ನಟ ರಿಷಬ್ ಶೆಟ್ಟಿ (Rishab Shetty) ಅವರು ಪ್ಯಾನ್ ಇಂಡಿಯಾ ಸ್ಟಾರ್. ‘ಕಾಂತಾರ’ ಸಿನಿಮಾ ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರವನ್ನು ಜನರು ಸಾಕಷ್ಟು ಮೆಚ್ಚಿಕೊಂಡರು. ಈಗ ರಿಷಬ್ ಅವರು ಪ್ಯಾನ್ ಇಂಡಿಯಾ ರೀತಿಯ ಸಿನಿಮಾಗಳನ್ನೇ ಮಾಡಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಬಗ್ಗೆ ರಿಷಬ್ ಮಾತನಾಡಿದ್ದಾರೆ. ಸಿನಿಮಾ ಚೆನ್ನಾಗಿದ್ದರೆ ಮಾತ್ರ ಜನರಿಗೆ ಇಷ್ಟ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರ ಎಂದಾಗ ಪರಭಾಷೆಯ ಸಿನಿಮಾಗಳ ಕಲಾವಿದರನ್ನು ಸೇರಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಾರೆ. ಈ ಮೂಲಕ ಆಯಾ ಭಾಷೆಯ ಪ್ರೇಕ್ಷಕರಿಗೆ ಸಿನಿಮಾ ಕನೆಕ್ಟ್ ಆಗಲಿ ಅನ್ನೋದು ಅನೇಕರ ಭಾವನೆ. ಆದರೆ, ರಿಷಬ್ ಇದರಲ್ಲಿ ನಂಬಿಕೆ ಇಟ್ಟಿಲ್ಲ. ‘ಪ್ಯಾನ್ ಇಂಡಿಯಾ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಪ್ಯಾನ್ ಇಂಡಿಯಾಗಾಗಿ ಬೇರೆ ಭಾಷೆಯ ಕಲಾವಿದರನ್ನು ಸೇರಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ’ ಎಂದಿದ್ದಾರೆ ರಿಷಬ್.
‘ಕಾಂತಾರ’ ಸಿನಿಮಾದಲ್ಲಿ ಇದ್ದಿದ್ದು ಸ್ಥಳೀಯ ಕಲಾವಿದರೇ. ಆದಾಗ್ಯೂ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಯಿತು. ಜನರನ್ನು ಸಿನಿಮಾ ಹೇಗೆ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದಷ್ಟೇ ರಿಷಬ್ಗೆ ಮುಖ್ಯವಂತೆ. ‘ಕಾಂತಾರ ಸಿನಿಮಾ ನೋಡುವಾಗ ರಿಷಬ್ ಯಾಕೆ ಬೇಕು? ಅಲ್ಲಿ ಶಿವ ಪಾತ್ರ ಮುಖ್ಯ. ಜನರನ್ನು ಅವನು ಹಿಡಿದಿಟ್ಟುಕೊಳ್ಳುತ್ತಿದ್ದಾನಾ. ಅದು ಮಾತ್ರ ಮುಖ್ಯ’ ಎಂದಿದ್ದಾರೆ ಅವರು.
ಮಲಯಾಳಂನಲ್ಲಿ ದೊಡ್ಡ ಬಜೆಟ್ ಚಿತ್ರಗಳು ಬರುವುದಿಲ್ಲ. ಅವರು ಸಿಂಪಲ್ ಆಗಿ ಸಿನಿಮಾ ಮಾಡುತ್ತಾರೆ. ಈ ಮೂಲಕ ಗೆಲ್ಲುತ್ತಾರೆ. ಅವರು ಜನರನ್ನು ಹಿಡಿದಿಕೊಳ್ಳುವ ಸಿನಿಮಾ ಮಾಡುತ್ತಿದ್ದಾರೆ. ಈ ಮೂಲಕ ಗೆಲ್ಲುತ್ತಿದ್ದಾರೆ ಅನ್ನೋದು ರಿಷಬ್ ಶೆಟ್ಟಿ ಅಭಿಪ್ರಾಯ.
ಇದನ್ನೂ ಓದಿ: ಬೆಂಗಳೂರು ಬಿಟ್ಟು ಕುಂದಾಪುರಕ್ಕೆ ಶಿಫ್ಟ್ ಆದ ರಿಷಬ್ ಶೆಟ್ಟಿ; ಊರಲ್ಲೇ ಮಗನ ಶಾಲೆಗೆ ಸೇರಿಸಿದ ನಟ
ಸದ್ಯ ರಿಷಬ್ ಅವರು ‘ಕಾಂತಾರ’ ಸಿನಿಮಾ ಶೂಟಿಂಗ್ಗಾಗಿ ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ. ಅಲ್ಲಿ ಸ್ಟುಡಿಯೋ ನಿರ್ಮಿಸಿ ಸೆಟ್ ಹಾಕಲಾಗಿದೆ. ಈಗಾಗಲೇ ಒಂದು ಹಂತದ ಶೂಟಿಂಗ್ ಪೂರ್ಣಗೊಂಡಿದೆ. ಒಟ್ಟೂ 100 ದಿನಗಳ ಶೂಟಿಂಗ್ ನಡೆಯಲಿದೆ. 2025ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.