AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಕನ್ನಡದ ‘ಕೆಂಡ’ ಸಿನಿಮಾ ಆಯ್ಕೆ

ಕನ್ನಡದ ‘ಕೆಂಡ’ ಸಿನಿಮಾ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್​’ಗೆ ಆಯ್ಕೆ ಆಗಿದೆ. ಇದು ಸಹದೇವ್ ಕೆಲವಡಿ ಅವರ ನಿರ್ದೇಶನದಲ್ಲಿ ಬರುತ್ತಿರುವ ಮೊದಲ ಸಿನಿಮಾ. ಈ ಮೂಲಕ ಸಹದೇವ್ ಕೆಲವಡಿ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಗೆಲುವಿನ ಮೆಟ್ಟಿಲೊಂದನ್ನು ಹತ್ತಿದಂತಾಗಿದೆ. ಒಂದಷ್ಟು ಕಾರಣಗಳಿಂದ ಈ ಸಿನಿಮಾ ತಂಡ ಗಮನ ಸೆಳೆಯುತ್ತಿದೆ.

‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಕನ್ನಡದ ‘ಕೆಂಡ’ ಸಿನಿಮಾ ಆಯ್ಕೆ
‘ಕೆಂಡ’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Apr 23, 2024 | 6:02 PM

Share

ಸಹದೇವ್ ಕೆಲವಡಿ ಅವರು ನಿರ್ದೇಶನ ಮಾಡಿರುವ ‘ಕೆಂಡ’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ‘ಗಂಟುಮೂಟೆ’ ಚಿತ್ರದ ಖ್ಯಾತಿಯ ರೂಪಾ ರಾವ್ (Roopa Rao) ಅವರು ನಿರ್ಮಾಣ ಮಾಡಿರುವ ಈ ಚಿತ್ರವು ಭಿನ್ನವಾದ ಒಂದು ಕಥಾಹಂದರವನ್ನು ಹೊಂದಿದೆ ಎಂಬ ವಿಚಾರ ಈಗಾಗಲೇ ಟೀಸರ್​, ಪೋಸ್ಟರ್, ಹಾಡುಗಳ​ ಮೂಲಕ ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ‘ಕೆಂಡ’ (Kenda) ಸಿನಿಮಾದ ಬಗ್ಗೆ ಇನ್ನೊಂದು ಖುಷಿಯ ಸಮಾಚಾರವನ್ನು ಚಿತ್ರತಂಡವರು ಹಂಚಿಕೊಂಡಿದ್ದಾರೆ. ಅದೇನೆಂದರೆ, ‘ಕೆಂಡ’ ಚಿತ್ರವು ಈಗ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್’ಗೆ (Dadasaheb Phalke Film Festival) ಆಯ್ಕೆ ಆಗಿದೆ.

14ನೇ ಸಾಲಿನ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್-2024’ ದೆಹಲಿಯಲ್ಲಿ ನಡೆಯಲಿದ್ದು, ಈ ಚಿತ್ರೋತ್ಸವಕ್ಕೆ ‘ಕೆಂಡ’ ಸಿನಿಮಾ ಪ್ರವೇಶ ಪಡೆದುಕೊಂಡಿದೆ. ಇದು ಚಿತ್ರತಂಡಕ್ಕೆ ಮಾತ್ರವಲ್ಲದೇ, ಕನ್ನಡ ಸಿನಿಮಾರಂಗದ ಪಾಲಿಗೂ ಹೆಮ್ಮೆಯ ಸಂಗತಿ. ಈ ಚಿತ್ರೋತ್ಸವವು ಪ್ರತಿಷ್ಠೆಯನ್ನು ಕಾಯ್ದುಕೊಂಡು ಬಂದಿದ್ದು, ಇದಕ್ಕೆ ತಮ್ಮ ಸಿನಿಮಾ ಆಯ್ಕೆ ಆಗಬೇಕು ಎಂದು ಎಷ್ಟೋ ಚಿತ್ರತಂಡದವರು ಕನಸು ಕಂಡಿರುತ್ತಾರೆ. ಹಾಗಂತ, ಈ ಸಿನಿಮೋತ್ಸವಕ್ಕೆ ಆಯ್ಕೆ ಆಗುವುದು ಸುಲಭವಲ್ಲ.

‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್’ನ ಹಲವು ಮಾನದಂಡಗಳಲ್ಲಿ ಪಾಸ್​ ಆಗಿ ಸೈ ಎನಿಸಿಕೊಳ್ಳಬೇಕು. ಆಗ ಮಾತ್ರವೇ ಸಿನಿಮಾ ಆಯ್ಕೆ ಆಗಲು ಸಾಧ್ಯ. ಎಲ್ಲ ರೀತಿಯಿಂದಲೂ ಆ ರೀತಿಯ ಅಗತ್ಯ ಗುಣಮಟ್ಟ ಕಾಯ್ದುಕೊಂಡ ಸಿನಿಮಾಗಳು ಮಾತ್ರ ಇದರಲ್ಲಿ ಅವಕಾಶ ಪಡೆಯುತ್ತವೆ. ಆ ಎಲ್ಲ ಮಾನದಂಡಗಳನ್ನು ದಾಟಿಕೊಂಡು ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್’ಗೆ ‘ಕೆಂಡ’ ಸಿನಿಮಾ ಆಯ್ಕೆ ಆಗಿದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಕೆಂಡ’ ಸಿನಿಮಾಗೆ ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್​ ಸಂಗೀತ ನಿರ್ದೇಶನ

‘ಅಮೇಯುಕ್ತಿ ಸ್ಟುಡಿಯೋಸ್’ ಮೂಲಕ ‘ಕೆಂಡ’ ಸಿನಿಮಾವನ್ನು ರೂಪಾ ರಾವ್ ಅವರು ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಪ್ರದೀಪ್ ನಾಯಕ್ ಅವರು ಸಂಕಲನ ಮಾಡಿದ್ದಾರೆ. ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನ ಮಾಡಿದ್ದಾರೆ. ಬಿ.ವಿ. ಭರತ್, ವಿನೋದ್ ಸುಶೀಲ, ಪ್ರಣವ್ ಶ್ರೀಧರ್, ಗೋಪಾಲಕೃಷ್ಣ ದೇಶಪಾಂಡೆ, ಬಿಂದು ರಕ್ಷಿದಿ, ಸಚಿನ್ ಶ್ರೀನಾಥ್, ಶರತ್ ಗೌಡ, ಸತೀಶ್​ ಕುಮಾರ್, ಪೃಥ್ವಿ ಬನವಾಸಿ, ಅರ್ಚನ ಶ್ಯಾಮ್, ದೀಪ್ತಿ ನಾಗೇಂದ್ರ ಮುಂತಾದ ಕಲಾವಿದರು ‘ಕೆಂಡ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್