‘ರಾಮಾಯಣ’ ನಿರ್ಮಾಣಕ್ಕೆ ಯಶ್ ಮುಂದಾಗಿದ್ದೇಕೆ? ಕಾರಣ ತಿಳಿಸಿದ ರಾಕಿಂಗ್ ಸ್ಟಾರ್

|

Updated on: Apr 25, 2024 | 6:54 AM

‘ರಾಮಾಯಣ’ ಸಿನಿಮಾನ ನಮಿತ್ ಮಲ್ಹೋತ್ರಾ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರ ಜೊತೆಗೆ ಯಶ್ ಕೂಡ ಕೈ ಜೋಡಿಸಿದ್ದಾರೆ. ‘ವೆರೈಟಿ ಮ್ಯಾಗಜಿನ್​’ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಿನಿಮಾ ನಿರ್ಮಾಣದ ಹಿಂದಿನ ಕಾರಣ ತಿಳಿಸಿದ್ದಾರೆ. ಜೊತೆಗೆ ಅಮೆರಿಕಕ್ಕೆ ಹೋದ ಹಿಂದಿ ಕಾರಣವನ್ನೂ ವಿವರಿಸಿದ್ದಾರೆ.

‘ರಾಮಾಯಣ’ ನಿರ್ಮಾಣಕ್ಕೆ ಯಶ್ ಮುಂದಾಗಿದ್ದೇಕೆ? ಕಾರಣ ತಿಳಿಸಿದ ರಾಕಿಂಗ್ ಸ್ಟಾರ್
ಯಶ್
Follow us on

ರಾಕಿಂಗ್ ಸ್ಟಾರ್ ಯಶ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರ ಮುಂದಿನ ಸಿನಿಮಾ ‘ಟಾಕ್ಸಿಕ್’ (Toxic Movie) ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಮಧ್ಯೆ ಅವರು ಹಿಂದಿಯ ‘ರಾಮಾಯಣ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ನಿರ್ಮಾಪಕರಲ್ಲಿ ಯಶ್ ಕೂಡ ಒಬ್ಬರು. ಯಶ್ ಅವರು ತಮ್ಮ ಪಾತ್ರದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಬದಲಿಗೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಏಕೆ ಎಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರ ಜೊತೆಗೆ ಯಶ್ ಕೂಡ ಕೈ ಜೋಡಿಸಿದ್ದಾರೆ. ‘ವೆರೈಟಿ ಮ್ಯಾಗಜಿನ್​’ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಿನಿಮಾ ನಿರ್ಮಾಣದ ಹಿಂದಿನ ಕಾರಣ ತಿಳಿಸಿದ್ದಾರೆ. ‘ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂಬುದು ನನ್ನ ದೀರ್ಘಕಾಲದ ಆಕಾಂಕ್ಷೆ ಆಗಿತ್ತು. ಅದರ ಅನ್ವೇಷಣೆಯಲ್ಲಿ ನಾನು ಲಾಸ್ ಏಂಜಲೀಸ್​ಗೆ ಹೋಗಿದ್ದೆ. ಅತ್ಯುತ್ತಮ ವಿಎಫ್​ಎಕ್ಸ್ ಸ್ಟುಡಿಯೋಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಅಲ್ಲಿದ್ದೆ. ಭಾರತೀಯ ಸಿನಿಮಾದ ದೃಷ್ಟಿಯಲ್ಲಿ ನನ್ನ ಮತ್ತು ನಮಿತ್ ಆಲೋಚನೆಗಳು ಹೊಂದುತ್ತವೆ’ ಎಂದಿದ್ದಾರೆ ಯಶ್.

‘ನಾವು ವಿವಿಧ ಯೋಜನೆಗಳ ಬಗ್ಗೆ ಚರ್ಚೆ ಮಾಡಿದೆವು. ಆಗ ರಾಮಾಯಣದ ವಿಷಯವೂ ಬಂದಿತು. ನಮಿತ್ ಆಗಲೇ ಕೆಲಸದಲ್ಲಿ ತೊಡಗಿಕೊಂಡಿದ್ದರು. ರಾಮಾಯಣವು ಒಂದು ವಿಷಯವಾಗಿ ನನ್ನಲ್ಲಿ ಆಳವಾಗಿ ಪ್ರತಿಧ್ವನಿಸುತ್ತದೆ. ನನ್ನ ಮನಸ್ಸಿನಲ್ಲಿ ಅದರ ಬಗ್ಗೆ ಒಂದು ಆಲೋಚನೆ ಇತ್ತು. ಹೀಗಾಗಿ ನಾನು ಸಹ ನಿರ್ಮಾಪಕನಾದೆ’ ಎಂದಿದ್ದಾರೆ ಯಶ್.

ಇದನ್ನೂ ಓದಿ: ಯಶ್, ರಣಬೀರ್ ನಟನೆಯ ‘ರಾಮಾಯಣ’ದ ಜತೆ ಸ್ಪರ್ಧೆ; ರಾಮನ ಬಗ್ಗೆ ಹೊಸ ಸಿನಿಮಾ

‘ರಾಮಾಯಣ’ ಸಿನಿಮಾ ಮೂರು ಭಾಗದಲ್ಲಿ ಬರಲಿದೆ ಎನ್ನಲಾಗಿತ್ತಿದೆ. ಈ ಸಿನಿಮಾನ ಬೇರೆ ಬೇರೆ ಭಾಷೆಯಲ್ಲಿ ವಿಶ್ವಾದ್ಯಂತ ರಿಲೀಸ್ ಮಾಡೋ ಸಾಧ್ಯತೆ ಇದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ರಾಮ-ಸೀತೆಯಾಗಿ ನಟಿಸುತ್ತಿದ್ದಾರೆ. ನಿತೇಶ್ ತಿವಾರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ಲಾರಾ ದತ್ತ ಸೇರಿ ಅನೇಕರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.