ನಟ ಸಂಚಾರಿ ವಿಜಯ್​ಗೆ ಜಾತಿ ಭೇದ ಮಾಡಲಾಗಿತ್ತು ಎಂಬ ಆರೋಪ ಸುಳ್ಳು; ಸಹೋದರ ವಿರೂಪಾಕ್ಷ ಸ್ಪಷ್ಟನೆ

ಕಡೂರು ತಾಲ್ಲೂಕು ಚವಳೂರಿನಲ್ಲಿ ಸಿಂಗಟಗೇರೆ ಹೋಬಳಿ ಸಿದ್ದರಾಮನಳ್ಳಿಯಲ್ಲಿ ನನ್ನ ಜನನವಾಗಿದ್ದು, ರಂಗಾಪುರ ಗ್ರಾಮದಲ್ಲಿ ವಿಜಯ್ ಹುಟ್ಟಿದ್ದ. ಆದರೆ ನಾವು ಬೆಳೆದಿದ್ದೆಲ್ಲ ಪಂಚನಹಳ್ಳಿ ಗ್ರಾಮದಲ್ಲಿ. ಹೀಗಾಗಿ ಪಂಚನಹಳ್ಳಿಯೇ ನಮ್ಮ ಊರು ಎಂಬ ಭಾವನೆ ನಮ್ಮ ಮನಸ್ಸಿನಲ್ಲಿದೆ.

ನಟ ಸಂಚಾರಿ ವಿಜಯ್​ಗೆ ಜಾತಿ ಭೇದ ಮಾಡಲಾಗಿತ್ತು ಎಂಬ ಆರೋಪ ಸುಳ್ಳು; ಸಹೋದರ ವಿರೂಪಾಕ್ಷ  ಸ್ಪಷ್ಟನೆ
2011ರಲ್ಲಿ ತೆರೆಗೆ ಬಂದ ‘ರಂಗಪ್ಪ ಹೋಗ್ಬಿಟ್ಟಾ’ ಸಿನಿಮಾ ಸಂಚಾರಿ ವಿಜಯ್​ ಅವರ ಮೊದಲ ಸಿನಿಮಾ. ರಮೇಶ್​ ಅರವಿಂದ್ ಅಭಿನಯಿಸಿದ ಈ ಚಿತ್ರದಲ್ಲಿ ನೀನಾಸಂ ಸತೀಶ್​, ಮೊದಲಾದವರು ನಟಿಸಿದ್ದರು. ಈ ಚಿತ್ರದಲ್ಲಿ ಸಂಚಾರಿ ವಿಜಯ್​ ಕೂಡ ಕಾಣಿಸಿಕೊಂಡಿದ್ದರು.
Follow us
| Updated By: ಆಯೇಷಾ ಬಾನು

Updated on: Jun 23, 2021 | 9:45 AM

ಸಂಚಾರಿ ವಿಜಯ್ ನಿಧನರಾದ ಬಳಿಕ ಅವರ ವೈಯಕ್ತಿಕ ಜೀವನದ ಕುರಿತು ಹಲವು ವಿಷಯಗಳು ಕೇಳಿಬಂದಿದ್ದವು. ಚಿತ್ರರಂಗದಲ್ಲಿನ ಅವರ ಗೆಳೆಯರು ಎಂದು ಹೇಳಿಕೊಂಡ ಕೆಲವರು ‘ಸಂಚಾರಿ ವಿಜಯ್ ಜಾತಿ ನಿಂದನೆಯಿಂದ ಬಳಲಿದ್ದರು’  ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ಈ ವಿವಾದದ ಬಗ್ಗೆ ಸ್ವತಃ ಸಂಚಾರಿ ವಿಜಯ್ ಅಣ್ಣ ವಿರೂಪಾಕ್ಷ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಕಡೂರು ತಾಲ್ಲೂಕು ಚವಳೂರಿನಲ್ಲಿ ಸಿಂಗಟಗೇರೆ ಹೋಬಳಿ ಸಿದ್ದರಾಮನಳ್ಳಿಯಲ್ಲಿ ನನ್ನ ಜನನವಾಗಿದ್ದು, ರಂಗಾಪುರ ಗ್ರಾಮದಲ್ಲಿ ವಿಜಯ್ ಹುಟ್ಟಿದ್ದ. ಆದರೆ ನಾವು ಬೆಳೆದಿದ್ದೆಲ್ಲ ಪಂಚನಹಳ್ಳಿ ಗ್ರಾಮದಲ್ಲಿ. ಹೀಗಾಗಿ ಪಂಚನಹಳ್ಳಿಯೇ ನಮ್ಮ ಊರು ಎಂಬ ಭಾವನೆ ನಮ್ಮ ಮನಸ್ಸಿನಲ್ಲಿದೆ. ಪಂಚನಹಳ್ಳಿನೇ ನಮ್ಮ ಹುಟ್ಟೂರು ಅನ್ನೋ ಭಾವನೆ ಇದೆ. ಪಂಚನಹಳ್ಳಿಯಲ್ಲಿ ನಮಗೆ ಯಾರೂ ಯಾವುದೇ ಜಾತಿ ಭೇದ ಮಾಡಿರಲಿಲ್ಲ. ಇಡೀ ಊರವರು ನಮ್ಮನ್ನು ಮನೆ‌ಮಕ್ಕಳಂಗೆ ಕಾಪಾಡಿದ್ದರು. ತಮ್ಮನಿಗೆ (ಸಂಚಾರಿ ವಿಜಯ್​​ಗೆ) ಪ್ರಶಸ್ತಿ ಬಂದಾಗ ಎಲ್ಲರೂ ಹರಸಿದ್ದರು. ಊರೆಲ್ಲ ಸಿಹಿಯೂಟ ಹಂಚಿ ಸಂಭ್ರಮಿಸಿದ್ದರು. ಅಂದಿನ ಈ ಘಟನೆಗಳ ಕುರಿತು ಯಾವುದೇ ಬರಹಗಳನ್ನೂ ಎಲ್ಲೂ ದಾಖಲಿಸಿರಲಿಲ್ಲ ಎಂದು ಸಂಚಾರಿ ವಿಜಯ್ ಸಹೋದರ ವಿರೂಪಾಕ್ಷ ಸುಳ್ಳುಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವಿಷಯಗಳು ಸತ್ಯಕ್ಕೆ ದೂರವಾದದ್ದು. ನಮ್ಮನ್ನು ಯಾರೂ ಜಾತಿಬೇಧದಿಂದ ಕಾಣಲಿಲ್ಲ. ಪಂಚನಹಳ್ಳಿ ಮತ್ತು ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ನಮ್ಮ ತಾಯಿಯೆ ಹೆರಿಗೆ ಮಾಡಿಸಿದ್ದಾರೆ. ಅಲ್ಲಿ ಯಾವ ಜಾತಿಬೇಧವೂ ಇರಲಿಲ್ಲ. ಆದರೆ ಸದ್ಯ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ದಯವಿಟ್ಟು ಪಂಚನಹಳ್ಳಿ ಗ್ರಾಮಸ್ಥರು ಈ ಸುದ್ದಿಗಳಿಗೆ ಕಿವಿಗೊಡಬೇಡಿ. ನಾನು ಅಥವಾ ಸಂಚಾರಿ ವಿಜಯ್ ಸ್ವತಃ ಈ ಆರೋಪ ಮಾಡಿಲ್ಲ. ಹೀಗಾಗಿ, ಗ್ರಾಮಸ್ಥರು ಈ ಸುದ್ದಿಗೆ ಕಿವಿಗೊಡಬೇಡಿ. ಅಲ್ಲದೇ ಸಂಚಾರಿ ವಿಜಯ್​ಗೆ ಬಾಡಿಗೆ ಕಟ್ಟಲೂ ಹಣ ಇರಲಿಲ್ಲ ಎಂಬುದೂ ಸುಳ್ಳು ಸುದ್ದಿ ಎಂದು ಸಂಚಾರಿ ವಿಜಯ್ ಅಣ್ಣ ವಿರುಪಾಕ್ಷ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ​ಸಂಚಾರಿ ವಿಜಯ್​ ಬಗ್ಗೆ ಸುಳ್ಳುಗಳ ಸರಮಾಲೆ? ತಪ್ಪು ಮಾಹಿತಿ ಹಬ್ಬಿಸುವವರಿಗೆ ಲಿಂಗದೇವರು ಧಿಕ್ಕಾರ

ಸಂಚಾರಿ ವಿಜಯ್​ಗೆ ಮತ್ತೊಂದು ಮುಖ ಇತ್ತು, ಅದನ್ನು ನಾನು ಕಂಡಿದ್ದೇನೆ; ನೀನಾಸಂ ಸತೀಶ್​

(Alleged allegation of caste discrimination against actor Sanchari Vijay Brother Virupaksha clarified)