AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಂಡ’ ಸಿನಿಮಾಗೆ ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್​ ಸಂಗೀತ ನಿರ್ದೇಶನ

‘ಕೆಂಡ’ ಸಿನಿಮಾಗೆ ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್​ ಸಂಗೀತ ನಿರ್ದೇಶನ

ಮದನ್​ ಕುಮಾರ್​
|

Updated on: Mar 14, 2024 | 10:47 PM

Share

ಖ್ಯಾತ ಗೀತರಚನಕಾರ ಜಯಂತ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ‘ಕೆಂಡ’ ಸಿನಿಮಾಗೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಹಾಡು ಬಿಡುಗಡೆ ಆಗಿದ್ದು, ಆ ಗೀತೆಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಸಾಂಗ್​ ಬಿಡುಗಡೆ ವೇಳೆ ಪುತ್ರನ ಬಗ್ಗೆ ಜಯಂತ ಕಾಯ್ಕಿಣಿ ಅವರು ಮಾತನಾಡಿದ್ದಾರೆ.

ಸಹದೇವ ಕೆಲವಡಿ ಅವರು ನಿರ್ದೇಶನ ಮಾಡಿರುವ ‘ಕೆಂಡ’ (Kenda) ಸಿನಿಮಾಗೆ ರಿತ್ವಿಕ್​ ಕಾಯ್ಕಿಣಿ (Ritwik Kaikini) ಅವರು ಸಂಗೀತ ನೀಡಿದ್ದಾರೆ. ಈ ಮೂಲಕ ಮ್ಯೂಸಿಕ್​ ಡೈರೆಕ್ಟರ್​ ಆಗಿ ಅವರು ಸ್ಯಾಂಡಲ್​ವುಡ್​ಗೆ ಪರಿಚಿತರಾಗುತ್ತಿದ್ದಾರೆ. ಈ ಸಿನಿಮಾದ ‘ತಾಜಾ ಸುದ್ದಿ..’ ಹಾಡು ಬಿಡುಗಡೆ ಆಗಿದೆ. ಜಯಂತ್​ ಕಾಯ್ಕಿಣಿ (Jayanth Kaikini) ಬರೆದ ಈ ಹಾಡಿಗೆ ಅನನ್ಯಾ ಭಗತ್​ ಹಾಗೂ ರಿತ್ವಿಕ್​ ಕಾಯ್ಕಿಣಿ ಧ್ವನಿ ನೀಡಿದ್ದಾರೆ. ‘ಡಿ-ಬೀಟ್ಸ್​’ ಮೂಲಕ ಈ ಸಾಂಗ್​ ರಿಲೀಸ್​ ಆಗಿದೆ. ನಿರ್ದೇಶಕ ಯೋಗರಾಜ್​ ಭಟ್​, ಸಂಗೀತ ನಿರ್ದೇಶಕ ಹರಿಕೃಷ್ಣ, ಶೈಲಜಾ ನಾಗ್​ ಅವರು ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದ್ದಾರೆ. ‘ಅಮೆಯುಕ್ತಿ ಸ್ಟುಡಿಯೋಸ್​’ ಮೂಲಕ ರೂಪಾ ರಾವ್​ ಮತ್ತು ಸಹದೇವ್​ ಕೆಲವಡಿ ಅವರು ‘ಕೆಂಡ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬಿ.ವಿ. ಭರತ್​, ಪ್ರಣವ್​ ಶ್ರೀಧರ್​, ವಿನೋದ್​, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ನಾನು ಸಾಹಿತಿಯಾಗಿ ಮಾತನಾಡಬಹುದು. ಆದರೆ ತಂದೆಯಾಗಿ ಮಾತನಾಡಿದರೆ ಮನೆಗೆ ಹೋದಮೇಲೆ ನಾನೇ ಪೆಟ್ಟು ತಿನ್ನಬೇಕಾಗುತ್ತದೆ. ಇದು ನನಗೆ ತುಂಬಾ ಕೌಟುಂಬಿಕವಾದ ಕ್ಷಣ. ಎಷ್ಟೋ ವರ್ಷಗಳ ಹಿಂದೆ ಇದೇ ರೀತಿಯ ಬಾಂಧವ್ಯ ಶೈಲಜಾ ನಾಗ್​, ಬಿ. ಸುರೇಶ ಹಾಗೂ ಯೋಗರಾಜ್​ ಭಟ್​ ಅವರ ನಡುವೆ ಮೂಡಿತ್ತು. ಈಗ ರಿತ್ವಿಕ್​ ಹಾಗೂ ಸಹದೇವ್​ ಅವರ ಪಯಣ ಶುರುವಾಗಿದೆ. ರಿತ್ವಿಕ್​ ಬಗ್ಗೆ ನನಗೆ ಖುಷಿಯಾಗುತ್ತದೆ. ಅವನಿಗೆ ಇಷ್ಟವಾದ ಕೆಲಸ ಮಾಡುತ್ತಿದ್ದಾನೆ. ಅದಕ್ಕೆ ಉತ್ತಮವಾದ ಸಹಯೋಗ ಸಿಕ್ಕಿದೆ’ ಎಂದು ಜಯಂತ್​ ಕಾಯ್ಕಿಣಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More