ನಟಿ ರುಕ್ಮಿಣಿ ವಸಂತ್ (Rukmini Vasanth) ಅವರಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ದೊಡ್ಡ ಜನಪ್ರಿಯತೆ ಸಿಕ್ಕಿತು. ಇದಾದ ಬಳಿಕ ಅವರಿಗೆ ಹಲವು ಆಫರ್ಗಳು ಬಂದವು. ಗಣೇಶ್ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಶಿವರಾಜ್ಕುಮಾರ್ ನಟನೆಯ ‘ಬೈರತಿ ರಣಗಲ್’ ಚಿತ್ರಕ್ಕೂ ರುಕ್ಮಿಣಿ ನಾಯಕಿ. ಈಗ ಅವರಿಗೆ ಟಾಲಿವುಡ್ನಿಂದ ಆಫರ್ ಬಂದಿದೆ ಎನ್ನುತ್ತಿವೆ ಅಲ್ಲಿನ ಮಾಧ್ಯಮಗಳು. ಇದರಲ್ಲಿ ನಿಜ ಎಷ್ಟು ಎಂಬ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.
ವಿಜಯ್ ದೇವರಕೊಂಡ ಅವರು ಸದ್ಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಗೀತ ಗೋವಿಂದಂ’ ಖ್ಯಾತಿಯ ಪರಶುರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ‘VD 12’ ಸಿನಿಮಾ ಶೂಟ್ ಆರಂಭಿಸಿದ್ದರು. ಇದಕ್ಕೆ ಶ್ರೀಲೀಲಾ ನಾಯಕಿ ಆಗಿ ಫೈನಲ್ ಆಗಿದ್ದರು. ಆದರೆ, ವಿಜಯ್ ದೇವರಕೊಂಡ ಅವರು ‘ಫ್ಯಾಮಿಲಿ ಸ್ಟಾರ್’ ಕೆಲಸ ಪೂರ್ಣಗೊಂಡ ಬಳಿಕವೇ ‘VD 12’ ಸಿನಿಮಾ ಶೂಟ್ ಆರಂಭಿಸಲು ನಿರ್ಧರಿಸಿದ್ದಾರೆ. ಶ್ರೀಲೀಲಾಗೆ ಡೇಟ್ ಹೊಂದಿಸಲಾಗದ ಕಾರಣ ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ.
ಈಗ ‘VD 12’ ನಿರ್ದೇಶಕ ಗೌತಮ್ ತಿಣ್ಣನುರಿ ಅವರು ಹೊಸ ನಟಿಯ ಹುಡುಕಾಟದಲ್ಲಿದ್ದಾರೆ. ‘ಅನಿಮಲ್’ ಸಿನಿಮಾ ನಟಿ ತೃಪ್ತಿ ದಿಮ್ರಿ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ (ತೆಲುಗು ವರ್ಷನ್) ಮೂಲಕ ಟಾಲಿವುಡ್ನಲ್ಲಿ ಖ್ಯಾತಿ ಪಡೆದ ರುಕ್ಮಿಣಿ ಅವರನ್ನು ಗೌತಮ್ ಸಂಪರ್ಕಿಸಿದ್ದಾರೆ. ಯಾರನ್ನು ಅವರು ಫೈನಲ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಎರಡು ಭಾಗಗಳಲ್ಲಿ ಮಾಡಿದ್ದೇಕೆ: ರಕ್ಷಿತ್ ಶೆಟ್ಟಿ ಕೊಟ್ಟರು ಉತ್ತರ
ರಕ್ಷಿತ್ ಶೆಟ್ಟಿ ಜೊತೆ ನಟಿಸಿದ್ದ ರಶ್ಮಿಕಾ ಅವರು ತೆಲುಗಿನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದು ವಿಜಯ್ ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಮೂಲಕ. ಈ ಚಿತ್ರದಿಂದ ಅವರಿಗೆ ಟಾಲಿವುಡ್ನಲ್ಲಿ ಭದ್ರ ಬುನಾದಿ ಸಿಕ್ಕಿತು. ಈಗ ರಕ್ಷಿತ್ ಸಿನಿಮಾದಲ್ಲಿ ನಟಿಸಿ ಫೇಮಸ್ ಆದ ರುಕ್ಮಿಣಿ ಅವರು ವಿಜಯ್ ದೇವರಕೊಂಡ ಜೊತೆ ತೆರೆ ಹಂಚಿಕೊಳ್ಳಲು ರೆಡಿ ಆಗಿದ್ದಾರೆ. ರಶ್ಮಿಕಾ ರೀತಿಯೇ ರುಕ್ಮಿಣಿ ಖ್ಯಾತಿಯೂ ಹೆಚ್ಚಲಿದೆಯೇ ಎನ್ನುವ ಕುತೂಹಲ ಅನೇಕರದ್ದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Sat, 20 January 24