
ರಶ್ಮಿಕಾ ಮಂದಣ್ಣ (Rashmika Mandanna) ಪ್ರಸ್ತುತ ಭಾರತೀಯ ಚಿತ್ರರಂಗದಲ್ಲೇ ಬಲು ಯಶಸ್ವಿ ನಟಿ. ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಸಾಲಾಗಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಬಳಿಕ ‘ಕುಬೇರ’ ಇತ್ತೀಚೆಗೆ ಬಿಡುಗಡೆ ಆದ ‘ಥಾಮ’ ಸಿನಿಮಾಗಳು ಸಹ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗಳಿಕೆ ಮಾಡುತ್ತಿವೆ. ಇದರ ನಡುವೆ ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಿಶ್ಚಿತಾರ್ಥ ನಡೆದಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಶೀಘ್ರದಲ್ಲೇ ಈ ಜೋಡಿ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ರಶ್ಮಿಕಾ ಮಂದಣ್ಣ ತಾಯಿ ಆಗುವ ಬಗ್ಗೆ ಮಾತನಾಡಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ತೆಲುಗು ಸಿನಿಮಾ ‘ಗರ್ಲ್ಫ್ರೆಂಡ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ. ಇದೀಗ ಸಿನಿಮಾದ ಪ್ರಚಾರ ಪ್ರಾರಂಭ ಮಾಡಲಾಗಿದ್ದು, ರಶ್ಮಿಕಾ, ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಈ ಸಂದರ್ಶನದಲ್ಲಿ ರಶ್ಮಿಕಾ ಜೊತೆಗೆ ಸಿನಿಮಾದ ನಿರ್ದೇಶಕ ರಾಹುಲ್ ಸಹ ಭಾಗಿ ಆಗಿದ್ದರು. ಸಂದರ್ಶನದಲ್ಲಿ ಆರೋಗ್ಯ, ಕೆಲಸದ ಒತ್ತಡ ಇನ್ನಿತರೆ ವಿಷಯಗಳ ಬಗ್ಗೆ ರಶ್ಮಿಕಾ ಮಾತನಾಡಿದರು.
ನಿರ್ದೇಶಕ ರಾಹುಲ್ ತಮ್ಮ ಮಕ್ಕಳ ಬಗ್ಗೆ ಸಂದರ್ಶನದಲ್ಲಿ ಚುಟುಕಾಗಿ ಮಾತನಾಡಿದರು. ಮಕ್ಕಳು ಬೆಳೆದು ದೊಡ್ಡವರಾಗುವವರೆಗೆ ನಾನು ಆರೋಗ್ಯದಿಂದ ಇರಬೇಕು ಎಂದುಕೊಂಡಿದ್ದೇನೆ ಎಂದರು. ಅದೇ ಮಾತನ್ನು ಮುಂದುವರೆಸಿದ ನಟಿ ರಶ್ಮಿಕಾ, ‘ನಾನು ತಾಯ್ತನದ ಬಗ್ಗೆ ಬಹಳ ಆಸೆಗಳನ್ನು, ಕನಸುಗಳನ್ನು ಇರಿಸಿಕೊಂಡಿದ್ದೇನೆ. ನನ್ನಲ್ಲಿ ಈಗಲೇ ತಾಯ್ತನ ಇದೆ ಎಂದೇ ನಾನು ಭಾವಿಸುತ್ತೇನೆ. ಇನ್ನೂ ಹುಟ್ಟದೇ ಇರುವ ಆ ಪುಟ್ಟ ಜೀವಗಳ ಬಗ್ಗೆ ಈಗಲೇ ನನಗೆ ಪ್ರೀತಿ ಇದೆ. ಒಂದು ದಿನ ನಾನು ತಾಯಿ ಆಗುತ್ತೇನೆ, ಆ ದಿನಕ್ಕೆ ನಾನು ಸಹ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ ರಶ್ಮಿಕಾ.
ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥವಾದ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ
‘ನಾನು ಖಂಡಿತ ಮಕ್ಕಳನ್ನು ಹೊಂದುತ್ತೇನೆ. ಅವರನ್ನು ನಾನು ಕಾಪಾಡುತ್ತೇನೆ. ಅವರಿಗಾಗಿ ನಾನು ಯುದ್ಧಕ್ಕೆ ಬೇಕಾದರೂ ಹೋಗುತ್ತೇನೆ. ಅವರಿಗಾಗಿ ನಾನು ಇನ್ನಷ್ಟು ಫಿಟ್ ಆಗುತ್ತೇನೆ. ಅವರಿಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ’ ಎಂದಿದ್ದಾರೆ ರಶ್ಮಿಕಾ. ಒಟ್ಟಾರೆ, ತಾವು ತಾಯಿ ಆಗುವುದನ್ನು ಕಾಯುತ್ತಿರುವುದಾಗಿ ರಶ್ಮಿಕಾ ಹೇಳಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಯಲ್ಲಿದ್ದು, ಇಬ್ಬರೂ ಸಹ ಶೀಘ್ರವೇ ವಿವಾಹ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಿಶ್ಚಿತಾರ್ಥ ಸಹ ಇತ್ತೀಚೆಗಷ್ಟೆ ನೆರವೇರಿದೆ ಎನ್ನಲಾಗುತ್ತಿದೆ. ಆದರೆ ಈ ವಿಷಯವನ್ನು ಇಬ್ಬರೂ ಸಹ ಗುಟ್ಟಾಗಿ ಇರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Tue, 28 October 25