ಸಿನಿಮಾ ಥಿಯೇಟರ್​ಗಳಲ್ಲಿ ಮತ್ತೆ ಕೇಳಲಿದೆ ಸಿಳ್ಳೆ ಚಪ್ಪಾಳೆ.. ಶುಭ ಶುಕ್ರವಾರಕ್ಕೆ ರಿಲೀಸ್​ಗೆ ಸಿದ್ಧವಾಗಿವೆ ಈ ಸಿನಿಮಾಗಳು

|

Updated on: Feb 04, 2021 | 11:36 AM

Sandalwood New releasing movies ನಾಳೆ ಸ್ಯಾಂಡಲ್​ವುಡ್ ಚಿತ್ರಗಳ ಪಾಲಿಗೆ ಶುಭದಿನ. ನಾಳೆ ಕನ್ನಡದ ಮೂರು ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ.

ಸಿನಿಮಾ ಥಿಯೇಟರ್​ಗಳಲ್ಲಿ ಮತ್ತೆ ಕೇಳಲಿದೆ ಸಿಳ್ಳೆ ಚಪ್ಪಾಳೆ.. ಶುಭ ಶುಕ್ರವಾರಕ್ಕೆ ರಿಲೀಸ್​ಗೆ ಸಿದ್ಧವಾಗಿವೆ ಈ ಸಿನಿಮಾಗಳು
ಸಂಗ್ರಹ ಚಿತ್ರ
Follow us on

ಬೆಂಗಳೂರು: ಸ್ಯಾಂಡಲ್​ವುಡ್ ಸಮರದ ಬೆನ್ನಲ್ಲೇ ಸರ್ಕಾರದ ನಿರ್ಧಾರ ಬದಲಾಗಿದೆ. ರಾಜ್ಯದ ಥಿಯೇಟರ್​ಗಳಲ್ಲಿ ‘ಹೌಸ್​ಫುಲ್​’ಗೆ ಪರ್ಮಿಷನ್ ಸಿಕ್ಕಿದೆ. ಹೀಗಾಗಿ ನಾಳೆ ಸ್ಯಾಂಡಲ್​ವುಡ್ ಚಿತ್ರಗಳ ಪಾಲಿಗೆ ಶುಭದಿನ. ನಾಳೆ ಕನ್ನಡದ ಮೂರು ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ. ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಮ್, ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೊ, ಮಂಗಳವಾರ ರಜಾದಿನ ಚಿತ್ರ ನಾಳೆ ರಿಲೀಸ್​ಗೆ ರೆಡಿಯಾಗಿದೆ. ಇನ್ನು ಫೆಬ್ರವರಿ 19ರಂದು ಗ್ಯ್ರಾಂಡ್ ಎಂಟ್ರಿ ಕೊಡಲಿದೆ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರ. ಈ ವಾರದಿಂದಲೇ ಚಿತ್ರಮಂದಿರಗಳು ಭರ್ತಿ ಆಗಲಿವೆ. ಸದ್ಯದಲ್ಲೇ ರಾಜ್ಯ ಸರ್ಕಾರ ಮಾರ್ಗ ಸೂಚಿ ಬಿಡುಗಡೆ ಮಾಡಲಿದೆ. ಮಾರ್ಗ ಸೂಚಿ ಅನ್ವಯ ಚಿತ್ರಮಂದಿಗಳು ನಡೆದುಕೊಳ್ಳಬೇಕಾಗುತ್ತೆ. ಸದ್ಯ ಈಗ ಸರ್ಕಾರದಿಂದ ಅಧಿಕೃತ ಆದೇಶ ಬರೋದೊಂದೆ ಬಾಕಿ ಉಳಿದಿದೆ.

ಸಿನಿಮಾ ಥಿಯೇಟರ್​ಗಳಲ್ಲಿ ಮತ್ತೆ ಕೇಳಲಿದೆ ಸಿಳ್ಳೆ ಚಪ್ಪಾಳೆ
ಥಿಯೇಟರ್​​ನಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಫೇಸ್ ಮಾಸ್ಕ್ ಹಾಕವುದು ಕಡ್ಡಾಯವಾಗಿರುತ್ತೆ. ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯ. ಆರೋಗ್ಯ ಸೇತು ಌಪ್ ಬಳಸಲು ಒತ್ತು ಕೊಡಲಾಗುವುದು. ಥಿಯೇಟರ್ ಒಳಗೆ ಹೋಗುವ ಮುನ್ನ ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಥಿಯೇಟರ್​ನಲ್ಲಿ ಸ್ಟಿಕ್ಕರ್ ಅಂಟಿಸುವುದು. ಆನ್​ಲೈನ್ ಬುಕ್ಕಿಂಗ್​ಗೆ ಹೆಚ್ಚು ಒತ್ತು ನೀಡುವ ಸೂಚನೆ ಕೊಡುವ ಮೂಲಕ ಥಿಯೇಟರ್ ಮಾಲೀಕರು ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಾಗುತ್ತೆ.

ಚಿತ್ರರಂಗದ​ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ: ಸಿನಿಮಾ ಹಾಲ್​ಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ

Published On - 9:38 am, Thu, 4 February 21