ಭರ್ಜರಿ ಅವಕಾಶ: ನೆಚ್ಚಿನ ನಟನ ಎದುರೇ ವಿಲನ್ ಆಗಲಿದ್ದಾರೆ ದುನಿಯಾ ವಿಜಯ್

Duniya Vijay: ನಟ ದುನಿಯಾ ವಿಜಯ್​ಗೆ ಮತ್ತೊಂದು ದೊಡ್ಡ ಅವಕಾಶ ಎದುರಾಗಿದೆ. ತಮ್ಮ ಮೆಚ್ಚಿನ ನಟನ ಎದುರು ವಿಲನ್ ಆಗಿ ನಟಿಸಲಿದ್ದಾರೆ ದುನಿಯಾ ವಿಜಯ್.

ಭರ್ಜರಿ ಅವಕಾಶ: ನೆಚ್ಚಿನ ನಟನ ಎದುರೇ ವಿಲನ್ ಆಗಲಿದ್ದಾರೆ ದುನಿಯಾ ವಿಜಯ್
ದುನಿಯಾ ವಿಜಯ್
Follow us
ಮಂಜುನಾಥ ಸಿ.
|

Updated on: Oct 31, 2023 | 6:54 PM

ಸತತ ಸೋಲುಗಳಿಂದ ಕಂಗೆಟ್ಟಿದ್ದ ದುನಿಯಾ ವಿಜಯ್​ (Duniya Vijay) ಅವರನ್ನು ಕೈಹಿಡಿದಿದ್ದು ‘ಸಲಗ’ ಸಿನಿಮಾ. ಅವರೇ ನಿರ್ದೇಶಿಸಿ, ನಟಿಸಿದ ‘ಸಲಗ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ಆ ಸಿನಿಮಾದ ಬಳಿಕ ಮತ್ತೆ ದುನಿಯಾ ವಿಜಯ್​ರ ನಟನಾ ವೃತ್ತಿ ಟ್ರ್ಯಾಕ್​ಗೆ ಬಂದಂತಿದೆ. ‘ಸಲಗ’ ಸಿನಿಮಾದ ಬಳಿಕ ದುನಿಯಾ ವಿಜಯ್​ಗೆ ಪರಭಾಷೆ ಸಿನಿಮಾಗಳ ಅವಕಾಶಗಳೂ ಸಹ ಹೆಚ್ಚಾಗಿವೆ. ತೆಲುಗಿನಲ್ಲಿ ಬಾಲಕೃಷ್ಣ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ವಿಜಿ, ಇದೀಗ ತಮ್ಮ ಆರಾಧ್ಯ ದೈವ, ಅಚ್ಚುಮೆಚ್ಚಿನ ನಟನ ಎದುರು ವಿಲನ್ ಆಗಿ ನಟಿಸಲಿದ್ದಾರೆ.

ದುನಿಯಾ ವಿಜಯ್​ಗೆ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಎಂದರೆ ಅಚ್ಚುಮೆಚ್ಚು. ತಾವು ರಜನೀಕಾಂತ್ ಫ್ಯಾನ್ ಎಂಬುದನ್ನು ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಅವರ ಎದುರೇ ವಿಲನ್ ಆಗಿ ನಟಿಸುವ ಅವಕಾಶ ದುನಿಯಾ ವಿಜಯ್​ರನ್ನು ಅರಸಿ ಬಂದಿದೆ ಎನ್ನಲಾಗುತ್ತಿದೆ.

ರಜನೀಕಾಂತ್​ರ ಹೊಸ ಸಿನಿಮಾವನ್ನು ತಮಿಳಿನ ಯಶಸ್ವೀ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್. ಈಗಾಗಲೇ ಲೋಕೇಶ್ ಕನಗರಾಜ್ ದುನಿಯಾ ವಿಜಯ್ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ನಿಖಿಲ್​ ಕುಮಾರ್​ ಸಿನಿಮಾದಲ್ಲಿ ದುನಿಯಾ ವಿಜಯ್​ ವಿಲನ್​? ಹಬ್ಬಿದೆ ಗುಸು ಗುಸು

ರಜನೀಕಾಂತ್ ಪ್ರಸ್ತುತ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಜೈ ಭೀಮ್’ ಸಿನಿಮಾ ನಿರ್ದೇಶಿಸಿದ್ದ ಟಿಜೆ ಜ್ಞಾನವೇಲು ನಿರ್ದೇಶನದ ಸಿನಿಮಾದಲ್ಲಿ ರಜನೀಕಾಂತ್ ನಟಿಸುತ್ತಿದ್ದಾರೆ. ಅದರ ಜೊತೆಗೆ ತಮ್ಮ ಪುತ್ರಿ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿಯೂ ರಜನೀ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾದಲ್ಲಿ ರಜನೀಕಾಂತ್ ನಟಿಸಲಿದ್ದಾರೆ. ಇದೇ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ರಜನೀಕಾಂತ್ ಜೊತೆ ನಟಿಸಿದ ನಟರಿಗೆ ದೊಡ್ಡ ಮಟ್ಟದ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಅದರಲ್ಲಿಯೂ ಲೋಕೇಶ್ ಕನಗರಾಜ್ ಅಂತೂ ತಮ್ಮ ಸಿನಿಮಾಗಳಲ್ಲಿ ವಿಲನ್ ಪಾತ್ರಗಳನ್ನು ಅದ್ಭುತವಾಗಿ ಸೃಷ್ಟಿಸಿರುತ್ತಾರೆ, ಬಹಳ ಒಳ್ಳೆಯ ಸೀನ್​ಗಳನ್ನು ವಿಲನ್​ ಪಾತ್ರಗಳಿಗೆ ಇಟ್ಟಿರುತ್ತಾರೆ. ಹಾಗಾಗಿ ದುನಿಯಾ ವಿಜಯ್ ಅವರ ಪ್ರತಿಭೆಗೆ ದೊಡ್ಡ ಅವಕಾಶವೇ ಸಿಕ್ಕಂತಾಗಿದೆ.

ದುನಿಯಾ ವಿಜಯ್ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರೇ ನಿರ್ದೇಶಿಸಿರುವ ‘ಭೀಮ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಹಾಡು ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿದೆ. ಸಿನಿಮಾದ ಪ್ರಚಾರದಲ್ಲಿ ಶೀಘ್ರವೇ ದುನಿಯಾ ವಿಜಯ್ ಭಾಗಿಯಾಗಲಿದ್ದಾರೆ. ‘ಭೀಮ’ ಸಿನಿಮಾ ಬಿಡುಗಡೆ ಬಳಿಕ ದುನಿಯಾ ವಿಜಯ್ ತಮಿಳು ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ