ಹರಿಯುವ ನದಿಯಲ್ಲಿ ಸಂಚಾರಿ ವಿಜಯ್ ಸಾಹಸ; ‘ಮೇಲೊಬ್ಬ ಮಾಯಾವಿ’ ಚಿತ್ರದ ಮೇಕಿಂಗ್ ವಿಡಿಯೋ
Melobba Maayavi: ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂಬುದು ನಟ ಸಂಚಾರಿ ವಿಜಯ್ ಅವರ ಮುಖ್ಯ ಆಶಯ ಆಗಿತ್ತು. ಅದಕ್ಕಾಗಿ ಎಂಥ ರಿಸ್ಕ್ ಬೇಕಿದ್ದರೂ ತೆಗೆದುಕೊಳ್ಳಲು ಅವರು ತಯಾರಾಗಿದ್ದರು.
ಪ್ರತಿಭಾವಂತ ಕಲಾವಿದ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಲ್ಲಿ ನಿಧನರಾಗುವುದಕ್ಕೂ ಮುನ್ನ ಅನೇಕ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಬೇರೆ ಬೇರೆ ಪಾತ್ರಗಳ ಮೂಲಕ ಜನರನ್ನು ರಂಜಿಸುತ್ತಿದ್ದರು. ಸಿನಿಮಾಗಾಗಿ ಎಂಥ ರಿಸ್ಕ್ ಬೇಕಿದ್ದರೂ ತೆಗೆದುಕೊಳ್ಳಲು ಅವರು ತಯಾರಾಗಿದ್ದರು. ಮೇಲೊಬ್ಬ ಮಾಯಾವಿ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಒಂದು ಘಟನೆಯೇ ಈ ಮಾತಿಗೆ ಸಾಕ್ಷಿ. ನವೀನ್ ಕೃಷ್ಣ ನಿರ್ದೇಶನದ ಮೇಲೊಬ್ಬ ಮಾಯಾವಿ ಸಿನಿಮಾದ ಶೂಟಿಂಗ್ ವೇಳೆ ಸಂಚಾರಿ ವಿಜಯ್ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸಾಹಸ ಮಾಡಿದ್ದರು.
ಹರಿಯುವ ನೀರಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನದಿ ನೀರಿನ ಸುಳಿಯ ಪಕ್ಕದಲ್ಲೇ ಸಂಚಾರಿ ವಿಜಯ್ ಅವರು ಶೀರ್ಷಾಸನ ಹಾಕಿದ್ದರು. ಅಪಾಯ ಕಣ್ಣೆದುರಿಗೆ ಇದ್ದರೂ ಕೂಡ ಅವರು ನದಿಯಲ್ಲಿ ಪಲ್ಟಿ ಹೊಡೆದಿದ್ದರು. ಸ್ವಲ್ಪವೇ ಹೆಚ್ಚು ಕಡಿಮೆ ಆಗಿದ್ದರೂ ಅಂದು ಅವರ ಪ್ರಾಣಕ್ಕೆ ಅಪಾಯ ಆಗುತ್ತಿತ್ತು. ಆ ದೃಶ್ಯದ ಶೂಟಿಂಗ್ ವೇಳೆ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಚಿತ್ರೀಕರಣದ ವೇಳೆ ಏನಾಯ್ತು ಎಂಬುದನ್ನು ವಿವರಿಸುವಂತಹ ಮೇಕಿಂಗ್ ವಿಡಿಯೋ ಈಗ ಲಭ್ಯವಾಗಿದೆ.
ಲಂಕೆ, ಅವಸ್ಥಾಂತರ, ಪಿರಂಗಿಪುರ, ಪುಕ್ಸಟ್ಟೆ ಲೈಫು, ತಲೆದಂಡ ಮುಂತಾದ ಸಿನಿಮಾಗಳು ಬಿಡುಗಡೆ ಆಗುವುದಕ್ಕೂ ಮುನ್ನವೇ ಸಂಚಾರಿ ವಿಜಯ್ ಅವರು ಇಹಲೋಕ ತ್ಯಜಿಸಿದ್ದು ದುಃಖದ ಸಂಗತಿ.
ಇದನ್ನೂ ಓದಿ:
ಸಂಚಾರಿ ವಿಜಯ್ ಹೆಸರು ಬಳಸಿಕೊಂಡು ಪ್ರಚಾರ ಪಡೆದವರಿಗೆ ಸ್ನೇಹಿತ ವೀರೇಂದ್ರ ಮಲ್ಲಣ್ಣ ತಿರುಗೇಟು
ನಟ ಸಂಚಾರಿ ವಿಜಯ್ಗೆ ಜಾತಿ ಭೇದ ಮಾಡಲಾಗಿತ್ತು ಎಂಬ ಆರೋಪ ಸುಳ್ಳು; ಸಹೋದರ ವಿರೂಪಾಕ್ಷ ಸ್ಪಷ್ಟನೆ