ಮಕ್ಕಳ ಮೇಲೆ ಕೋಪವನ್ನೇ ಮಾಡಿಕೊಳ್ಳುತ್ತಿರಲಿಲ್ಲ ರಾಜ್​ಕುಮಾರ್; ಕಾರಣವೇನು?

Rajkumar Birth Anniversary: ಶಿವರಾಜ್​ಕುಮಾರ್​ನ ಒಮ್ಮೆ ಹೊಡೆದಿದ್ದು ನೋಡಿದ್ದೆ ಅಷ್ಟೇ. ತಂಗಿ ಮಗನ ತಳ್ಳಿದ ಕೋಪಕ್ಕೆ ಹೊಡೆದಿದ್ದರು. ಅದೇ ಕೊನೆ, ಅದಾದ ಬಳಿಕ ಅವರು ಮಕ್ಕಳ ಮೇಲೆ ಸಿಟ್ಟು ಮಾಡೋದು ನಿಲ್ಲಿಸಿದರು. ಕೋಪ ಮಾಡಿಕೊಳ್ಳುತ್ತಲೇ ಇರಲಿಲ್ಲ’ ಎಂದು ಪಾರ್ವತಮ್ಮ ಅವರು ಈ ಮೊದಲು ಹೇಳಿದ್ದರು.

ಮಕ್ಕಳ ಮೇಲೆ ಕೋಪವನ್ನೇ ಮಾಡಿಕೊಳ್ಳುತ್ತಿರಲಿಲ್ಲ ರಾಜ್​ಕುಮಾರ್; ಕಾರಣವೇನು?
ಮಕ್ಕಳ ಜೊತೆ ರಾಜ್​ಕುಮಾರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 24, 2024 | 7:17 AM

ವರನಟ ಡಾಕ್ಟರ್ ರಾಜ್​ಕುಮಾರ್ (Rajkumar) ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರು ಇಲ್ಲದೇ ಹಲವು ವರ್ಷಗಳು ಕಳೆದಿವೆ. ಅವರನ್ನು ನೆನಪಿಸಿಕೊಳ್ಳುವ ಕೆಲಸವನ್ನು ಫ್ಯಾನ್ಸ್ ಮಾಡುತ್ತಿದ್ದಾರೆ. ರಾಜ್​ಕುಮಾರ್ ಹೆಸರಲ್ಲಿ ನಾನಾ ಒಳ್ಳೆಯ ಕಾರ್ಯಗಳು ನಡೆಯುತ್ತಿವೆ. ರಾಜ್​ಕುಮಾರ್ ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಇತ್ತು. ಅವರು ಎಂದಿಗೂ ಮಕ್ಕಳನ್ನು ಬೈದವರಲ್ಲ, ಕೋಪ ಮಾಡಿಕೊಂಡವರಲ್ಲ. ಈ ಬಗ್ಗೆ ಅವರ ಪತ್ನಿ ಪಾರ್ವತಮ್ಮ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ರಾಜ್​ಕುಮಾರ್ ತಂದೆಯಿಂದ ಸಾಕಷ್ಟು ಪೆಟ್ಟು ತಿಂದಿದ್ದರು. ಆದರೆ, ರಾಜ್​ಕುಮಾರ್ ಅವರು ಮಕ್ಕಳಿಗೆ ಹೊಡೆಯುತ್ತಿರಲಿಲ್ಲ. ‘ಶಿವರಾಜ್​ಕುಮಾರ್​ನ ಒಮ್ಮೆ ಹೊಡೆದಿದ್ದು ನೋಡಿದ್ದೆ ಅಷ್ಟೇ. ತಂಗಿ ಮಗನ ತಳ್ಳಿದ ಕೋಪಕ್ಕೆ ಹೊಡೆದಿದ್ದರು. ಅದೇ ಕೊನೆ, ಅದಾದ ಬಳಿಕ ಅವರು ಮಕ್ಕಳ ಮೇಲೆ ಸಿಟ್ಟು ಮಾಡೋದು ನಿಲ್ಲಿಸಿದರು. ಕೋಪ ಮಾಡಿಕೊಳ್ಳುತ್ತಲೇ ಇರಲಿಲ್ಲ ಎಂದಲ್ಲ, ಕೋಪ ಮಾಡಿಕೊಂಡರೆ ಮಾತನಾಡುವುದನ್ನೇ ಅವರು ನಿಲ್ಲಿಸುತ್ತಿದ್ದರು’ ಎಂದಿದ್ದಾರೆ ಪಾರ್ವತಮ್ಮ.

‘ದೊಡ್ಡ ಮಗನ ಮೇಲೆ ಕೋಪ ಬಂದಿತ್ತು. ಮೂರು ದಿನ ಆಗಿತ್ತು, ಸರಿಯಾಗಿ ಮಾತೇ ಆಡಿರಲಿಲ್ಲ. ಇದರಿಂದ ಅವರು ಕೂಡ ಸಾಕಷ್ಟು ಹಿಂಸೆ ಪಡುತ್ತಿದ್ದರು. ಕೊನೆಗೆ ಹಿರಿಮಗನೇ ಹೋಗಿ ಅಪ್ಪನ ತಬ್ಬಿಕೊಂಡು ಕ್ಷಮೆ ಕೇಳಿದ. ಆ ಬಳಿಕ ಎಲ್ಲವೂ ಸರಿ ಆಯಿತು’ ಎಂದಿದ್ದರು ಪಾರ್ವತಮ್ಮ. ಈ ವೇಳೆ ರಾಘವೇಂದ್ರ ರಾಜ್​ಕುಮಾರ್​ಗೆ ಒಂದು ಕಿವಿಮಾತು ಹೇಳಿದ್ದರು ರಾಜ್​. ‘ನೀನು ಒಂಭತ್ತು ವರ್ಷಗಳ ಬಳಿಕ ಹುಟ್ಟಿದ್ದೀಯಾ. ನಿನಗೆ ನಾನು ಹೊಡೆಯೋಕೆ ಆಗಲ್ಲ’ ಎಂದು ರಾಜ್​ಕುಮಾರ್ ರಾಘವೇಂದ್ರ ರಾಜ್​ಕುಮಾರ್​ಗೆ ಹೇಳಿದ್ದರು.

‘ದೊಡ್ಡ ಮಗಳ ಮೇಲೆ ಸಾಕಷ್ಟು ಪ್ರೀತಿ ಇತ್ತು. ಒಮ್ಮೆ ದೊಡ್ಡದಾಗಿ ಮಾತನಾಡಿದ್ದಕ್ಕೆ ಅವಳಿಗೆ ಏರು ಧ್ವನಿಯಲ್ಲಿ ತಿಳಿ ಹೇಳಿದ್ದರು. ಇದರಿಂದ ಇಬ್ಬರ ಮಧ್ಯೆ ಏಳು ದಿನ ಮಾತುಕತೆಯೇ ಇರಲಿಲ್ಲ. ವಾರದ ಬಳಿಕ ಅವಳು ಹೋಗಿ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಕೇಳಿದಳು’ ಎಂದಿದ್ದಾರೆ ಪಾರ್ವತಮ್ಮ.

ಇದನ್ನೂ ಓದಿ: ರಾಜ್​ಕುಮಾರ್​ನ ಶರ್ಟ್​ಲೆಸ್​ ಆಗಿ ನೋಡಬೇಕು ಎಂದು ಹಠ ಹಿಡಿದಿದ್ದ ಕಾಲೇಜು ಹುಡುಗಿಯರು

ಪಾರ್ವತಮ್ಮ ಹಾಗೂ ರಾಜ್​ಕುಮಾರ್ ಮಧ್ಯೆ ಜಗಳ ಆಗುತ್ತಿದ್ದುದ್ದು ಶೂಟಿಂಗ್ ವಿಚಾರಕ್ಕಂತೆ. ‘ಹಣ ಕೊಟ್ಟಿಲ್ಲ ಅಂದರೂ ಶೂಟಿಂಗ್ ಹೋಗ್ತೀರಾ, ನಾವು ಅದನ್ನು ಹೇಗೆ ಕಲೆಕ್ಟ್ ಮಾಡಿಕೊಳ್ಳಬೇಕು ಎಂದು ಕೇಳುತ್ತಿದ್ದೆ. ಹಬ್ಬದ ದಿನವೂ ಶೂಟಿಂಗ್ ಹೋಗುತ್ತಿದ್ದರು. ಈ ವಿಚಾರಕ್ಕೆ ಜಗಳ ಆಗುತ್ತಿತ್ತು’ ಎಂದಿದ್ದರು ಪಾರ್ವತಮ್ಮ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ