯಲ್ಲಿ ಅವರೇ ಕೇಂದ್ರ ಬಿಂದು ಆಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಅವರು ತಮ್ಮ ತಂಡದ ಸದಸ್ಯರನ್ನು ಕುಟುಂಬದವರಂತೆ ಟ್ರೀಟ್ ಮಾಡುತ್ತಾರೆ. ಈ ಕಾರಣದಿಂದಲೇ ಟೀಂನವರಿಗೆ ರಶ್ಮಿಕಾ ಮಂದಣ್ಣ ಅವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ರಶ್ಮಿಕಾ ಸಹಾಯಕರಾದ ಸಾಯಿ ಎಂಬುವವರು ಇತ್ತೀಚೆಗೆ ಮದುವೆ ಆಗಿದ್ದಾರೆ. ಹೈದರಾಬಾದ್ನಲ್ಲಿ ಈ ಮದುವೆ ನಡೆದಿದೆ. ರಶ್ಮಿಕಾ ಮಂದಣ್ಣ ಅವರಿಗೂ ಮದುವೆಗೆ ಆಹ್ವಾನ ಇತ್ತು. ಅವರು ಕೂಡ ವಿವಾಹ ಸಮಾರಂಭಕ್ಕೆ ಹೋಗಿದ್ದಾರೆ.
ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿ ಇದ್ದಾರೆ. ಆದಾಗ್ಯೂ ಸಾಯಿಗೋಸ್ಕರ ಬಿಡುವು ಮಾಡಿಕೊಂಡು ಮದುವೆಗೆ ಹಾಜರಿ ಹಾಕಿದ್ದಾರೆ. ನವದಂಪತಿ ಆಶೀರ್ವಾದ ಪಡೆಯಲು ರಶ್ಮಿಕಾ ಮಂದಣ್ಣ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣಗೆ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ. ಸಾಯಿ ಹಾಗೂ ಅವರ ಪತ್ನಿ ಕಾಲಿಗೆ ನಮಿಸಿದ್ದನ್ನು ನೋಡಿ ರಶ್ಮಿಕಾಗೆ ನಾಚಿಕೆ ಆಗಿದೆ.
Rushie today at Hyderabad, as she attends her Assistant Sai Babu’s wedding !! How Innocent She is… 🥺🩷#RashmikaMandanna @iamRashmikapic.twitter.com/kkDManWzBr
— Roвιɴ Roвerт (@PeaceBrwVJ) September 3, 2023
ಇದನ್ನೂ ಓದಿ: ‘ಇದುವೇ ಕರ್ಮ?’; ಬಾಲಿವುಡ್ ಕಡೆ ಒಲವು ತೋರಿಸಿದ ರಶ್ಮಿಕಾ ಮಂದಣ್ಣಗೆ ಉಂಟಾಯ್ತು ಹಿನ್ನಡೆ
ರಶ್ಮಿಕಾ ಮಂದಣ್ಣ ಅವರು ಹಿಂದಿಯ ‘ಅನಿಮಲ್’ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಡಿಸೆಂಬರ್ 1ರಂದು ಸಿನಿಮಾ ರಿಲೀಸ್ ಆಗಲಿದೆ. ‘ಪುಷ್ಪ 2’ ಚಿತ್ರದ ಕೆಲಸದಲ್ಲೂ ಅವರು ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ‘ಪುಷ್ಪ 2’ ಅಪ್ಡೇಟ್ಗಾಗಿ ಫ್ಯಾನ್ಸ್ ಕಾದಿದ್ದಾರೆ. ತೆಲುಗಿನಲ್ಲಿ ನಿತಿನ್ ನಟಿಸುತ್ತಿರುವ ಚಿತ್ರದಿಂದ ರಶ್ಮಿಕಾ ಹೊರ ನಡೆದಿದ್ದಾರೆ. ಹಿಂದಿಯಲ್ಲಿ ಅವರು ಶಾಹಿದ್ ಕಪೂರ್ ಜೊತೆ ಸಿನಿಮಾ ಒಂದನ್ನು ಮಾಡಬೇಕಿತ್ತು. ಆದರೆ, ಬಜೆಟ್ ಹೊಂದಾಣಿಕೆ ಆಗದ ಕಾರಣ ಈ ಚಿತ್ರ ಸೆಟ್ಟೇರುತ್ತಿಲ್ಲ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ