ಕೊರೊನಾಗೆ ಬಲಿಯಾದ ಮತ್ತೋರ್ವ ಸ್ಯಾಂಡಲ್​ವುಡ್​ ಯುವ ನಿರ್ಮಾಪಕ

|

Updated on: Apr 30, 2021 | 9:11 PM

ಪೇಟ್ರೋಮ್ಯಾಕ್ಸ್ ಸಿನಿಮಾಗೆ ರಾಜಶೇಖರ್​ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಆಗಲು ಅವರ ಪಾತ್ರ ತುಂಬಾನೇ ದೊಡ್ಡದಿದೆ ಎಂದು ನೀನಾಸಂ ಸತೀಶ್​ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾಗೆ ಬಲಿಯಾದ ಮತ್ತೋರ್ವ ಸ್ಯಾಂಡಲ್​ವುಡ್​ ಯುವ ನಿರ್ಮಾಪಕ
ಮೃತ ರಾಜು
Follow us on

ಕೊರೊನಾಗೆ ಇಡೀ ದೇಶ ತತ್ತರಿಸಿದೆ. ಇದಕ್ಕೆ ಚಿತ್ರರಂಗ ಕೂಡ ಹೊರತಾಗಿಲ್ಲ. ಸಾಕಷ್ಟು ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಈಗ ಕನ್ನಡದ ಯುವ ನಿರ್ಮಾಪಕ ರಾಜಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ. ಈ ಬಗ್ಗೆ ನಟ ನೀನಾಸಂ ಸತೀಶ್​ ಬೇಸರ ಹೊರ ಹಾಕಿದ್ದಾರೆ.

ಪೇಟ್ರೋಮ್ಯಾಕ್ಸ್ ಸಿನಿಮಾಗೆ ರಾಜಶೇಖರ್​ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಆಗಲು ಅವರ ಪಾತ್ರ ತುಂಬಾನೇ ದೊಡ್ಡದಿದೆ ಎಂದು ನೀನಾಸಂ ಸತೀಶ್​ ಅಭಿಪ್ರಾಯಪಟ್ಟಿದ್ದಾರೆ.

ರಾಜು ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟುವ ಹಂತದಲ್ಲಿದ್ದ ಮಹತ್ವಾಕಾಂಕ್ಷಿ. ನಮ್ಮ ಪೇಟ್ರೋಮ್ಯಾಕ್ಸ್ ಚಿತ್ರ ಆಗಲು ಮುಖ್ಯವಾದ ವ್ಯಕ್ತಿ. ಅವರ ಜತೆ ಜಗಳ, ಪ್ರೀತಿ ಎಲ್ಲವೂ ಇತ್ತು. ಕಾರ್ಯಕಾರಿ ನಿರ್ಮಾಪಕರಾಗಿ 2 ತಿಂಗಳು ನಮ್ಮ ಜೊತೆಗಿದ್ದರು. ಪೆಟ್ರೋಮ್ಯಾಕ್ಸ್ ಗೆದ್ದು ಅದರ ಅದ್ದೂರಿ ಸಮಾರಂಭ ಮಾಡುವ ಕನಸು ಕಂಡಿದ್ದರು ಎಂದು ಸತೀಶ್​ ತಮ್ಮ ಬರಹ ಆರಂಭಿಸಿದ್ದಾರೆ.

ರಾಜು ಯಾವಾಗಲು ನಗುತ್ತ ಸೆಟ್ ಅಲ್ಲಿ ಕೂತಿರುತ್ತಿದ್ದನ್ನು ನೆನಪಿಸಿಕೊಂಡರೆ ಎದೆಗೆ ಭರ್ಜಿ ಚುಚ್ಚಿದಂತಾಗುತ್ತದೆ. ಮೈಸೂರಿನಲ್ಲಿ ರಾತ್ರಿಯೆಲ್ಲ ಜೊತೆಗಿದ್ದು, ಕಾರು ಹತ್ತಿಸಿ ನಾವು ಗೆಲ್ತೀವಿ. ನಡೆಯಿರಿ ನೆಮ್ಮದಿಯಾಗಿ ನಿದ್ದೆ ಮಾಡಿ ಎಂದು ಹೇಳಿ ರಾಜು ನೀನು ಚಿರನಿದ್ರೆಗೆ ಜಾರಿದ್ದು ತಪ್ಪಲ್ಲವೇ? ಅಂತಿಮ ನಮನ ಸಲ್ಲಿಸಲು ನನಗೆ ಮನಸ್ಸಾಗುತ್ತಿಲ್ಲ ಕ್ಷಮಿಸಿ ಎಂದಿದ್ದಾರೆ.

ನಟ ನೀನಾಸಂ ಸತೀಶ್​ ಗುರುವಾರ (ಎಪ್ರಿಲ್​ 29) ವಿಡಿಯೋ ಮಾಡಿ ಹಂಚಿಕೊಂಡಿದ್ದರು. ನನ್ನ ದೊಡ್ಡಮ್ಮ ಕೊರೊನಾದಿಂದ ಮೃತಪಟ್ಟಿದ್ದರು. ಆದರೆ, ಅವರ ಮುಖ ನೋಡಲು ನನಗೆ ಸಾಧ್ಯವಾಗಿಲ್ಲ. ಹೀಗಾಗಿ, ಕೊರೊನಾ ಬಗ್ಗೆ ಎಚ್ಚರದಿಂದ ಇರಿ ಎಂದು ಸತೀಶ್​ ಕೇಳಿಕೊಂಡಿದ್ದರು. ಅದಾದ ಬೆನ್ನಲ್ಲೇ ಅವರದೇ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಮೃತಪಟ್ಟಿದ್ದು ಬೇಸರ ಮೂಡಿಸಿದೆ.

ಇದನ್ನೂ ಓದಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ರನ್ನ, ಅಣ್ಣಯ್ಯ, ಬಿಂದಾಸ್ ಸಿನಿಮಾ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್​ ಇನ್ನಿಲ್ಲ

Published On - 9:08 pm, Fri, 30 April 21