ರಿಷಬ್ ಶೆಟ್ಟಿ ನಿರ್ಮಾಣದ ಹಾಗೂ ನಟೇಶ್ ಹೆಗಡೆ ನಿರ್ದೇಶನದ ‘ಪೆಡ್ರೋ’ ಸಿನಿಮಾ ಈಗ ದಕ್ಷಿಣ ಕೊರಿಯಾದ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (BIFF) ಆಯ್ಕೆ ಆಗಿದೆ. ಬುಸಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ ಮೊದಲ ಕನ್ನಡದ ಸಿನಿಮಾ ಇದಾಗಿದೆ.
ಈ ಬಗ್ಗೆ ‘ಪೆಡ್ರೋ’ ನಿರ್ಮಾಪಕ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ‘ನಟೇಶ್ ಹೆಗಡೆ ಅವರ ಚೊಚ್ಚಲ ನಿರ್ದೇಶನ, ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣದಲ್ಲಿ ತಯಾರಾದ ‘ಪೆಡ್ರೋ’ ಸಿನಿಮಾ ಇದೀಗ ಬುಸಾನ್ ಫಿಲ್ಮ್ ಫೆಸ್ಟ್ಗೆ ಆಯ್ಕೆಯಾಗಿದೆ. ಇದಕ್ಕೆ ಆಯ್ಕೆಯಾದ ಪ್ರಥಮ ಕನ್ನಡದ ಚಿತ್ರ ಇದಾಗಿದೆ. ನ್ಯೂ ಕರೆಂಟ್ ಸೆಕ್ಷನ್ನಲ್ಲಿ ವರ್ಲ್ಡ್ ಪ್ರೀಮಿಯರ್ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ ಅವರು.
ನಟೇಶ್ ಹೆಗಡೆ ಅವರ ಚೊಚ್ಚಲ ನಿರ್ದೇಶನ @rishabsfilms ನಿರ್ಮಾಣದಲ್ಲಿ ತಯಾರಾದ #Pedro ಸಿನೆಮಾ ಇದೀಗ @busanfilmfest ಗೇ ಆಯ್ಕೆಯಾದ ಪ್ರಥಮ ಕನ್ನಡ ಚಿತ್ರ ಇದಾಗಿದ್ದು new current section ನಲ್ಲಿ World primier ಆಗಲಿದೆ @Natesh_kottalli #Pedro pic.twitter.com/PMkYmeqwr4
— Rishab Shetty (@shetty_rishab) September 1, 2021
ಈ ಬಗ್ಗೆ ಚಿತ್ರದ ನಿರ್ದೇಶಕ ನಟೇಶ್ ಹೆಗಡೆ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ‘ಕೊವಿಡ್ನಿಂದಾಗಿ ಸಿನಿಮಾಗಳು ಸಿದ್ಧವಿದ್ದರೂ ಅದನ್ನು ಪ್ರೇಕ್ಷಕರಿಗೆ ತೋರಿಸೋಕೆ ಸಾಧ್ಯವಾಗಿರಲಿಲ್ಲ. ಈಗ ನಮ್ಮ ಸಿನಿಮಾ ಬುಸಾನ್ ಚಿತ್ರೋತ್ಸವಕ್ಕೆ ಆಯ್ಕೆ ಆಗಿರುವುದರಿಂದ ರಿಲೀಫ್ ಸಿಕ್ಕಂತಾಗಿದೆ. ಕೊವಿಡ್ ಕಡಿಮೆ ಆದ ನಂತರದಲ್ಲಿ ವೀಕ್ಷಕರಿಗೆ ಈ ಸಿನಿಮಾ ತೋರಿಸಿ, ಮುಂದಿನ ಪ್ರಾಜೆಕ್ಟ್ ಬಗ್ಗೆ ಯೋಚಿಸುತ್ತೇನೆ’ ಎನ್ನುತ್ತಾರೆ ಅವರು.
‘ಪೆಡ್ರೋ’ ಸಿನಿಮಾ ಈ ಮೊದಲು ಎನ್‌ಎಫ್‌ಡಿಸಿ ಫಿಲ್ಮ್ ಬಜಾರ್‌ನ ವರ್ಕ್ ಇನ್ ಪ್ರೊಗ್ರೆಸ್ ಲ್ಯಾಬ್‌ಗೆ ಆಯ್ಕೆ ಆಗಿ ಪ್ರಶಸ್ತಿ ಸಹ ಪಡೆದುಕೊಂಡಿತ್ತು. ಬುಸಾನ್ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರಶಸ್ತಿ ಪಡೆದುಕೊಂಡರೆ ಹೊಸ ದಾಖಲೆ ಸೃಷ್ಟಿ ಆಗಲಿದೆ.
‘ಕಾಂತಾರ’ ಸಿನಿಮಾದ ಕೆಲಸಗಳಲ್ಲಿ ರಿಷಬ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ನಿಗೂಢ ಅರಣ್ಯವನ್ನು ಕಾಂತಾರ ಎನ್ನಲಾಗುತ್ತದೆ. ದಕ್ಷಿಣ ಕರಾವಳಿಯ ಸುತ್ತ ಮುತ್ತ ನಡೆಯುವ ಕತೆ ಇದಾಗಿದ್ದು, ಸಂಪೂರ್ಣವಾಗಿ ಅಲ್ಲಿನ ಜನ ಜೀವನ, ಸಂಸ್ಕೃತಿ, ಭಾಷೆಯನ್ನು ಒಳಗೊಂಡಿರಲಿದೆ.
ಇದನ್ನೂ ಓದಿ: Kantara: ‘ಕಾಂತಾರ’ ಚಿತ್ರದಲ್ಲಿ ಏನೆಲ್ಲಾ ಇರಲಿದೆ?; ಗುಟ್ಟು ಬಿಟ್ಟುಕೊಟ್ಟ ರಿಷಬ್ ಶೆಟ್ಟಿ
Shiva Rajkumar: ಶಿವರಾಜ್ ಕುಮಾರ್ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಖಚಿತ; ಯಾವಾಗ ಸೆಟ್ಟೇರಲಿದೆ ಸಿನಿಮಾ?