AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ಅಡ್ಡಾಡಿದ ಗುಳಿಕೆನ್ನೆ ಬೆಡಗಿ ರಚಿತಾ ರಾಮ್​

ತೆರೆಯ ಮೇಲಿನ ನಾಯಕಿ ಎದುರು ಬದುರು ಸಿಕ್ಕರೂ ಜನರಿಗೆ ಗುರುತು ಸಿಕ್ಕಿಲ್ಲ. ಆ ಕಾರಣ ಡಿಂಪಲ್​ ಬೆಡಗಿ ಮಾಮೂಲಿ ಹುಡುಗಿಯಂತೆ ಸೀದಾ ಸಾದಾ ವಾಕ್​ ಮಾಡುತ್ತಾ ಶಾಪಿಂಗ್​ ಮಾಡಿದ್ದಾರೆ.

ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ಅಡ್ಡಾಡಿದ ಗುಳಿಕೆನ್ನೆ ಬೆಡಗಿ ರಚಿತಾ ರಾಮ್​
ರಚಿತಾ ರಾಮ್​
Skanda
| Edited By: |

Updated on: Dec 25, 2020 | 12:58 PM

Share

ಬೆಂಗಳೂರು: ಚಂದನವನದ ಗುಳಿಕೆನ್ನೆ ಬೆಡಗಿ ರಚಿತಾ ರಾಮ್​ ಬೆಂಗಳೂರಿನ ಕಮರ್ಶಿಯಲ್​ ಸ್ಟ್ರೀಟ್​ನಲ್ಲಿ ಮಾಮೂಲಿ ಹುಡುಗಿಯಂತೆ ಸುತ್ತಾಡುತ್ತಾ ಬಟ್ಟೆ ಖರೀದಿ ಮಾಡಿದ ವೀಡಿಯೋ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ವೀರಂ ಸಿನಿಮಾದ ಕಾಸ್ಟ್ಯೂಮ್​ ಖರೀದಿಗಾಗಿ ಕಮರ್ಶಿಯಲ್​ ಸ್ಟ್ರೀಟ್​ಗೆ ಹೋಗಿದ್ದ ಡಿಂಪಲ್​ ಕ್ವೀನ್​ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಯಾರಿಗೂ ಗುರುತು ಸಿಗದಂತೆ ಸುತ್ತಾಡಿದ್ದಾರೆ.

ವೀರಂ ಚಿತ್ರತಂಡದ ಜೊತೆಗೆ ಶಾಪಿಂಗ್​ಗೆ ಹೋಗಿದ್ದಾಗ ಮುಖಕ್ಕೆ ಕೆಂಪು ಬಟ್ಟೆ ತೊಟ್ಟು ಸುತ್ತಾಡಿದ ರಚಿತಾ ರಾಮ್​ ವೀಡಿಯೋದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತೆರೆಯ ಮೇಲಿನ ನಾಯಕಿ ಎದುರು ಬದುರು ಸಿಕ್ಕರೂ ಜನರಿಗೆ ಗುರುತು ಸಿಕ್ಕಿಲ್ಲ. ಆ ಕಾರಣ ಡಿಂಪಲ್​ ಬೆಡಗಿ ಮಾಮೂಲಿ ಹುಡುಗಿಯಂತೆ ಸೀದಾ ಸಾದಾ ವಾಕ್​ ಮಾಡುತ್ತಾ ಶಾಪಿಂಗ್​ ಮಾಡಿದ್ದಾರೆ.

ರಚಿತಾ ರಾಮ್​ಗೆ ವೀರಂ ಸಿನಿಮಾ ಛಾಯಾಗ್ರಾಹಕ, ಮೇಕಪ್​ ಮ್ಯಾನ್​ ಸೇರಿದಂತೆ ತಂಡದ ಹಲವರು ಸಾಥ್ ನೀಡಿದ್ದಾರೆ. ಪ್ರಜ್ವಲ್​ ದೇವರಾಜ್​, ಶ್ರೀನಗರ ಕಿಟ್ಟಿ, ರಚಿತಾ ರಾಮ್​ ಮತ್ತು ಮುಂತಾದ ಕಲಾವಿದರು ಅಭಿನಯಿಸಿರುವ ಕೆ.ಎಂ.ಶಶಿಧರ್​ ನಿರ್ಮಾಣದ ವೀರಂ ಚಿತ್ರದ ಮುಹೂರ್ತ ಡಿಸೆಂಬರ್​ 10ರಂದು ನೆರವೇರಿದೆ.

ಹೊಸ ವರ್ಷಕ್ಕೆ ಸಿದ್ಧವಾಗ್ತಿವೆ ಸಾಲು ಸಾಲು ಸಿನಿಮಾಗಳು.. 2021ಕ್ಕೆ ಸ್ಯಾಂಡಲ್​ವುಡ್ ರಸದೌತಣ

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ