‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ರಿಷಬ್ ಪಡೆದ ಸಂಭಾವನೆ ಎಷ್ಟು? ಊಹೆಗೂ ಮೀರಿದ್ದು

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ರಿಲೀಸ್​ಗೆ ಬಾಕಿ ಇರೋದು ಇನ್ನು ಕೆಲವೇ ದಿನಗಳು ಮಾತ್ರ. ಹೀಗಿರುವಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲ ಕಡೆಗಳಲ್ಲಿ ಸದ್ದು ಮಾಡಿದೆ. ಈ ಮಧ್ಯೆ ರಿಷಬ್ ಸಂಭಾವನೆ ವಿಚಾರ ಚರ್ಚೆಗೆ ಕಾರಣ ಆಗಿದೆ.

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ರಿಷಬ್ ಪಡೆದ ಸಂಭಾವನೆ ಎಷ್ಟು? ಊಹೆಗೂ ಮೀರಿದ್ದು
ರಿಷಬ್

Updated on: Sep 26, 2025 | 8:48 AM

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ (Kantara) ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಅವರು ಚಿತ್ರಕಥೆ, ಸಂಭಾಷಣೆ ಬರೆಯುವಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇಷ್ಟೆಲ್ಲ ಜವಾಬ್ದಾರಿ ವಹಿಸಿಕೊಳ್ಳುವುದು ದೊಡ್ಡ ಚಾಲೆಂಜ್. ಈ ಚಾಲೆಂಜ್​ನ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದಕ್ಕಾಗಿ ಅವರು ದೊಡ್ಡ ಮಟ್ಟದಲ್ಲಿ ಪ್ರತಿಫಲ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

ಸಾಮಾನ್ಯವಾಗಿ ಬಾಲಿವುಡ್​​ನಲ್ಲಿ ಹಲವು ಸ್ಟಾರ್​ಗಳು ಸಿನಿಮಾಗಳಿಗೆ ನಿರ್ಮಾಪಕರಿಂದ ಸಂಭಾವನೆ ಪಡೆಯೋದಿಲ್ಲ. ಆಮಿರ್ ಖಾನ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಸ್ಟಾರ್​ಗಳು ಈ ರೀತಿ ಮಾಡುತ್ತಾರೆ. ಅವರು ಸಂಭಾವನೆ ಬದಲು ಸಿನಿಮಾ ಗೆದ್ದರೆ ಅದರಲ್ಲಿ ಬಂದ ಲಾಭದಲ್ಲಿ ಒಂದಷ್ಟು ಮೊತ್ತವನ್ನು ಪಡೆದುಕೊಳ್ಳುತ್ತಾರೆ. ಈ ರೀತಿ ಅನೇಕರು ಮಾಡಿದ್ದಾರೆ.

ಆದರೆ, ಕನ್ನಡದಲ್ಲಿ ಈ ಟ್ರೆಂಡ್ ಇತ್ತೀಚೆಗೆ ಆರಂಭ ಆಗಿದೆ. ಕನ್ನಡದಲ್ಲಿ ಬಹುತೇಕ ಕಲಾವಿದರು ಸಂಭಾವನೆ ಫಿಕ್ಸ್ ಮಾಡಿ, ಅದನ್ನು ಪಡೆದುಕೊಳ್ಳುತ್ತಾರೆ. ಸಿನಿಮಾ ಹಿಟ್ ಆಗಲಿ ಅಥವಾ ಹಿಟ್ ಆಗದೆ ಇರಲಿ, ಅದು ನಿರ್ಮಾಪಕರ ತಲೆಗೆ ಬೀಳಲಿದೆ. ಆದರೆ, ರಿಷಬ್ ಅವರು ‘ಕಾಂತಾರ: ಚಾಪ್ಟರ್ 1’ ವಿಚಾರದಲ್ಲಿ ಶೇರು ಪಡೆಯುವ ತಂತ್ರ ಬಳಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ
‘ನಾನು ಒಂದು ದಿನ ಮಗು ಹೊಂದುತ್ತೇನೆ’; ಮನದ ಆಸೆ ಹೊರಹಾಕಿದ ಸಲ್ಮಾನ್ ಖಾನ್
ಬಿಗ್ ಬಾಸ್​ಗೆ ಶಾಕ್; ಬಿತ್ತು ಎರಡು ಕೋಟಿ ರೂಪಾಯಿ ಕೇಸ್
‘ಓಜಿ’ ಅಬ್ಬರದ ಕಲೆಕ್ಷನ್; ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಕೆ

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸಿನಿಮಾದಲ್ಲಿ ಬರೋ ಲಾಭದಲ್ಲಿ ಅವರು ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಲಾಭವನ್ನು ಪಡೆದುಕೊಳ್ಳಲಿದ್ದಾರಂತೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್​ಗೂ ಮೊದಲೇ ಲಾಭದಲ್ಲಿ ಇದೆ. ಸಿನಿಮಾ ಅತ್ಯುತ್ತಮವಾಗಿದ್ದರೆ ಒಳ್ಳೆಯ ಕಲೆಕ್ಷನ್ ಮಾಡುತ್ತದೆ. ಇದರಿಂದ ರಿಷಬ್​ಗೆ ಸಿಗೋ ಪಾಲು ಕೂಡ ಹೆಚ್ಚುತ್ತದೆ.

ಇದನ್ನೂ ಓದಿ: ‘ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ರಾಜ್, ರಕ್ಷಿತ್ ಸಹಾಯ ಮಾಡಿಲ್ಲ’; ರಿಷಬ್ ಶೆಟ್ಟಿ

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಅಕ್ಟೋಬರ್ 1ರಂದು ಪ್ರೀಮಿಯರ್ ಶೋಗಳನ್ನು ಮಾಡುವ ಆಲೋಚನೆ ಇದೆ. ಈ ಚಿತ್ರದಲ್ಲಿ ರಿಷಬ್ ಜೊತೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us