Kannada Language: ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

ಗೂಗಲ್​ನಲ್ಲಿ ಕನ್ನಡ ಭಾಷೆಗೆ ಅವಮಾನವಾಗಿದೆ. ಭಾರತದಲ್ಲಿನ ಕೊಳಕು ಭಾಷೆ ಎಂದು ಸರ್ಚ್​ ಮಾಡಿದರೆ ಅದರಲ್ಲಿ ಕನ್ನಡ ಬರುತ್ತಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಬೆಳವಣಿಗೆ ಬಗ್ಗೆ ಸಿಡಿದೆದ್ದಿದ್ದಾರೆ.

Kannada Language: ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು
ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು
Edited By:

Updated on: Jun 03, 2021 | 3:34 PM

ಗೂಗಲ್​ನಲ್ಲಿ ಕನ್ನಡ ಭಾಷೆಗೆ ಅವಮಾನವಾಗಿದೆ. ಭಾರತದ ಕೊಳಕು ಭಾಷೆ ಎಂದು ಸರ್ಚ್​ ಮಾಡಿದರೆ ಅದರಲ್ಲಿ ಕನ್ನಡ ಬರುತ್ತಿದೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾಕಷ್ಟು ಜನರು ಗೂಗಲ್​ ಮುಖ್ಯಸ್ಥ ಸುಂದರ್ ಪಿಚ್ಚೈ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಮಧ್ಯೆ ಅನೇಕ ಸೆಲೆಬ್ರಿಟಿಗಳು ಕೂಡ ಈ ಬೆಳವಣಿಗೆ ಬಗ್ಗೆ ಸಿಡಿದೆದ್ದಿದ್ದಾರೆ.

ಕನ್ನಡದ ನಿರ್ದೇಶಕ ಸಾಯಿ ಕೃಷ್ಣ ಅವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಭಾರತದ ಕೊಳಕು ಭಾಷೆ ಎಂದು ಸರ್ಚ್​ ಮಾಡಿದರೆ ಕನ್ನಡ ಬರುತ್ತಿದೆ. ಇದಕ್ಕೆ ನೀವು ಉತ್ತರಿಸುವಿರಾ ಎಂದು ಸುಂದರ್​ ಪಿಚ್ಚೈ ಅವರನ್ನು ಟ್ವಿಟರ್​ನಲ್ಲಿ ಟ್ಯಾಗ್​ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ನಿಧಿ ಸುಬ್ಬಯ್ಯ ಕೂಡ ಮಾತನಾಡಿದ್ದಾರೆ. ಕೊಳಕು ಭಾಷೆ ಎಂದು ಸರ್ಚ್​ ಮಾಡಿದಾಗ ಕನ್ನಡ ಎಂದು ಏಕೆ ಬರುತ್ತಿದೆಯೋ ನನಗೆ ಗೊತ್ತಿಲ್ಲ. ಕ್ವೀನ್ಸ್​ ಆಫ್​ ದಿ ಲ್ಯಾಂಗ್ವೇಜಸ್​ ಎಂದು ಸರ್ಚ್​ ಮಾಡಿ. ಆಗಲೂ ಕನ್ನಡವೇ ಬರುತ್ತದೆ. ಇದನ್ನು ಹೆಚ್ಚು ಸರ್ಚ್​ ಮಾಡೋಣ. ಈ ಮೂಲಕ ಹೊರ ಜಗತ್ತಿಗೆ ನಾವು ಏನು ಎಂಬುದನ್ನು ತೋರಿಸೋಣ ಎಂದಿದ್ದಾರೆ.

ಈ ಬಗ್ಗೆ ನಿರ್ದೇಶಕ ಪನ್ನಗಭರಣ ಕೂಡ ಮಾತನಾಡಿದ್ದು, ಕ್ವೀನ್ಸ್​ ಆಫ್​ ಆಲ್​ ದಿ ಲ್ಯಾಂಗ್ವೇಜಸ್ ಅನ್ನೋದನ್ನು ಸರ್ಚ್​ ಮಾಡಿ. #QueenOfLanguagesKannada ಬಳಕೆ ಮಾಡಿ. ಈ ಮೂಲಕ ಕನ್ನಡಿಗರ ಶಕ್ತಿಯನ್ನು ತೋರಿಸೋಣ ಎಂದಿದ್ದಾರೆ.

ನನಗೆ ಈ ಬಗ್ಗೆ ಸಾಕಷ್ಟು ಮೆಸೇಜ್​ ಬರುತ್ತಿದೆ. ಇದರ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ಕನ್ನಡ ಸುಂದರ ಭಾಷೆ ಮತ್ತು ಈ ಲಿಪಿ ಮೇಲೆ ನಮಗೆ ತುಂಬಾ ಹೆಮ್ಮೆ ಇದೆ ಎಂಬುದು ಎಲ್ಲರಿಗೂ ತೋರಿಸುವ ಸಮಯ ಬಂದಿದೆ. ಕ್ವೀನ್ಸ್​ ಆಫ್​ ಲ್ಯಾಂಗ್ವೇಜಸ್​ ಎಂದು ಸರ್ಚ್​ ಮಾಡಿ. ಆಗ ಕನ್ನಡ ಬರುತ್ತಿದೆ. ಈ ಮೂಲಕ ಪಾಸಿಟಿವಿಟಿ ಹೆಚ್ಚಿಸಿ ಎಂದಿದ್ದಾರೆ.

ಕಿರುತೆರೆ ನಟ ಅನಿರುದ್ಧ್​ ಕೂಡ ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ. ಯಾರೋ ಏನೋ ಹೇಳ್ತಾರೆ ಅಂದಮಾತ್ರಕ್ಕೆ ಅದನ್ನು ನಾವು ಕೇಳೋಕೆ ಆಗಲ್ಲ. ಕನ್ನಡ ಭಾಷೆ ಹೇಗೆ, ಅದರ ಸೊಗಡು ಏನು ಎಂಬುದು ನಮಗೆ ಗೊತ್ತು. ಕನ್ನಡ ಕೊಳಕು ಭಾಷೆ ಎಂದು ಆರ್ಟಿಕಲ್​ ಬರೆದವರಿಗೆ ಶಿಕ್ಷೆ ಆಗಬೇಕು. ಈ ಮೂಲಕ ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್​; ಕನ್ನಡವನ್ನು ಕೊಳಕು ಭಾಷೆ ಎಂದು ಅಪಮಾನಿಸಿದ ಸರ್ಚ್​ ಎಂಜಿನ್

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us