ಸಲಗ ಚಿತ್ರದ ಮಳೆಯೇ ಮಳೆಯೇ ಸಾಂಗ್ ಸೆಪ್ಟೆಂಬರ್ 5ರಂದು ರಿಲೀಸ್

| Updated By: ಸಾಧು ಶ್ರೀನಾಥ್​

Updated on: Aug 27, 2020 | 4:01 PM

ಕೊರೊನಾ ಮಹಾಮಳೆಯಲ್ಲಿ ಸಲಗ ಚಿತ್ರತಂಡ ಮಲೆನಾಡ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯೆಟ್ ಹಾಡನ್ನು ನಯನ ಮನೋಹರವಾಗಿ ಚಿತ್ರಿಸಿತ್ತು. ಇದೀಗ ಆ ಹಾಡನ್ನ ಪ್ರೇಕ್ಷಕರಿಗೆ ತೋರಿಸೋದಕ್ಕೆ ಚಿತ್ರತಂಡ ಸಜ್ಜಾಗಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸ್ತಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ ಪ್ರಮುಖ‌ ಪಾತ್ರದಲ್ಲಿ‌ಕಾಣಿಸಿಕೊಂಡಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ‌ ಕಾಣಿಸಿಕೊಂಡಿದ್ದಾರೆ. ಟಗರು ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಕೋವಿಡ್ ಹಾವಳಿಯಿಂದ ಎಲ್ಲಾ […]

ಸಲಗ ಚಿತ್ರದ ಮಳೆಯೇ ಮಳೆಯೇ ಸಾಂಗ್ ಸೆಪ್ಟೆಂಬರ್ 5ರಂದು ರಿಲೀಸ್
Follow us on

ಕೊರೊನಾ ಮಹಾಮಳೆಯಲ್ಲಿ ಸಲಗ ಚಿತ್ರತಂಡ ಮಲೆನಾಡ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯೆಟ್ ಹಾಡನ್ನು ನಯನ ಮನೋಹರವಾಗಿ ಚಿತ್ರಿಸಿತ್ತು. ಇದೀಗ ಆ ಹಾಡನ್ನ ಪ್ರೇಕ್ಷಕರಿಗೆ ತೋರಿಸೋದಕ್ಕೆ ಚಿತ್ರತಂಡ ಸಜ್ಜಾಗಿದೆ.

ದುನಿಯಾ ವಿಜಯ್ ನಿರ್ದೇಶಿಸಿ ನಟಿಸ್ತಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ ಪ್ರಮುಖ‌ ಪಾತ್ರದಲ್ಲಿ‌ಕಾಣಿಸಿಕೊಂಡಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ‌ ಕಾಣಿಸಿಕೊಂಡಿದ್ದಾರೆ. ಟಗರು ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಕೋವಿಡ್ ಹಾವಳಿಯಿಂದ ಎಲ್ಲಾ ಲಾಕ್ ಆಗಿದ್ರೂ ಸಲಗ ಮಾತ್ರ ಮತ್ತೊಂದು ವಿಶೇಷ ವಿಚಾರದಿಂದ ಸಖತ್ತಾಗೇ ಘರ್ಜಿಸ್ತಿದೆ.

ಕೋವಿಡ್ ನಡುವೆ ಸರ್ಕಾರ ನೀಡಿರೋ ಎಲ್ಲಾ ಸೂಚನೆಗಳನ್ನು ಪಾಲಿಸಿ, ನಾಯಕ ನಾಯಕಿ ಸೇರಿ ಕೇವಲ 12 ಮಂದಿ ತಂತ್ರಜ್ಞಾನರೊಂದಿಗೆ ಸಲಗದ ಈ ಬ್ಯೂಟಿಫುಲ್ ಹಾಡನ್ನ ಚಿತ್ರಿಸಿರೋದು ವಿಶೇಷ.

ಸಲಗ ಚಿತ್ರಕ್ಕಾಗಿ ಚರಣ್ ರಾಜ್ ಸಂಯೋಜನೆಯ ಮಳೆಯೇ ಮಳೆಯೇ ಅಂಬೆಗಾಲೊಡುತ್ತಾ ಸುರಿಯೇ… ಅನ್ನೋ ರೊಮ್ಯಾಂಟಿಕ್ ಹಾಡನ್ನ ಸಾಹಿತ್ಯಕ್ಕೆ ತಕ್ಕಂತೆ ಜಡಿ‌ಮಳೆಯಲ್ಲೇ ಹೀಗೆ ಸದ್ದಿಲ್ಲದೇ ಚಿತ್ರಿಸಿಕೊಂಡು ಬಂದಿದೆ.

ದುನಿಯಾ ವಿಜಯ್ ಸಂಜನಾ ಆನಂದ್ ನಡುವಿನ ಈ ಪ್ರಣಯ ಗೀತೆಯನ್ನ ಮಳೆ, ಚಳಿ ಯಾವುದನ್ನು ಲೆಕ್ಕಿಸದೆ ಚಿತ್ರೀಕರಿಸಲಾಗಿದೆ. ಅದ್ರಲ್ಲೂ ಛಾಯಾಗ್ರಾಹಕ ಶಿವಸೇನ ಕೆಲ‌ ಸೀಕ್ವೆನ್ಸ್​ಗಳನ್ನ ಒರಿಜಿನಲ್ ಮಳೆಯಲ್ಲೇ ಚಿತ್ರಿಸಿರೋದು ಮತ್ತೊಂದು ವಿಶೇಷ. ಇದೇ ಕಾರಣಕ್ಕೆ ಜಡಿ ಮಳೆಯ ಒಂದು ಶಾಟ್​ಗಾಗಿ ಚಿತ್ರತಂಡ ನಾಲ್ಕೈದು ಗಂಟೆ ಕಾದು 12 ಜನರೂ ಕೂಡಿ ಮಳೆ‌ಕೆಸರಲ್ಲಿ ನಾಲ್ಕು ದಿನ ಎದ್ದು ಬಿದ್ದು ಅದ್ಭುತ ಹಾಡಿನ ಚಿತ್ರೀಕರಣ ಮಾಡಿದ್ದಾರೆ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಹಾಸನದ ಸಕಲೇಶಪುರ ಸೇರಿದಂತೆ ಪಶ್ಚಿಮ ಘಟ್ಟಗಳ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಸಲಗ ಚಿತ್ರದಲ್ಲಿ ಈ ಹಾಡು ಮತ್ತೊಂದು ಸ್ಪೆಷಲ್ ಮತ್ತು‌ ಹೈಲೈಟ್​ಗಳಲ್ಲೊಂದಾಗಿದೆಯಂತೆ. ಈ ಹಾಡು ಇದೇ ಸೆಪ್ಟೆಂಬರ್ 5ರಂದು ಬೆಳಿಗ್ಗೆ 11ಕ್ಕೆ A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್​ನಲ್ಲಿ ರಿಲೀಸ್ ಆಗ್ತಿದೆ.