ರಜನಿಕಾಂತ್, ಮೋಹನ್​ಲಾಲ್ ಸ್ಟೈಲ್ ಅನುಕರಿಸಿದ ರಿಷಬ್ ಶೆಟ್ಟಿ; ದಂಗಾದ ಅಮಿತಾಭ್

ರಿಷಬ್ ಶೆಟ್ಟಿ ಅವರು 'ಕೌನ್ ಬನೇಗಾ ಕರೋಡ್ಪತಿ' ಶೋನಲ್ಲಿ ರಜನಿಕಾಂತ್ ಮತ್ತು ಮೋಹನ್​ಲಾಲ್ ಅವರ ಸ್ಟೈಲ್‌ಗಳನ್ನು ಅನುಕರಿಸಿ ಗಮನ ಸೆಳೆದಿದ್ದಾರೆ. ಈ ಪ್ರೋಮೋ ಈಗಾಗಲೇ ವೈರಲ್ ಆಗಿದ್ದು, ರಿಷಬ್ ಎಷ್ಟು ಕೋಟಿ ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿಸಿದೆ. 'ಕಾಂತಾರ'ದ ಬಳಿಕ ಅವರ ಜನಪ್ರಿಯತೆ ಹೆಚ್ಚಿದೆ. ಈ ಸಂಚಿಕೆ ಇಂದು ಪ್ರಸಾರವಾಗಲಿದೆ.

ರಜನಿಕಾಂತ್, ಮೋಹನ್​ಲಾಲ್ ಸ್ಟೈಲ್ ಅನುಕರಿಸಿದ ರಿಷಬ್ ಶೆಟ್ಟಿ; ದಂಗಾದ ಅಮಿತಾಭ್
ರಿಷಬ್-ಅಮಿತಾಭ್

Updated on: Oct 17, 2025 | 5:54 PM

ರಿಷಬ್ ಶೆಟ್ಟಿ (Rishab Shetty) ಅವರು ‘ಕೌನ್ ಬನೇಗಾ ಕರೋಡ್ಪತಿ’ ಶೋನ ಭಾಗ ಆಗಿದ್ದಾರೆ. ಇಂದು (ಅಕ್ಟೋಬರ್ 17) ರಿಷಬ್ ಅವರ ಎಪಿಸೋಡ್ ಪ್ರಸಾರ ಕಾಣಲಿದೆ. ರಿಷಬ್ ಶೆಟ್ಟಿ ಅವರು ಅಂತಿಮವಾಗಿ ಎಷ್ಟು ಕೋಟಿ ರೂಪಾಯಿ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಇದರ ಪ್ರೋಮೋನ ಸೋನಿ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ರಿಷಬ್ ಅವರು ರಜನಿಕಾಂತ್ ಹಾಗೂ ಮೋಹನ್​ಲಾಲ್​ ಸ್ಟೈಲ್​ನ ಅನುಕರಿಸಿದ್ದಾರೆ.

ರಿಷಬ್ ಶೆಟ್ಟಿ ಅವರು ಸಿನಿಮಾಗಳನ್ನು ನೋಡುತ್ತಾ ಬೆಳೆದು ಬಂದವರು. ಅವರು ಹಲವು ಸ್ಟಾರ್ ಹೀರೋಗಳಿಂದ ಸಾಕಷ್ಟು ಸ್ಫೂರ್ತಿ ಪಡೆದಿದ್ದಾರೆ. ಈ ಕಾರಣಕ್ಕೆ ಅವರು ಯಾವುದೇ ಹೀರೋಗಳನ್ನು ನೀರು ಕುಡಿದಷ್ಟೇ ಸುಲಭದಲ್ಲಿ ಅನುಕರಿಸಬಲ್ಲರು. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ರಜನಿಕಾಂತ್ ಹಾಗೂ ಮೋಹನ್​ಲಾಲ್​ ಸ್ಟೈಲ್​ನ ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ
ಒಂದೇ ದಿನ ಒಟಿಟಿಗೆ ಕಾಲಿಟ್ಟ ಕನ್ನಡದ ಎರಡು ಹಿಟ್ ಚಿತ್ರಗಳು; ಮಿಸ್ ಮಾಡಬೇಡಿ
ಅಶ್ವಿನಿಯ ಚಮಚ ಆದ ಜಾನ್ವಿ; ಹೇಳಿದಂತೆ ಕುಣೀತಾರೆ ತಕತೈ, ತಕತೈ
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

2000ನೇ ಇಸ್ವಿಯಲ್ಲಿ ಬಂದ ‘ನರಸಿಂಹಂ’ ಚಿತ್ರದಲ್ಲಿ ಮೋಹನ್​ಲಾಲ್ ಅವರು ‘ಎಂಡ ಮೋಣೆ ದಿನೇಶ’ ಎಂದು ಡೈಲಾಗ್ ಹೇಳುತ್ತಾರೆ. ಈ ಡೈಲಾಗ್​ನ ಹೊಡೆದು, ರಿಷಬ್ ಲುಂಗಿ ಕಟ್ಟಿದ್ದಾರೆ. ಇನ್ನು, ರಜನಿಕಾಂತ್ ವಾಕಿಂಗ್ ಸ್ಟೈಲ್​ನ ರಿಷಬ್ ಅನುಕರಿಸಿ ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ರಿಷಬ್ ಸ್ಟೈಲ್​ಗೆ ಎಲ್ಲರೂ ಫಿದಾ ಆಗಿದ್ದಾರೆ.

(ಕೆಬಿಸಿ ಪ್ರೋಮೋ)

ರಿಷಬ್ ಶೆಟ್ಟಿ ಅವರು ತುಂಬಾನೇ ಕಷ್ಟದಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡವರು. ಅವರು ಕುಂದಾಪುರದ ಹಳ್ಳಿಯಲ್ಲಿ ಹುಟ್ಟಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅವರು ಎಷ್ಟು ಹಣ ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಕಾಂತಾರ ಚಾಪ್ಟರ್ 1: ರಿಷಬ್ ಶೆಟ್ಟಿ ಕಂಡು ರೊಚ್ಚಿಗೆದ್ದ ಮೈಸೂರಿನ ಅಭಿಮಾನಿಗಳು

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದಿಂದ ದೊಡ್ಡ ಗೆಲುವು ಕಂಡರು. ಈ ಸಿನಿಮಾದ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ತಲುಪೋ ಸನಿಹದಲ್ಲಿ ಇದೆ. ದೀಪಾವಳಿ ಸಮಯದಲ್ಲಿ ಚಿತ್ರ ಭರ್ಜರಿ ಗಳಿಕೆ ಮಾಡುವ ನಿರೀಕ್ಷೆ ಇದೆ. ಅವರು ಅಧಿಕೃತವಾಗಿ ‘ಜೈ ಹನುಮಾನ್’ ಸಿನಿಮಾದ ಭಾಗ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.