‘ರಾಜಕೀಯ ಆಯಾಮದಲ್ಲಿ ಪ್ರಕರಣ ತರಬೇಡಿ’; ನೇಹಾ ಹಿರೇಮಠ್ ಹತ್ಯೆಗೆ ಧ್ವನಿ ಎತ್ತಿದ ಸ್ಯಾಂಡಲ್​ವುಡ್​

‘ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕಾನೂನು ಕ್ರಮಗಳನ್ನು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕೆಂದು ವಿನಂತಿಸುತ್ತೆನೆ. ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

‘ರಾಜಕೀಯ ಆಯಾಮದಲ್ಲಿ ಪ್ರಕರಣ ತರಬೇಡಿ’; ನೇಹಾ ಹಿರೇಮಠ್ ಹತ್ಯೆಗೆ ಧ್ವನಿ ಎತ್ತಿದ ಸ್ಯಾಂಡಲ್​ವುಡ್​
ರಿಷಬ್-ಧ್ರುವ ಸರ್ಜಾ

Updated on: Apr 20, 2024 | 4:01 PM

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಬರ್ಬರ ಹತ್ಯೆಗೆ ಇಡೀ ದೇಶ ಬೆಚ್ಚಿ ಬಿದ್ದಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ್ ಮಗಳು ನೇಹಾ ಕೊಲೆಯಾದ ಯುವತಿ. ಪ್ರೀತಿಸಲು ಒಪ್ಪದ ಫಯಾಜ್ ಎಂಬಾತ ಅವರನ್ನು ಕಾಲೇಜಿನಲ್ಲೇ ಕೊಲೆ ಮಾಡಿದ್ದಾನೆ. ಈ ಪ್ರಕರಣದ ವಿರುದ್ಧ ಸ್ಯಾಂಡಲ್​ವುಡ್ ಧ್ವನಿ ಎತ್ತಿದೆ. ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿ ಅನೇಕರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಎಂದಿದ್ದಾರೆ. #JusticeForNeha ಹ್ಯಾಶ್​ಟ್ಯಾಗ್ ಹಾಕಿದ್ದಾರೆ.

ರಿಷಬ್ ಶೆಟ್ಟಿ ಟ್ವೀಟ್..

‘ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕಾನೂನು ಕ್ರಮಗಳನ್ನು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕೆಂದು ವಿನಂತಿಸುತ್ತೆನೆ. ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

ಘಟನೆ ಖಂಡಿಸಿದ ಧ್ರುವ ಸರ್ಜಾ

‘ಸಹೋದರಿ ನೇಹಾ ಹಿರೇಮಠ್​ರ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್​ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು’ ಧ್ರುವ ಸರ್ಜಾ ಹೇಳಿದ್ದಾರೆ.

ಇದನ್ನೂ ಓದಿ: ನೇಹಾ ಕೊಲೆ ಪ್ರಕರಣ; ಫಯಾಜ್ ವಿರುದ್ದ ವಕಾಲತ್ತು ವಹಿಸಬಾರದೆಂದು ವಕೀಲರ ಸಂಘಕ್ಕೆ ಮನವಿ

ಬೇಸರ ಹೊರ ಹಾಕಿದ ರಚಿತಾ ರಾಮ್

ನೇಹಾ ಸಾವಿನ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯಿಸಿದ್ದು, ವಿಶೇಷ ಮನವಿ ಮಾಡಿದ್ದಾರೆ. ‘ರಾಜಕೀಯ ಆಯಾಮದಲ್ಲಿ ಪ್ರಕರಣ ತರಬೇಡಿ. ನೇಹಾಗೆ ನ್ಯಾಯ ಸಿಗಲಿ. ಜಾತಿ ಧರ್ಮ ಯಾವುದೇ ಆಗಿರಲಿ, ಮೊದಲು ನಾವು ಮಾನವರು’ ಎಂದು ರಚಿತಾ ರಾಮ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ