Rashmika Mandanna: ರಶ್ಮಿಕಾ ಮಂದಣ್ಣ ಪಾಲಿಗೆ ಮತ್ತೊಂದು ಅದೃಷ್ಟ! ಆದರೆ ಚಿತ್ರರಂಗದಿಂದ ಅಲ್ಲ

ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಬೇರೆ ಬೇರೆ ಬ್ರ್ಯಾಂಡ್​ಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ರಶ್ಮಿಕಾ ಕೂಡ ಖ್ಯಾತ ಕಂಪೆನಿಯ ರಾಯಭಾರಿ ಆಗಿದ್ದಾರೆ.

Rashmika Mandanna: ರಶ್ಮಿಕಾ ಮಂದಣ್ಣ ಪಾಲಿಗೆ ಮತ್ತೊಂದು ಅದೃಷ್ಟ! ಆದರೆ ಚಿತ್ರರಂಗದಿಂದ ಅಲ್ಲ
ರಶ್ಮಿಕಾ ಮಂದಣ್ಣ

Updated on: Apr 16, 2021 | 8:46 PM

ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಹಾಗೂ ಬಾಲಿವುಡ್​​ ಎರಡಲ್ಲೂ ಬ್ಯುಸಿಯಾಗಿದ್ದಾರೆ. ಅವರ ಕಾಲ್​ಶೀಟ್​ ಪಡೆಯೋಕೆ ಅನೇಕ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಅವರಿಗೆ ಮತ್ತೊಂದು ದೊಡ್ಡ ಅದೃಷ್ಟ ಒಲಿದು ಬಂದಿದೆ. ಹಾಗಂತ ಇದು ಸಿನಿಮಾ ಕ್ಷೇತ್ರದಿಂದ ಅಲ್ಲ.

ಫಾಸ್ಟ್​ ಫುಡ್​ ತಯಾರಿಕಾ ಕಂಪೆನಿ ​ ರಶ್ಮಿಕಾ ಮಂದಣ್ಣ ಅವರನ್ನು ದಕ್ಷಿಣ ಹಾಗೂ ಪಶ್ಚಿಮ ಭಾರತದ ರಾಯಭಾರಿಯಾಗಿ ನೇಮಕ ಮಾಡಿದೆ. ರಶ್ಮಿಕಾ ಮಂದಣ್ಣ ಸ್ಯಾಂಡಲ್​ವುಡ್, ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಹೀಗಾಗಿ, ಅವರನ್ನು ದಕ್ಷಿಣ ಭಾರತದ ಅಂಬಾಸಿಡರ್​ ಆಗಿ ನೇಮಕ ಮಾಡಿದರೆ ಮೆಕ್​ಡೊನಾಲ್ಡ್​​​​ ಬ್ರ್ಯಾಂಡ್​ಗೆ ಮತ್ತಷ್ಟು ಮೈಲೇಜ್​ ಸಿಕ್ಕಂತಾಗುತ್ತದೆ ಎಂಬುದು ಕಂಪೆನಿಯ ಆಲೋಚನೆ. ಈ ದೃಷ್ಟಿಯಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಬೇರೆ ಬೇರೆ ಬ್ರ್ಯಾಂಡ್​ಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ರಶ್ಮಿಕಾ ಕೂಡ ಖ್ಯಾತ ಕಂಪೆನಿಯ ರಾಯಭಾರಿ ಆಗಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕಮರ್ಷಿಯಲ್​ ಕ್ಷೇತ್ರದಿಂದ ಅವರಿಗೆ ಮತ್ತಷ್ಟು ಆಫರ್​ಗಳು ಬಂದರೂ ಅಚ್ಚರಿ ಇಲ್ಲ.

ಸದ್ಯ, ರಶ್ಮಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಬಾಲಿವುಡ್​ ಸಿನಿಮಾ ಮಿಷನ್​ ಮಜ್ನು ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್​ ಮಲ್ಹೋತ್ರಗೆ ಜೋಡಿ ಆಗಿದ್ದಾರೆ. ಗುಡ್​ಬಯ್​ ರಶ್ಮಿಕಾ ಅವರ ಎರಡನೇ ಹಿಂದಿ ಸಿನಿಮಾ. ವಿಕಾಸ್​  ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟ ಅಲ್ಲು ಅರ್ಜುನ್​ ಹಾಗೂ ನಿರ್ದೇಶಕ ಸುಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಪುಷ್ಪ ಚಿತ್ರಕ್ಕೂ ರಶ್ಮಿಕಾ ನಾಯಕಿ.

ಇದನ್ನೂ ಓದಿ:  Rashmika Mandanna: ನನ್ನ ಅಪ್ಪ-ಅಮ್ಮನಿಗೂ ಇದನ್ನು ನಂಬಲಾಗಲಿಲ್ಲ; ಹಳೆ ನೆನಪು ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us