ರವಿಚಂದ್ರನ್​ ಜನ್ಮದಿನಕ್ಕೆ ‘ಕನ್ನಡಿಗ’ ಟೀಸರ್​; ಹೇಗಿರಲಿದೆ ಗುಣಭದ್ರನ ಝಲಕ್?​

Ravichandran Birthday: ಕನ್ನಡಿಗ ಸಿನಿಮಾದಲ್ಲಿ ರವಿಚಂದ್ರನ್​ ಅವರಿಗೆ ಎರಡು ಗೆಟಪ್​ ಇರಲಿದೆ. ಆ ಪೈಕಿ ಗುಣಭದ್ರನ ಗೆಟಪ್​ನ ಝಲಕ್​ ತೋರಿಸಲು ಮೊದಲ ಟೀಸರ್​ ಭಾನುವಾರ (ಮೇ 30) ಬಿಡುಗಡೆ ಆಗುತ್ತಿದೆ.

ರವಿಚಂದ್ರನ್​ ಜನ್ಮದಿನಕ್ಕೆ ‘ಕನ್ನಡಿಗ’ ಟೀಸರ್​; ಹೇಗಿರಲಿದೆ ಗುಣಭದ್ರನ ಝಲಕ್?​
ಕನ್ನಡಿಗ ಸಿನಿಮಾದಲ್ಲಿ ರವಿಚಂದ್ರನ್​

Updated on: May 29, 2021 | 1:27 PM

ಚಿತ್ರರಂಗದಲ್ಲಿ ರವಿಚಂದ್ರನ್​ ಅವರ ಅನುಭವ ಅಪಾರ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅವರು ನೂರಾರು ಬಗೆಯ ಪಾತ್ರಗಳನ್ನು ಮಾಡಿದ್ದಾರೆ. ಅವೆಲ್ಲಕ್ಕಿಂತಲೂ ಭಿನ್ನವಾದ ಪಾತ್ರವನ್ನು ‘ಕನ್ನಡಿಗ’ ಚಿತ್ರದಲ್ಲಿ ಅವರು ನಿಭಾಯಿಸಿದ್ದಾರೆ. ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ರವಿಚಂದ್ರನ್​ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗಿರಿರಾಜ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಕ್ರೇಜಿಸ್ಟಾರ್​ ಜನ್ಮದಿನದ ಪ್ರಯುಕ್ತ ಮೇ 30ರಂದು ‘ಕನ್ನಡಿಗ’ ಸಿನಿಮಾದ ಮೊದಲ ಟೀಸರ್​ ಬಿಡುಗಡೆ ಆಗಲಿದೆ. ರವಿಮಾಮನ ಜನ್ಮದಿನಕ್ಕೆ ಅಭಿಮಾನಿಗಳಿಗೆ ಈ ಮೂಲಕ ಉಡುಗೊರೆ ಸಿಗುತ್ತಿದೆ.

ಈ ಸಿನಿಮಾದಲ್ಲಿ ರವಿಚಂದ್ರನ್​ ಅವರಿಗೆ ಎರಡು ಗೆಟಪ್​ ಇರಲಿದೆ. ಆ ಪೈಕಿ ಗುಣಭದ್ರನ ಗೆಟಪ್​ನ ಝಲಕ್​ ತೋರಿಸಲು ಮೊದಲ ಟೀಸರ್​ ಭಾನುವಾರ (ಮೇ 30) ಬಿಡುಗಡೆ ಆಗುತ್ತಿದೆ. ಈ ಟೀಸರ್​ ಮೂಲಕ ‘ಕನ್ನಡಿಗ’ ಚಿತ್ರತಂಡ ರವಿಚಂದ್ರನ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಿದೆ. ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಟೀಸರ್​ ಹೊರಬರಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಇಷ್ಟುಹೊತ್ತಿಗೆ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ವೈರಸ್​ ಲಾಕ್​ಡೌನ್​ ಕಾರಣಕ್ಕೆ ರಿಲೀಸ್​ ತಡವಾಗುತ್ತಿದೆ.

2020ರಲ್ಲಿ ಲಾಕ್​ಡೌನ್​ ಸಡಿಲಿಕೆ ಆದ ಬಳಿಕ ‘ಕನ್ನಡಿಗ’ ಸಿನಿಮಾದ ಶೂಟಿಂಗ್​ ಆರಂಭ ಆಗಿತ್ತು. ಪ್ಲ್ಯಾನ್​ ಪ್ರಕಾರವೇ ವೇಗವಾಗಿ ಚಿತ್ರದ ಕೆಲಸಗಳನ್ನು ಮುಗಿಸಿಕೊಂಡು ಸೆನ್ಸಾರ್​ ಪ್ರಮಾಣಪತ್ರವನ್ನೂ ಕಳೆದ ಡಿಸೆಂಬರ್​ ವೇಳೆಗೆ ಪಡೆದುಕೊಳ್ಳಲಾಗಿತ್ತು. ಇನ್ನೇನು ರಿಲೀಸ್​ ಬಗ್ಗೆ ಆಲೋಚನೆ​ ಮಾಡಬೇಕು ಎಂಬಷ್ಟರಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಆರಂಭ ಆಯಿತು. ಈಗ ಮತ್ತೆ ಎಲ್ಲ ಕಡೆ ಲಾಕ್​ಡೌನ್​ ಜಾರಿಯಲ್ಲಿದೆ.

‘ಸದ್ಯಕ್ಕಂತೂ ನಾವು ಓಟಿಟಿ ರಿಲೀಸ್​ ಬಗ್ಗೆ ಆಲೋಚನೆ ಮಾಡಿಲ್ಲ. ಈ ಸಿನಿಮಾ ತಯಾರಾಗಿರುವುದೇ ದೊಡ್ಡ ಪರದೆಯ ಅನುಭವಕ್ಕಾಗಿ. ಮುಂದೆ ಲಾಕ್​ಡೌನ್​ ಸಡಿಲಿಕೆ ಆಗಿ ಸರ್ಕಾರ ಯಾವ ರೀತಿಯ ನಿಯಮಗಳನ್ನು ಜಾರಿ ಮಾಡಲಿದೆ ಎಂಬುದನ್ನು ನೋಡಿಕೊಂಡು ರಿಲೀಸ್​ ಪ್ಲ್ಯಾನ್​ ಮಾಡಬೇಕಿದೆ’ ಎಂದಿದ್ದಾರೆ ನಿರ್ದೇಶಕ ಗಿರಿರಾಜ್​. ಈ ಸಿನಿಮಾದಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಅವರು ಒಂದು ಹಾಡನ್ನು ಹಾಡಿದ್ದಾರೆ. ಅದರ ಚಿತ್ರೀಕರಣ ಬಾಕಿ ಇದೆ.

ಇದನ್ನೂ ಓದಿ:

‘ದೃಶ್ಯ 2’ ಮಾಡೋಕೆ ರವಿಚಂದ್ರನ್​ ರೆಡಿ! ಯುಗಾದಿ ಹಬ್ಬದ ದಿನವೇ ‘ಕ್ರೇಜಿ ಸ್ಟಾರ್​’ ಅಭಿಮಾನಿಗಳಿಗೆ ಸಿಹಿ ಸುದ್ದಿ

Ravichandran: ರವಿಚಂದ್ರನ್​ ಸಿಗರೇಟ್​ ಸೇದ್ತಾರಾ? ಸೋಶಿಯಲ್​ ಮೀಡಿಯಾಗೆ ಬಂದು ಸತ್ಯ ಬಹಿರಂಗಪಡಿಸಿದ ಕ್ರೇಜಿ ಸ್ಟಾರ್​!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us