Sanjay Dutt: ‘ಪ್ರೇಮ್​ ಬೆಸ್ಟ್​ ಡೈರೆಕ್ಟರ್​’: ಚಾಮುಂಡಿ ಬೆಟ್ಟದಲ್ಲಿ ಹೊಗಳಿದ ಸಂಜಯ್​ ದತ್​

| Updated By: ಮದನ್​ ಕುಮಾರ್​

Updated on: Jul 17, 2023 | 9:31 PM

KD Kannada Movie: ಸಂಜಯ್​ ದತ್​ ನಟಿಸುತ್ತಿರುವ 2ನೇ ಕನ್ನಡ ಸಿನಿಮಾ ‘ಕೆಡಿ’. ಚಿತ್ರೀಕರಣದ ಬಿಡುವಿನಲ್ಲಿ ನಿರ್ದೇಶಕ ಪ್ರೇಮ್​ ಜೊತೆ ಅವರು ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದಿದ್ದಾರೆ.

Sanjay Dutt: ‘ಪ್ರೇಮ್​ ಬೆಸ್ಟ್​ ಡೈರೆಕ್ಟರ್​’: ಚಾಮುಂಡಿ ಬೆಟ್ಟದಲ್ಲಿ ಹೊಗಳಿದ ಸಂಜಯ್​ ದತ್​
ಚಾಮುಂಡಿ ಬೆಟ್ಟದಲ್ಲಿ ಸಂಜಯ್​ ದತ್​
Follow us on

ಖ್ಯಾತ ನಟ ಸಂಜಯ್​ ದತ್​ (Sanjay Dutt) ಅವರು ಈಗ ಬಾಲಿವುಡ್​ಗಿಂತಲೂ ದಕ್ಷಿಣ ಭಾರತದಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದಲ್ಲಿ ಅಧೀರನಾಗಿ ಕಾಣಿಸಿಕೊಂಡ ಬಳಿಕ ಅವರಿಗೆ ಸೌತ್​ ಸಿನಿಮಾಗಳಲ್ಲಿ ಡಿಮ್ಯಾಂಡ್​ ಹೆಚ್ಚಾಯಿತು. ಈಗ ಅವರು ಕನ್ನಡದ ‘ಕೆಡಿ’ (KD Movie) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣದ ಬಿಡುವಿನಲ್ಲಿ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಡಿ ನೀಡಿದ್ದಾರೆ. ಸಂಜಯ್​ ದತ್ ಅವರು ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದು, ನಿರ್ದೇಶಕ ‘ಜೋಗಿ’ ಪ್ರೇಮ್​ (Director Prem) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸೌತ್​ ಸಿನಿಮಾಗಳ ಬಗ್ಗೆ ತಮಗೆ ಇರುವ ಪ್ರೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಸಂಜಯ್​ ದತ್​ ಅವರು ಈ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ನಿರೀಕ್ಷೆ ಡಬಲ್​ ಆಗಿದೆ. ಶೂಟಿಂಗ್​ ಸಲುವಾಗಿ ಕರುನಾಡಿಗೆ ಬಂದಿರುವ ಸಂಜಯ್​ ದತ್​ ಅವರು ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ‘ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ. ಮಾತೆಯ ದರ್ಶನ ಮಾಡಿ ತುಂಬಾ ಖುಷಿ ಆಯಿತು’ ಎಂದು ಸಂಜಯ್​ ದತ್​ ಅವರು ಹೇಳಿದ್ದಾರೆ. ‘ಕೆಡಿ’ ಚಿತ್ರತಂಡದ ಜೊತೆ ಬಂದಿದ್ದ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು.

ಇದನ್ನೂ ಓದಿ: Leo Movie: ಗ್ಯಾಂಗ್​ಸ್ಟರ್​ ತಂದೆ-ಮಗನ ಪಾತ್ರದಲ್ಲಿ ಸಂಜಯ್​ ದತ್​-ವಿಜಯ್​; ಸಂಜು ಸಂಭಾವನೆ 10 ಕೋಟಿ ರೂಪಾಯಿ?

‘ಕೆಜಿಎಫ್​: ಚಾಪ್ಟರ್​ 2’ ಬಳಿಕ ಸಂಜಯ್​ ದತ್​ ಅವರು ನಟಿಸುತ್ತಿರುವ 2ನೇ ಕನ್ನಡ ಸಿನಿಮಾ ‘ಕೆಡಿ’. ಇನ್ನು, ತೆಲುಗು ಮತ್ತು ತಮಿಳು ಚಿತ್ರರಂಗದಿಂದಲೂ ಅವರಿಗೆ ಆಫರ್​ಗಳು ಬಂದಿವೆ. ಒಟ್ಟಾರೆ ಸೌತ್​ ಚಿತ್ರಗಳ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ನಿರ್ದೇಶಕ ಪ್ರೇಮ್​ ಕುರಿತು ಹೊಗಳಿಕೆ ಮಾತುಗಳನ್ನು ಆಡಿದ್ದಾರೆ. ‘ಪ್ರೇಮ್​ ಜೊತೆ ಕೆಡಿ ಸಿನಿಮಾದ ಶೂಟಿಂಗ್​ ಮಾಡುತ್ತಿದ್ದೇನೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡುವುದು ನನಗೆ ಇಷ್ಟ. ಪ್ರೇಮ್​ ಅವರು ಬೆಸ್ಟ್​ ಡೈರೆಕ್ಟರ್​’ ಎಂದು ಸಂಜಯ್​ ದತ್​ ಹೇಳಿದ್ದಾರೆ.

ಇದನ್ನೂ ಓದಿ: Sanjay Dutt: ‘ಕೆಡಿ’ ಶೂಟಿಂಗ್​ ಸೆಟ್​ಗೆ ಕಾಲಿಟ್ಟ ಸಂಜಯ್​ ದತ್​; ಬಾಲಿವುಡ್​ ನಟನ ಎಂಟ್ರಿಯಿಂದ ಹೆಚ್ಚಿತು ನಿರೀಕ್ಷೆ

‘ಸದ್ಯಕ್ಕೆ ಶೂಟಿಂಗ್​ ನಡೆಯುತ್ತಿದೆ. ಶೀಘ್ರದಲ್ಲೇ ಟೀಸರ್​ ಬಿಡುಗಡೆ ಆಗಲಿದೆ’ ಎಂದು ಪ್ರೇಮ್​ ಹೇಳಿದ್ದಾರೆ. ‘ಪ್ರೇಮ್​ ಇದ್ದಲ್ಲಿ ಸರ್ಪ್ರೈಸ್​​, ಸಸ್ಪೆನ್ಸ್​ ಎಲ್ಲವೂ ಇರುತ್ತದೆ’ ಎಂದು ನಟ ಶೋಭರಾಜ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್​, ಶಿಲ್ಪಾ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ. ಟೀಸರ್​ಗಾಗಿ ಧ್ರುವ ಸರ್ಜಾ ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.