AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಂಡ’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಹೊಸ ವಿಡಿಯೋ ಬಿಡುಗಡೆ; ಇಲ್ಲಿದೆ ಝಲಕ್​

‘ಕೆಂಡ’ ಸಿನಿಮಾದಲ್ಲಿನ ಪಾತ್ರಗಳು ಗಮನ ಸೆಳೆಯುತ್ತಿವೆ. ಭಿನ್ನ-ವಿಭಿನ್ನವಾದ ಪಾತ್ರಗಳ ಪರಿಚಯಕ್ಕಾಗಿ ಪೋಸ್ಟರ್​ ಮತ್ತು ಹೊಸ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ರಂಗಭೂಮಿ ಹಿನ್ನೆಲೆ ಇರುವ ಕಲಾವಿದರು ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಕೆಂಡ’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಹೊಸ ವಿಡಿಯೋ ಬಿಡುಗಡೆ; ಇಲ್ಲಿದೆ ಝಲಕ್​
‘ಕೆಂಡ’ ಸಿನಿಮಾದ ಪಾತ್ರಗಳು
Follow us
ಮದನ್​ ಕುಮಾರ್​
|

Updated on: Oct 31, 2023 | 3:29 PM

‘ಕೆಂಡ’ ಸಿನಿಮಾ (Kenda Kannada Movie) ಮೋಷನ್ ಪೋಸ್ಟರ್ ಮೂಲಕ ಗಮನ ಸೆಳೆದಿದೆ. ಈ ಮೊದಲು ‘ಗಂಟುಮೂಟೆ’ ಚಿತ್ರ ಮಾಡಿದ ತಂಡವೇ ‘ಕೆಂಡ’ ಸಿನಿಮಾಗೆ ಒಂದಾಗಿದೆ. ‘ಗಂಟುಮೂಟೆ’ ಚಿತ್ರದ ನಿರ್ದೇಶಕಿ ರೂಪಾ ರಾವ್ (Roopa Rao) ಹಾಗೂ ಛಾಯಾಗ್ರಾಹಕ, ಸಹ ನಿರ್ಮಾಪಕ ಸಹದೇವ್ ಕೆಲವಡಿ ಅವರು ಜೊತೆಯಾಗಿ ‘ಕೆಂಡ’ ಚಿತ್ರವನ್ನು ಈಗ ರೂಪಿಸಿದ್ದಾರೆ. ಈ ಸಿನಿಮಾದ ಮೂಲಕ ಸಹದೇವ್ ಅವರು ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ಭಿನ್ನ-ವಿಭಿನ್ನವಾದ ಪಾತ್ರಗಳು ಇವೆ. ಆ ಪಾತ್ರಗಳ ಪರಿಚಯಕ್ಕಾಗಿ ಪೋಸ್ಟರ್​ ಮತ್ತು ಹೊಸ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ಸಚ್ಚಾ ಅವರು ಲೋಕೇಶ್ ಎಂಬ ಪಾತ್ರ ಮಾಡಿದ್ದಾರೆ. ಜಯರಾಮ್ ಆಗಿ ಶರತ್ ಗೌಡ ನಟಿಸಿದ್ದಾರೆ. ಪ್ರಣವ್ ಶ್ರೀಧರ್ ಅವರು ವಿನಾಯಕ ಎಂಬ ಪಾತ್ರವನ್ನು ಮಾಡಿದ್ದಾರೆ. ಕೇಶವ ಎಂಬ ಪಾತ್ರಕ್ಕೆ ಬಿ.ವಿ. ಭರತ್ ಬಣ್ಣ ಹಚ್ಚಿದ್ದಾರೆ. ಈ ಎಲ್ಲ ಪಾತ್ರಗಳ ಗೆಟಪ್​ ಮತ್ತು ಲುಕ್​ ಗಮನ ಸೆಳೆಯುತ್ತಿದೆ. ಸಿನಿಮಾಗಳಲ್ಲಿನ ಪಾತ್ರಗಳು ಚೆನ್ನಾಗಿದ್ದರೆ ಅವು ವಿಶೇಷವಾದ ಕ್ರೇಜ್​ ಸೃಷ್ಟಿಸುತ್ತವೆ. ಅದೇ ರೀತಿ ‘ಕೆಂಡ’ ಸಿನಿಮಾದಲ್ಲಿನ ಪಾತ್ರಗಳು ಟ್ರೆಂಡ್​ ಆಗುವ ಲಕ್ಷಣ ಗೋಚರಿಸಿದೆ.

ಇದನ್ನೂ ಓದಿ: ‘ಗರಡಿ’ ಸಿನಿಮಾ ಪ್ರಮೋಷನ್​ಗೆ ಯೋಗರಾಜ್ ಭಟ್ ಪ್ರಕಟಿಸಿದರು ಹೊಸ ನ್ಯೂಸ್ ಪೇಪರ್

‘ಅಮೇಯುಕ್ತಿ ಸ್ಟುಡಿಯೋಸ್’ ಮೂಲಕ ‘ಕೆಂಡ’ ಚಿತ್ರ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲಿನ ಕಥೆಯ ಶೈಲಿ ತುಂಬ ರಗಡ್​ ಆಗಿರಲಿದೆ. ಶೀರ್ಷಿಕೆ ಕೂಡ ಅದೇ ರೀತಿಯಲ್ಲಿದೆ. ಈಗ ಪಾತ್ರಗಳ ಪರಿಚಯದಿಂದ ಪ್ರೇಕ್ಷಕರ ವಲಯದಲ್ಲಿ ಭರವಸೆ ಹೆಚ್ಚಾಗಿದೆ.

ಈ ಸಿನಿಮಾದಲ್ಲಿ ಬಹುತೇಕ ಹೊಸಬರು ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆ ಇರುವ ಕಲಾವಿದರು ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಪ್ರಣವ್ ಶ್ರೀಧರ್, ಬಿ.ವಿ. ಭರತ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಖ್ಯಾತ ಬಾಲಿವುಡ್​ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಕನ್ನಡದ ‘ಡ್ಯಾಡ್​’ ಸಿನಿಮಾ ಟೀಸರ್​

ಈ ಸಿನಿಮಾದ ತಾಂತ್ರಿಕ ಬಳಗ ಕೂಡ ಗಮನ ಸೆಳೆಯುತ್ತಿದೆ. ಜನಪ್ರಿಯ ಸಾಹಿತಿ ಜಯಂತ್ ಕಾಯ್ಕಿಣಿ ಅವರು ‘ಕೆಂಡ’ ಸಿನಿಮಾದ ಎರಡು ಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ. ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗುತ್ತಿರುವುದು ವಿಶೇಷ. ಆಸ್ಕರ್ ಪ್ರಶಸ್ತಿ ಪುರಸ್ಕೃತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರದ ತಂಡದಲ್ಲಿ​ ಕೆಲಸ ಮಾಡಿದ್ದ ಶ್ರೇಯಾಂಕ್ ನಂಜಪ್ಪ ಅವರು ‘ಕೆಂಡ’ ಸಿನಿಮಾಗೆ ಸೌಂಡ್​ ಡಿಸೈನ್​ ಮಾಡಿದ್ದಾರೆ. ಸದ್ಯಕ್ಕೆ ಈ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಚಾಲ್ತಿಯಲ್ಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ