AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ರಾಜ್ ವಿಡಿಯೋ ಎಡಿಟ್​ ಮಾಡಿ ಮೋದಿ ಪರ ಪ್ರಚಾರ ಮಾಡಿದ ಬಿಜೆಪಿ ಬೆಂಬಲಿಗರು

ಇತ್ತೀಚೆಗೆ ರಣವೀರ್​ ಸಿಂಗ್​ ಅವರ ರಿಯಲ್​ ಲೈಫ್ ವಿಡಿಯೋಗೆ ಎಐ ಮೂಲಕ ಬೇರೆ ಧ್ವನಿ ನೀಡಿ ಮೋದಿ ವಿರುದ್ಧ ಮಾತನಾಡಿರುವ ರೀತಿ ವಿಡಿಯೋ ವೈರಲ್​ ಮಾಡಲಾಗಿತ್ತು. ಅದರ ವಿರುದ್ಧ ರಣವೀರ್​ ಸಿಂಗ್​ ದೂರು ನೀಡಿದ ನಂತರ ಎಫ್​ಐಆರ್ ದಾಖಲಾಯಿತು. ಈಗ ವರನಟ ಡಾ. ರಾಜ್​ಕುಮಾರ್​ ಅಭಿನಯದ ಸಿನಿಮಾಗಳ ದೃಶ್ಯವನ್ನು ಬಿಜೆಪಿ ಬೆಂಬಲಿಗರು ಬಳಸಿಕೊಂಡಿದ್ದಾರೆ. ಆ ಮೂಲಕ ನರೇಂದ್ರ ಮೋದಿ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ.

ಡಾ. ರಾಜ್ ವಿಡಿಯೋ ಎಡಿಟ್​ ಮಾಡಿ ಮೋದಿ ಪರ ಪ್ರಚಾರ ಮಾಡಿದ ಬಿಜೆಪಿ ಬೆಂಬಲಿಗರು
ಡಾ. ರಾಜ್​ಕುಮಾರ್​, ನರೇಂದ್ರ ಮೋದಿ
TV9 Web
| Updated By: ಮದನ್​ ಕುಮಾರ್​|

Updated on: Apr 24, 2024 | 9:09 PM

Share

ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಲವು ಬಗೆಯ ಪ್ರಯತ್ನಗಳನ್ನು ಮಾಡುತ್ತಿವೆ. ಸಿನಿಮಾ ನಟ-ನಟಿಯರನ್ನು ಕರೆದು ಪ್ರಚಾರ ಮಾಡಿಸಲಾಗುತ್ತಿದೆ. ಇದು ಸೋಶಿಯಲ್​ ಮೀಡಿಯಾ ಜಮಾನಾ. ಹಾಗಾಗಿ ಸಿನಿಮಾಗಳ ವಿಡಿಯೋಗಳನ್ನು ಬಳಸಿಕೊಂಡು ಕೂಡ ಮತ ಕೇಳುವ ಪ್ರಯತ್ನ ನಡೆದಿದೆ. ಇಂದು (ಏಪ್ರಿಲ್​ 24) ಡಾ. ರಾಜ್​ಕುಮಾರ್​ (Dr Rajkumar) ಅವರ ಜನ್ಮದಿನ. ಆ ಪ್ರಯುಕ್ತ ರಾಜ್​ಕುಮಾರ್​ ನಟನೆಯ ‘ಮಯೂರ’ ಸಿನಿಮಾದ ವಿಡಿಯೋಗೆ ಬೇರೆ ಹಿನ್ನೆಲೆ ಧ್ವನಿ ನೀಡಿ, ನರೇಂದ್ರ ಮೋದಿ (Narendra Modi) ಪರವಾಗಿ ಚುನಾವಣಾ ಪ್ರಚಾರ ಮಾಡಲಾಗಿದೆ.

ಡಾ. ರಾಜ್​ಕುಮಾರ್​ ನಟನೆಯ ‘ಮಯೂರ’ ಸಿನಿಮಾದ ಒಂದು ದೃಶ್ಯಯನ್ನು ಈ ರೀತಿ ಬಳಸಿಕೊಳ್ಳಲಾಗಿದೆ. ನರೇಂದ್ರ ಮೋದಿ ಬಗ್ಗೆ ಅಣ್ಣಾವ್ರೇ ಭಾಷಣ ಮಾಡುತ್ತಿರುವ ರೀತಿ ಧ್ವನಿ ನೀಡಲಾಗಿದೆ. ‘ಈ ದೇಶದ ಪ್ರಧಾನಿ ಆಗಲು ಧಮ್​, ತಾಕತ್ತು ಇರಬೇಕು. ಸರ್ಜಿಕಲ್​ ಸ್ಟ್ರೈಕ್​ ಮಾಡುವ ತಾಕತ್ತು ಯಾರಿಗೆ ಇದೆ? ಆರ್ಟಿಕಲ್​ 370 ರದ್ದು ಮಾಡಿ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡುವ ತಾಕತ್ತು ಯಾರಿಗೆ ಇದೆ? ದೇಶಾದಾದ್ಯಂತ ಜಿಎಸ್​ಟಿ ಜಾರಿಗೆ ತಂದರು. ಆ ತಾಕತ್ತು ಯಾರ ಹತ್ತಿರ ಇದೆ? ರಷ್ಯಾ-ಉಕ್ರೇನ್​ ಯುದ್ಧದ ಸಮಯದಲ್ಲಿ ನಮ್ಮ ದೇಶದವರನ್ನು ವಾಪಸ್​ ಕರೆದುಕೊಂಡು ಬಂದರು. ಆ ತಾಕತ್ತು ಯಾರಿಗೆ ಇದೆ?’ ಎಂಬ ಡೈಲಾಗ್​ ಸೇರಿಸಲಾಗಿದೆ.

ಎಡಿಟ್​ ಮಾಡಿದ ವಿಡಿಯೋ:

‘ಕಳೆದ 50 ವರ್ಷಗಳಲ್ಲಿ ಆದ ಅಭಿವೃದ್ಧಿ ಕೇವಲ 10 ವರ್ಷಗಳಲ್ಲಿ ಆಗಿದೆ. ಪ್ರತಿದಿನ 28 ಕಿಲೋ ಮೀಟರ್​ ರಸ್ತೆ ಮಾಡುತ್ತಿದ್ದಾರೆ. ಮನೆಮನೆ ಮುಂದೆ ರಸ್ತೆ, ಕುಡಿಯುವ ನೀರು, ವಿದ್ಯುತ್​ ಸಂಪರ್ಕ ಸಿಕ್ಕಿದೆ. ಬೆಟ್ಟ ಗುಡ್ಡಗಳಲ್ಲೂ ರಸ್ತೆ ಮಾಡಿದ್ದಾರೆ. ಪ್ರತಿ ಹಳ್ಳಿಯಲ್ಲಿ ಇಂಟರ್​ನೆಟ್​ ಕನೆಕ್ಷನ್​ ಇದೆ. ನಮ್ಮ ದೇಶದ ಆರ್ಥಿಕತೆ ಈಗ 4ನೇ ಸ್ಥಾನಕ್ಕೆ ದಾಪುಗಾಲು ಇಡುತ್ತಿದೆ. ಈಗ ಮತ್ತೆ ಮೋದಿ ಪ್ರಧಾನಿ ಆದರೆ ನಮ್ಮ ದೇಶ ವಿಶ್ವದಲ್ಲೇ ನಂ.1 ಆಗುತ್ತದೆ. ಮೋದಿಗೆ ಮಕ್ಕಳು, ಮೊಮ್ಮಕ್ಕಳು ಯಾರೂ ಇಲ್ಲ. ದಿನದ 24 ಗಂಟೆಯೂ ದೇಶಕ್ಕಾಗಿ ಕೆಲಸ ಮಾಡುತ್ತಾ ಇದ್ದಾರೆ. ಅವರು ಈ ದೇಶವನ್ನು ಕಾಯುತ್ತಿರುವ ಕಾಲಭೈರವ. ಅವರಿಗೇ ನಮ್ಮ ಮತ’ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ರಾಜ್​ಕುಮಾರ್ ಜನ್ಮದಿನ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ

ಕೆಲವೇ ದಿನಗಳ ಹಿಂದೆ ಆಮಿರ್​ ಖಾನ್​ ಮತ್ತು ರಣವೀರ್​ ಸಿಂಗ್​ ಅವರ ರಿಯಲ್​ ಲೈಫ್ ವಿಡಿಯೋಗೆ ಕೃತಕ ಬುದ್ಧಿಮತ್ತೆಯ ಮೂಲಕ ಬೇರೆ ಧ್ವನಿ ನೀಡಿ ಕಾಂಗ್ರೆಸ್​ ಪರ ಪಚಾರ ಮಾಡುತ್ತಿರುವ ರೀತಿ ವಿಡಿಯೋ ಸೃಷ್ಟಿ ಮಾಡಲಾಗಿತ್ತು. ಅದರ ವಿರುದ್ಧ ನಟರ ದೂರು ನೀಡಿದ ಬಳಿಕ ಎಫ್​ಐಆರ್ ದಾಖಲಾಯಿತು. ಈಗ ಡಾ. ರಾಜ್​ಕುಮಾರ್​ ಅವರ ಸಿನಿಮಾದ ದೃಶ್ಯವನ್ನು ಬಿಜೆಪಿ ಬೆಂಬಲಿಗರು ಬಳಸಿಕೊಂಡು, ಈ ರೀತಿ ಎಡಿಟ್​ ಮಾಡಿ ಮೋದಿ ಪರ ಚುನಾವಣಾ ಪ್ರಚಾರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.