ರಾಜ್​ಕುಮಾರ್​ನ ಶರ್ಟ್​ಲೆಸ್​ ಆಗಿ ನೋಡಬೇಕು ಎಂದು ಹಠ ಹಿಡಿದಿದ್ದ ಕಾಲೇಜು ಹುಡುಗಿಯರು

Rajkumar Birth Anniversary: ರಾಜ್​ಕುಮಾರ್ ಅನೇಕರಿಗೆ ಮಾದರಿ. ಅವರು ಫಿಟ್ನೆಸ್​ನ ಆ ರೀತಿಯಲ್ಲಿ ಕಾಪಾಡಿಕೊಂಡು ಹೋಗಿದ್ದರು. ಒಮ್ಮೆ ರಾಜ್​ಕುಮಾರ್ ಮನೆಗೆ ಬಂದಿದ್ದ ಕಾಲೇಜು ಹುಡುಗಿಯರು ಅಣ್ಣಾವ್ರನ್ನು ಶರ್ಟ್​ಲೆಸ್ ಆಗಿ ನೋಡಲು ಇಚ್ಛಿಸಿದ್ದರು. ಇದಕ್ಕೆ ಅವರು ಕೊಟ್ಟ ಕಾರಣ ಮಾತ್ರ ತುಂಬಾನೇ ವಿಚಿತ್ರವಾಗಿತ್ತು.

ರಾಜ್​ಕುಮಾರ್​ನ ಶರ್ಟ್​ಲೆಸ್​ ಆಗಿ ನೋಡಬೇಕು ಎಂದು ಹಠ ಹಿಡಿದಿದ್ದ ಕಾಲೇಜು ಹುಡುಗಿಯರು
ರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on:Apr 24, 2024 | 7:00 AM

ವರನಟ ಡಾ. ರಾಜ್​ಕುಮಾರ್ (Rajkumar) ಅವರು ದೊಡ್ಡ ಮಟ್ಟದಲ್ಲಿ ಗೆಲುವು ಕಂಡ ಕನ್ನಡದ ಸ್ಟಾರ್ ಹೀರೋ. ಅವರನ್ನು ಆರಾಧಿಸುವ ಕೋಟ್ಯಂತರ ಮಂದಿ ಈಗಲೂ ಇದ್ದಾರೆ. ರಾಜ್​ಕುಮಾರ್ ಇಂದು ನಮ್ಮೊಂದಿಗೆ ಇರದೇ ಇರಬಹುದು, ಆದರೆ ಅವರು ಹಾಕಿಕೊಟ್ಟ ಆದರ್ಶ, ಸಿನಿಮಾ, ನೆನಪು ಸದಾ ಜೀವಂತ. ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರ ಹೆಸರಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ರಾಜ್​ಕುಮಾರ್ ಸಮಾಧಿಗೆ ಕುಟುಂಬದವರು ಬಂದು ಪೂಜೆ ಸಲ್ಲಿಸೋ ಸಾಧ್ಯತೆ ಇದೆ. ರಾಜ್​ಕುಮಾರ್ ಬಗ್ಗೆ ಪಾರ್ವತಮ್ಮ ಹೇಳಿದ ಒಂದು ಅಪರೂಪದ ವಿಚಾರ ಇಲ್ಲಿದೆ.

ರಾಜ್​ಕುಮಾರ್ ಅವರು ಅನೇಕರಿಗೆ ಮಾದರಿ. ಅವರು ಫಿಟ್ನೆಸ್​ನ ಆ ರೀತಿಯಲ್ಲಿ ಕಾಪಾಡಿಕೊಂಡು ಹೋಗಿದ್ದರು. ಒಮ್ಮೆ ರಾಜ್​ಕುಮಾರ್ ಮನೆಗೆ ಬಂದಿದ್ದ ಕಾಲೇಜು ಹುಡುಗಿಯರು ಅಣ್ಣಾವ್ರನ್ನು ಶರ್ಟ್​ಲೆಸ್ ಆಗಿ ನೋಡಲು ಇಚ್ಛಿಸಿದ್ದರು. ಇದಕ್ಕೆ ಅವರು ಕೊಟ್ಟ ಕಾರಣ ಮಾತ್ರ ತುಂಬಾನೇ ವಿಚಿತ್ರವಾದದ್ದು. ಈ ಬಗ್ಗೆ ಪಾರ್ವತಮ್ಮ ಅವರು ಹೇಳಿಕೊಂಡಿದ್ದರು.

‘ಒಮ್ಮೆ ಮನೆಗೆ ಸುಮಾರು 25 ಕಾಲೇಜು ಹುಡುಗಿಯರು ಬಂದರು. ಅವರಿಗೆ ರಾಜ್​ಕುಮಾರ್ ಅವರನ್ನು ನೋಡೋ ಬಯಕೆ. ನನ್ನ ಬಳಿ ಬಂದು ರಾಜ್​ಕುಮಾರ್ ಅವರನ್ನು ನೋಡಬೇಕು ಎಂದರು. ಅವರು ಮಲಗಿದ್ದಾರೆ ಆ ಬಳಿಕ ಬನ್ನಿ ಎಂದು ಹೇಳಿ ಕಳುಹಿಸಿದೆ. ಆದರೆ, ಅವರು ಇದಕ್ಕೆ ಒಪ್ಪಲಿಲ್ಲ. ಕೊನೆಗೆ ನಾನು ಹೋಗಿ ಅವರನ್ನು ಎಬ್ಬಿಸಿದೆ. ಅವರು ಎದ್ದು ಬಂದರು’ ಎಂದರು ಪಾರ್ವತಮ್ಮ.

ಇದನ್ನೂ ಓದಿ: ಡಾ. ರಾಜ್​ಕುಮಾರ್​ ಜನ್ಮದಿನಕ್ಕೆ ‘ಮೈ ನೇಮ್ ಇಸ್ ರಾಜ್’ ಸಂಗೀತ ಕಾರ್ಯಕ್ರಮ

ಹುಡುಗಿಯರು ಇಟ್ಟ ಬೇಡಿಕೆ ಕೇಳಿ ಅವರಿಗೆ ಶಾಕ್ ಆಗಿತ್ತು. ‘ರಾಜ್​ಕುಮಾರ್ ಅವರನ್ನು ಶರ್ಟ್​ಲೆಸ್ ಆಗಿ ನೋಡಬೇಕು ಎಂದು ಕೇಳಿದರು. ನನಗೆ ಶಾಕ್ ಆಯಿತು. ಆಗ ಅವರು ದಯವಿಟ್ಟು ಬೇರೆ ಅರ್ಥದಲ್ಲಿ ತಿಳಿದುಕೊಳ್ಳಬೇಡಿ. ಸಿನಿಮಾದಲ್ಲಿ ಆ ರೀತಿ ಫಿಟ್ ಆಗಿ ಕಾಣುತ್ತಾರಲ್ಲ, ನಿಜಕ್ಕೂ ಹಾಗೆಯೇ ಇದ್ದಾರಾ ಅನ್ನೋದನ್ನು ನೋಡಬೇಕು. ಅದಕ್ಕಾಗಿ ಶರ್ಟ್​ಲೆಸ್ ಆಗಿ ನೋಡಬೇಕು ಎಂದು ಅವರು ನನ್ನ ಬಳಿ ಹೇಳಿದರು. ಕೊನೆಗೆ ರಾಜ್​ಕುಮಾರ್ ಅವರನ್ನು ಒಪ್ಪಿಸಬೇಕಾಯಿತು’ ಎಂದಿದ್ದರು ಪಾರ್ವತಮ್ಮ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:59 am, Wed, 24 April 24