‘ಟಾಕ್ಸಿಕ್’ ಕಥೆ ಏನು ಎಂಬುದನ್ನು ಓಪನ್ ಆಗಿ ಹೇಳಿದ ಯಶ್; ವಿಡಿಯೋ ವೈರಲ್

ಅಪ್ಪ-ಮಗನ ಸೇಡಿನ ಕಥೆ ‘ಟಾಕ್ಸಿಕ್’ ಚಿತ್ರದಲ್ಲಿ ಇದೆ. ಪೋರ್ಚುಗೀಸ್ ಕಾಲದ ಗೋವಾದಲ್ಲಿ ಈ ಕಥೆ ನಡೆಯುತ್ತದೆ. ಈ ಮಾಹಿತಿಯನ್ನು ಸ್ವತಃ ಯಶ್ ಅವರೇ ಬಿಟ್ಟುಕೊಟ್ಟಿದ್ದಾರೆ. ವಿದೇಶಿ ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ಯಶ್ ಅವರು ಈ ವಿಷಯ ಹಂಚಿಕೊಂಡಿದ್ದಾರೆ. ಇದರಿಂದ ಕಥೆ ಬಹಿರಂಗ ಆದಂತಾಗಿದೆ.

‘ಟಾಕ್ಸಿಕ್’ ಕಥೆ ಏನು ಎಂಬುದನ್ನು ಓಪನ್ ಆಗಿ ಹೇಳಿದ ಯಶ್; ವಿಡಿಯೋ ವೈರಲ್
Yash

Updated on: Apr 17, 2026 | 10:42 PM

‘ರಾಕಿಂಗ್ ಸ್ಟಾರ್’ ಯಶ್ (Yash) ಅವರಿಗೆ 2026ರ ವರ್ಷ ಅತ್ಯಂತ ಲಾಭದಾಯಕ ಮತ್ತು ಮಹತ್ವದ ವರ್ಷವಾಗಲಿದೆ. ಈ ವರ್ಷ ಅವರ ಅಭಿನಯದ ಎರಡು ಬಹುನಿರೀಕ್ಷಿತ ಚಿತ್ರಗಳಾದ ‘ಟಾಕ್ಸಿಕ್’ (Toxic) ಮತ್ತು ‘ರಾಮಾಯಣ’ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಇತ್ತೀಚಿಗೆ ಯಶ್ ಅವರು ವಿದೇಶಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಗಳಲ್ಲಿ ತಮ್ಮ ಚಿತ್ರಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ! ಇದರಿಂದಾಗಿ ‘ಟಾಕ್ಸಿಕ್’ ಸಿನಿಮಾದ ಕತೆಯೇ (Toxic movie Plot) ಲೀಕ್ ಆದಂತೆ ಆಗಿದೆ.

‘ಕೆಜಿಎಫ್ 2’ ಮೂಲಕ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ಈಗ ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಮೂಲಕ ಯಶ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರಚಾರದ ಸಲುವಾಗಿ ವಿದೇಶಿ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಲು ಆರಂಭಿಸಿದ್ದಾರೆ. ಸಂದರ್ಶನದಲ್ಲಿ ಮಾತನಾಡುವಾಗ ಅವರು ಕಥೆಯ ಒನ್​ಲೈನ್ ಏನು ಮತ್ತು ಅದು ಯಾವ ಕಾಲಘಟ್ಟದಲ್ಲಿ ಸಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಯಶ್ ಬಿಟ್ಟಿಕೊಟ್ಟಿರುವ ಮಾಹಿತಿ ಪ್ರಕಾರ, ‘ಟಾಕ್ಸಿಕ್’ ಕೇವಲ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ. ಇದು ತಂದೆ ಮತ್ತು ಮಗನ ನಡುವಿನ ಸೇಡಿನ ಕಥೆಯಾಗಿದೆ. ಈ ಚಿತ್ರದ ಕಥೆಯು ಒಂದು ಆಸಕ್ತಿದಾಯಕ ಕಾಲಘಟ್ಟದಲ್ಲಿ ನಡೆಯುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಗೋವಾದ ಒಂದು ಭಾಗ 1961ರವರೆಗೆ ಪೋರ್ಚುಗೀಸರ ಆಳ್ವಿಕೆಯಲ್ಲೇ ಇತ್ತು. ಆ ಕಾಲಘಟ್ಟವನ್ನೇ ಚಿತ್ರದ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ ಎಂದು ಯಶ್ ಅವರು ಹೇಳಿದ್ದಾರೆ.

ವೈರಲ್ ವಿಡಿಯೋ:

ಈ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿದ ಬಳಿಕ ಅಭಿಮಾನಿಗಳ ಕೌತುಕ ಜಾಸ್ತಿ ಆಗಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಅವರು ಅಭಿನಯಿಸಿದ್ದಾರೆ. ಸದ್ಯಕ್ಕೆ ಈ ಚಿತ್ರದ ಟೀಸರ್ ಸಖತ್ ಸದ್ದು ಮಾಡಿದೆ. ಟ್ರೇಲರ್​​ಗಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾವನ್ನು ಆಸ್ಕರ್ ವಿಜೇತ ಸಿನಿಮಾಕ್ಕೆ ಹೋಲಿಸಿದ ಯಶ್

ಈ ಮೊದಲು ‘ಟಾಕ್ಸಿಕ್’ ಸಿನಿಮಾವನ್ನು ಮಾರ್ಚ್ 19ರಂದು ಬಿಡುಗಡೆ ಮಾಡುವ ಪ್ಲ್ಯಾನ್ ಇತ್ತು. ಆದರೆ ಇರಾನ್-ಇಸ್ರೇಲ್ ಯುದ್ಧದ ಕಾರಣದಿಂದ ಸಿನಿಮಾದ ರಿಲೀಸ್ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಲಾಯಿತು. ಇದರಿಂದಾಗಿ ‘ಧುರಂಧರ್ 2’ ಜೊತೆಗಿನ ಕ್ಲ್ಯಾಶ್ ತಪ್ಪಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us