ಹೊಸ ವರ್ಷಕ್ಕೆ ಸಿದ್ಧವಾಗ್ತಿವೆ ಸಾಲು ಸಾಲು ಸಿನಿಮಾಗಳು.. 2021ಕ್ಕೆ ಸ್ಯಾಂಡಲ್​ವುಡ್ ರಸದೌತಣ

ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಸ್ಯಾಂಡಲ್​ವುಡ್​ಗೂ ಹೊಸ ಹುರುಪು ಬಂದಿದೆ. ಕನ್ನಡ ಸಿನಿ ಇಂಡಸ್ಟ್ರಿ, ಫ್ಯಾನ್ಸ್​ಗೆ ಸಿಹಿ ಸುದ್ದಿ ಕೊಡಲು ಸಜ್ಜಾಗಿದೆ. ಹಾಗಾದ್ರೆ 2021 ಕನ್ನಡ ಚಿತ್ರರಂಗದ ಪಾಲಿಗೆ ಹೇಗಿರತ್ತೆ? ಯಾವೆಲ್ಲಾ ಸಿನಿಮಾಗಳು ಹೈಪ್ ಕ್ರಿಯೇಟ್ ಮಾಡಿವೆ? ಯಾರ ಪಾತ್ರಗಳು ಅಭಿಮಾನಿಗಳನ್ನು ಕಾಡುತ್ತಿವೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.

ಹೊಸ ವರ್ಷಕ್ಕೆ ಸಿದ್ಧವಾಗ್ತಿವೆ ಸಾಲು ಸಾಲು ಸಿನಿಮಾಗಳು.. 2021ಕ್ಕೆ ಸ್ಯಾಂಡಲ್​ವುಡ್ ರಸದೌತಣ
Follow us
ಆಯೇಷಾ ಬಾನು
|

Updated on: Dec 25, 2020 | 6:53 AM

ಕೊರೊನಾ.. ಕೊರೊನಾ.. ಅಂತಾ 2020ನ್ನು ತಳ್ಳಿ ಹಾಕಿದ್ದು ಆಯ್ತು. ಜಗತ್ತು ಕೊರೊನಾ ಸುಳಿಗಾಳಿಗೆ ಸಿಲುಕಿ ನಲುಗಿದ್ದಾಯ್ತು. ಇದು ಸಿನಿಮಾ ಮಂದಿಯನ್ನೂ ಬಿಡಲಿಲ್ಲ. ಹಾಲಿವುಡ್​ನಿಂದ ಹಿಡಿದು ಸ್ಯಾಂಡಲ್​ವುಡ್ ತನಕ ಈ ವರ್ಷ ನಷ್ಟ ಅನುಭವಿಸಿದ್ದೇ ಆಯ್ತು. ಆದರೆ ಇನ್ನೇನು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. 2021 ಆರಂಭಕ್ಕೆ ಜಸ್ಟ್ 6 ದಿನ ಬಾಕಿ ಇದೆ. ಈ ಹೊತ್ತಲ್ಲೇ ಸ್ಯಾಂಡಲ್​ವುಡ್ ಅಭಿಮಾನಿಗಳಿಗೆ ಹೊಸವರ್ಷದಲ್ಲಿ ರಸದೌತಣ ನೀಡಲು ಸಿನಿ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಹಲವು ನಿರೀಕ್ಷೆಗಳೊಂದಿಗೆ 2021ರ ಆರಂಭಕ್ಕೆ ಕಾಯುತ್ತಿದ್ದಾರೆ.

2021ಕ್ಕೆ ಬಹಳಷ್ಟು ಹೊಸ ಪ್ಲ್ಯಾನ್ ಮಾಡ್ಕೊಂಡಿದೆ ಸ್ಯಾಂಡಲ್​ವುಡ್. ಅದರಲ್ಲೂ ಸ್ಟಾರ್ ನಟರಂತೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಘರ್ಜಿಸೋಕೆ ರೆಡಿಯಾಗಿದ್ದಾರೆ. ಮುಂದಿನ ವರ್ಷ ಒಂದಷ್ಟು ಸಿನಿಮಾಗಳು ತೆರೆಗೆ ಬಂದ್ರೆ ಮತ್ತೊಂದಷ್ಟು ಸಿನಿಮಾಗಳ ಶೂಟಿಂಗ್ ಶುರುವಾಗಲಿದೆ. ಮೊದಲಿನಂತೆ ವರ್ಷಗಟ್ಟಲೇ ಬ್ರೇಕ್ ಪಡೆಯುವ ಯೋಚನೆಯನ್ನೇ ಸ್ಟಾರ್ ನಟರು ಕೈಬಿಟ್ಟಿದ್ದಾರಂತೆ.

ಅಂದಹಾಗೆ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಮುಂದಿನ ವರ್ಷ ತೆರೆಕಂಡ್ರೆ, ನಂತ್ರ ಜೇಮ್ಸ್ ಶೂಟಿಂಗ್ನಲ್ಲಿ ಅಪ್ಪು ಬ್ಯೂಸಿಯಾಗಿರ್ತಾರೆ. ರಾಬರ್ಟ್ ರಿಲೀಸ್ ಬೆನ್ನಲ್ಲೇ ದರ್ಶನ್​ರ ಹೊಸ ಚಿತ್ರಗಳು ಸೆಟ್ಟೇರುತ್ತವೆ. ತರುಣ್ ನಿರ್ದೇಶನದ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ 2021ಕ್ಕೆ ಆರಂಭ ಆಗಲಿದೆ.

ಕಿಚ್ಚ ಸುದೀಪ್ ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ. ‘ಕೋಟಿಗೊಬ್ಬ-3’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಅತ್ತ ಅನುಪ್ ನಿರ್ದೇಶನದ ಫ್ಯಾಂಟಮ್ ಕೂಡ ಬಹುತೇಕ ಮುಕ್ತಾಯವಾಗಿದೆ. ಫ್ಯಾಂಟಮ್ ನಂತ್ರ ಅನುಪ್ ಸಾರಥ್ಯದಲ್ಲಿ ಅಶ್ವಥಾಮ ಶೂಟಿಂಗ್ ಹಾಗೂ ಜೊತೆಗೆ ‘ಬಿಲ್ಲ ರಂಗ ಭಾಷಾ’ ಕೂಡ ಗಲ್ಲಾ ಪೆಟ್ಟಿಗೆ ಸದ್ದು ಮಾಡಲು ಹೆಜ್ಜೆ ಇಡಲಿದೆ.

‘ಭಜರಂಗಿ-2’ ಜೊತೆಗೆ ಸಿದ್ಧವಾಗಿರೊ ಶಿವಣ್ಣ ಅಭಿನಯದ ಶಿವಪ್ಪ ಕೂಡ 2021ಕ್ಕೆ ತೆರೆಗೆ ಬರಲಿದೆ. ಇನ್ನೂ ಪೊಗರು ಮುಗಿಸಿರೊ ಧ್ರುವ, ದುಬಾರಿ ಚಿತ್ರದ ಶೂಟಿಂಗ್​ ಶುರು ಮಾಡಲಿದ್ದಾರೆ. ಜೊತೆಗೆ ನಿರ್ದೇಶಕ ರಾಘವೇಂದ್ರ ಹೆಗ್ಡೆ ಸಿನಿಮಾದಲ್ಲಿ ಸೈನಿಕನಾಗಿ ಕಾಣಿಸಿಕೊಳ್ಳೋದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆ 2020 ಚಂದನವನ ನಲುಗುವಂತೆ ಮಾಡಿತ್ತು. ಆದ್ರೆ ಕೊರೊನಾ ಕಾಟದಿಂದ ಕುಂದದ ಸ್ಯಾಂಡಲ್​ವುಡ್ ಹೊಸ ಹುರುಪಿನಲ್ಲಿ ಹೊಸ ಹೊಸ ಸಿನಿಮಾಗಳನ್ನ ಕೈಗೆತ್ತಿಕೊಂಡಿದೆ. 2021ರ ಹೊಸ ಭರವಸೆಯಲ್ಲಿ ಮುನ್ನುಗ್ಗುತ್ತಿದೆ.