ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ನಾಗ್ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನಂತ್ ನಾಗ್ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ಆ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಇದೀಗ ಕನ್ನಡ ಸಿನಿಮಾ ರಂಗದ ಪ್ರಮುಖ ನಟರು ಸೇರಿದಂತೆ ಹಲವಾರು ಮಂದಿ ಸೆಲೆಬ್ರಿಟಿಗಳು ಅನಂತ್ ನಾಗ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅನಂತ್ ನಾಗ್ ಅವರಿಗೆ ಯಾರ ಹೇಗೆ ಅಭಿನಂದಿಸಿದ್ದಾರೆ, ಇಲ್ಲಿದೆ ಮಾಹಿತಿ.
ಅನಂತ್ ನಾಗ್ ಅವರೊಟ್ಟಿಗಿನ ಚಿತ್ರ ಹಂಚಿಕೊಂಡು ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ‘ನನ್ನ ಸ್ಪೂರ್ತಿಯಾಗಿರುವ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ದೊರೆತಿದ್ದಕ್ಕೆ ಅಭಿನಂದನೆಗಳು. ಚಿತ್ರರಂಗಕ್ಕೆ ಹಾಗೂ ನಾಟಕ ರಂಗಕ್ಕೆ ನಿಮ್ಮ ಸೇವೆ ತಲೆಮಾರುಗಳಿಗೆ ಸ್ಪೂರ್ತಿ ತುಂಬಿದೆ. ಸರಳತೆಯಲ್ಲಿ ಸಾಧಕತೆ ಅಡಗಿದೆ ಎಂದು ತೋರಿಸಿದ್ದಕ್ಕೆ ಧನ್ಯವಾದಗಳು. ಕನ್ನಡ ಚಿತ್ರರಂಗದ ರತ್ನ, ನಮ್ಮೆಲ್ಲರ ಪ್ರಿಯ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ ಸುದ್ದಿ ಕೇಳಿ ಅಪಾರ ಸಂತೋಷವಾಯಿತು. ನಿಮ್ಮ ಕಲಾ ಸಾಧನೆ ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿದೆ. ನಿಮ್ಮ ಈ ಸಾಧನೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು’ ಎಂದಿದ್ದಾರೆ.
ಇದನ್ನೂ ಓದಿ:ನಟ ಅನಂತ್ ನಾಗ್ ಮುಡಿಗೆ ಪದ್ಮಭೂಷಣ ಪ್ರಶಸ್ತಿ
ಅನಂತ್ ನಾಗ್ ಅವರಿಗೆ ಒಂದೇ ರೀತಿಯ ಗಂಭೀರ ಪಾತ್ರಗಳನ್ನೇ ನಿರ್ದೇಶಕರುಗಳು ನೀಡುತ್ತಿದ್ದ ಸಮಯದಲ್ಲಿ ರಿಷಬ್ ಶೆಟ್ಟಿ ಅನಂತ್ ನಾಗ್ ಅವರನ್ನು ಭಿನ್ನವಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪಾಠ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅನಂತ್ ನಾಗ್ ಅವರಿಗೆ ಭಿನ್ನವಾದ ಪಾತ್ರವನ್ನು ನೀಡಿದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅನಂತ್ ನಾಗ್ ಅವರನ್ನು ಭಿನ್ನ ರೀತಿಯಲ್ಲಿ ರಿಷಬ್ ಆ ಸಿನಿಮಾದಲ್ಲಿ ತೋರಿಸಿದ್ದರು.
Heartfelt congratulations to my inspiration, Shri Ananth Nag Sir, on receiving the Padma Bhushan Award.
Your contributions to cinema and theater have shaped generations and inspired countless artists.
Thank you for showing us that greatness lies in simplicity and passion.… pic.twitter.com/QLiz08AW2g
— Rishab Shetty (@shetty_rishab) January 26, 2025
ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬುದು ಬಹು ವರ್ಷದ ಬೇಡಿಕೆ ಆಗಿತ್ತು. ಕಳೆದ ವರ್ಷ ನಟ ಮೆಗಾಸ್ಟಾರ್ ಚಿರಂಜೀವಿಗೆ ಪದ್ಮ ವಿಭೂಷಣ ಘೋಷಣೆಯಾದಾಗಲೂ ಅನಂತ್ ನಾಗ್ ಅವರನ್ನು ನಿರ್ಲಕ್ಷ್ಯ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಆದರೆ ಈಗ ಕೊನೆಗೂ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ