ಸ್ಯಾಂಡಲ್ವುಡ್ನ ಹಿರಿಯ ನಟಿ ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟನೆಯ ಹಾಡುಗಳು ಇಂದಿಗೂ ಕಿವಿಯಲ್ಲಿ ಗುನುಗುತ್ತವೆ. ಲೀಲಾವತಿಯವರ ಸೂಪರ್ ಹಿಟ್ ಹಾಡುಗಳು ಇಲ್ಲಿವೆ. ಅವರು ನಟಿಸಿದ ಬಹುತೇಕ ಚಿತ್ರಗಳು ಯಶಸ್ಸು ಕಂಡಿವೆ. ಹಾಗೆ ಇವರ ನಟನೆಯ ಹಾಡುಗಳು (Leelavathi Songs) ಕೂಡ ಬಹಳಷ್ಟು ಫೇಮಸ್ ಆಗಿವೆ. ಈ ಹಾಡುಗಳು ಇಂದಿಗೂ ಕಿವಿಯಲ್ಲಿ ಗುನುಗುತ್ತವೆ. ಲೀಲಾವತಿಯವರು ಅಭಿನಯಿಸಿರುವ ಚಿತ್ರಗಳ ಜನಪ್ರಿಯ ಹಾಡುಗಳು ಇಲ್ಲಿವೆ..
“ಬಿಂಕದ ಸಿಂಗಾರಿ ಮೈ ಡೊಂಕಿನ ವೈಯಾರಿ” ಹಾಡಿನಲ್ಲಿ ಲೀಲಾವತಿ ಮತ್ತು ರಾಜುಕುಮಾರ್ ಅವರು ನಟಿಸಿದ್ದಾರೆ. ಈ ಹಾಡಿನಲ್ಲಿ ರಾಜಕುಮಾರ್ ಅವರು ಲೀಲಾವತಿ ಅವರ ಸೌಂದರ್ಯ ವರ್ಣಿಸಿದ್ದಾರೆ. ಇದೊಂದು ಪ್ರೇಮಗೀತೆಯಾಗಿದೆ. “ಹುಣ್ಣಿಮೆಯ ಚಂದ್ರ ಆಕಾಶದಿಂದ ಬಂದ” ಹಾಡು ದೂರದಲ್ಲಿರುವ ಪ್ರಿಯತಮನನ್ನು ಲೀಲಾವತಿಯವರು ವರ್ಣಿಸಿದ್ದಾರೆ.
ಇದನ್ನೂ ಓದಿ: ಅಣ್ಣಾವ್ರು ಏನೂ ಮಾಡಿಲ್ಲ ಅಂತ ಹೇಳೋದು ತಪ್ಪು: ವಿನೋದ್ ರಾಜ್
“ತಾಯೆ ಬಾರಾ” ಹಾಡಿನಲ್ಲಿ ಲೀಲಾವತಿಯವರು ಮಕ್ಕಳಿಗೆ ಕನ್ನಡ ಪಾಠ ಮಾಡುವುದನ್ನು ಕಾಣಬಹುದು. “ಮುನಿದೆ ಮುನಿದೆ ಗೆಳೆಯ ಬಿಡಲಾರೆನು”, ಮನವ ಕದ್ದ ಮನೆಯ ಚಲುವ, ಯಾವ “ಕವಿಯ ಶೃಂಗಾರ ಕಲ್ಪನೆಯು” ಹಾಡಿನಲ್ಲಿ ಡಾ. ರಾಜಕುಮಾರ್ ಅವರು ನಾಯಕಿಯ ವರ್ಣನೆ ಮಾಡಿದ್ದಾರೆ.
‘ಗೆಜ್ಜೆಪೂಜೆ’ ಚಿತ್ರದ “ಮಗುವೆ ನಿನ್ನ ಹೂ ನಗೆ”, “ಬಾರಾ ಮಂದಾರಾ”, ‘ಕುಲವಧು’ ಚಿತ್ರದಲ್ಲಿನ “ಯುಗ ಯುಗಾದಿ ಕಳೆದರು” ಸಾಕಷ್ಟು ಜನಪ್ರಿಯವಾಗಿದೆ. ಈ ಕವನವನ್ನು ವರಕವಿ ದ.ರಾ. ಬೇಂದ್ರ ಅವರು ಬರೆದಿದ್ದಾರೆ. “ಎಲ್ಲಿಹರೊ ನಲ್ಲ”, “ಮೆಲ್ಲುಸಿರೆ ಸವಿಗಾನ” ಸಾಕಷ್ಟು ಪ್ರಸಿದ್ದಿ ಪಡೆದ ಹಾಡಾಗಿದೆ. ಇಂದಿಗೂ ಯುವ ಜನತೆ ಈ ಹಾಡನ್ನು ಕೇಳುತ್ತಾರೆ. ಮೇಲಿನ ಎಲ್ಲ ಹಾಡುಗಳಲ್ಲಿ ಗಾನಗಂಧರ್ವ ರಾಜಕುಮಾರ್ ಮತ್ತು ಲೀಲಾವತಿ ಅವರ ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿದೆ.
ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ