ಒಂದು ಕರೆಯಿಂದ ‘ಯುವ’ ಸಿನಿಮಾ ಶುರುವಾಯ್ತು, ಆ ಕರೆ ಮಾಡಿದ್ಯಾರು? ಯಾರಿಗೆ?

Yuva Movie: ಬೇರೊಂದು ಸಿನಿಮಾ ಮೂಲಕ ಲಾಂಚ್ ಆಗಬೇಕಿದ್ದ ಯುವ ರಾಜ್​ಕುಮಾರ್​ಗೆ ‘ಯುವ’ ಸಿನಿಮಾ ಸಿಕ್ಕಿದ್ದು ಹೇಗೆ? ಯಾರಿಂದ ಸಿಕ್ಕತು ಆ ಅವಕಾಶ? ಸಿನಿಮಾ ಪ್ರಾರಂಭವಾಗಿದ್ದು ಹೇಗೆ?

ಒಂದು ಕರೆಯಿಂದ ‘ಯುವ’ ಸಿನಿಮಾ ಶುರುವಾಯ್ತು, ಆ ಕರೆ ಮಾಡಿದ್ಯಾರು? ಯಾರಿಗೆ?

Updated on: Mar 24, 2024 | 8:14 AM

ಯುವ ರಾಜ್​ಕುಮಾರ್ (Yuva Rajkumar) ನಟನೆಯ ‘ಯುವ’ (Yuva) ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಬೇರೊಂದು ಸಿನಿಮಾ ಮೂಲಕ ಲಾಂಚ್ ಆಗಬೇಕಿದ್ದ ಯುವ ರಾಜ್​ಕುಮಾರ್ ಗೆ ಹೊಂಬಾಳೆ ಅಂಥಹಾ ದೊಡ್ಡ ನಿರ್ಮಾಣ ಸಂಸ್ಥೆ, ಸಂತೋಷ್ ಆನಂದ್​ರಾಮ್ ಅಂಥಹಾ ಅನುಭವಿ ನಿರ್ದೇಶಕ ಮೊದಲ ಸಿನಿಮಾಕ್ಕೆ ದೊರಕಿದ್ದಾರೆ. ಭಾರಿ ದೊಡ್ಡದಾಗಿ ಯುವ ರಾಜ್​ಕುಮಾರ್ ಲಾಂಚ್ ಆಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಕೇವಲ ಒಂದು ಕರೆ. ನಿನ್ನೆ (ಮಾರ್ಚ್ 23) ರಂದು ಹೊಸಪೇಟೆಯಲ್ಲಿ ಅದ್ಧೂರಿಯಾಗಿ ‘ಯುವ’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ನಡೆದಿದೆ. ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಸಂತೋಷ್ ಆನಂದ್​ರಾಮ್ ‘ಯುವ’ ಸಿನಿಮಾ ಹೇಗೆ ನಿರ್ಮಾಣವಾಯಿತು ಎಂಬ ಬಗ್ಗೆ ಮಾತನಾಡಿದ್ದಾರೆ.

‘ಯುವರತ್ನ’ ಸಿನಿಮಾದ ಪ್ರಚಾರಕ್ಕಾಗಿ ಇಲ್ಲಿಗೆ (ಹೊಸಪೇಟೆ) ಬಂದಿದ್ದೆವು. ‘ಯುವರತ್ನ’ದಿಂದ ‘ಯುವ’ ವರೆಗೆ ನನ್ನದು ಬಹಳ ಸವಾಲಿನ ಪಯಣ. ಈ ನಡುವೆ ನಾನು ಸಾಕಷ್ಟು ಕಳೆದುಕೊಂಡಿದ್ದೇನೆ. ನನ್ನ ಅಣ್ಣ ಪುನೀತ್ ರಾಜ್​ಕುಮಾರ್ ಅವರನ್ನು ನಾನು ಕಳೆದುಕೊಂಡೆ. ನನ್ನನ್ನು ಒಬ್ಬಂಟಿಯಾಗಿ ಬಿಡದೆ, ನನ್ನನ್ನು ಮತ್ತೆ ಕೆಲಸ ಮಾಡುವಂತೆ ಪ್ರೇರೇಪಿಸಿದ್ದು ಅಪ್ಪು ಅವರ ಅಭಿಮಾನಿಗಳು. ನೀವುಗಳು ಕೊಟ್ಟ ಸ್ಪೂರ್ತಿಯಿಂದಲೇ ನಾನು ಮತ್ತೆ ಕೆಲಸ ಮಾಡಲು ಸಾಧ್ಯವಾಯಿತು’ ಎಂದು ಧನ್ಯವಾದ ಹೇಳಿದರು.

ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿ ಸಿನಿಮಾ ಸೆಟ್​ಗೆ ಯುವ ರಾಜ್​ಕುಮಾರ್ ಭೇಟಿ

‘ಈ ‘ಯುವ’ ಸಿನಿಮಾ ನಿರ್ಮಾಣವಾಗಲು ಮುಖ್ಯ ಕಾರಣ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು. ಅಶ್ವಿನಿ ಅವರು ವಿಜಯ್ ಕಿರಗಂದೂರು ಅವರಿಗೆ ಕರೆ ಮಾಡಿ, ಯುವ ರಾಜ್​ಕುಮಾರ್​ಗಾಗಿ ಒಂದು ಸಿನಿಮಾ ಮಾಡಬೇಕು ಎಂದು ಕೇಳಿದರು. ಆಗ ವಿಜಯ್ ಅವರು ನನ್ನನ್ನು ಕರೆದು ಯುವ ಲಾಂಚ್​ ಮಾಡಲು ಒಂದು ಸಿನಿಮಾ ಮಾಡಬೇಕು ಅದನ್ನು ನೀನೇ ಮಾಡಬೇಕು ಎಂದರು. ಯುವ ನಮ್ಮ ಜವಾಬ್ದಾರಿ ಎಂದುಕೊಂಡು ನಾವು ಕೆಲಸ ಮಾಡಬೇಕು ಎಂದರು. ಅದನ್ನೇ ನಾನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಿದ್ದೇನೆ’ ಎಂದರು.

‘ನಮ್ಮ ತಂಡ ನಮಗೆ ಅದ್ಭುತವಾದ ಬೆಂಬಲ ನೀಡಿತು. ಅವರು ಕೊಟ್ಟ ಬೆಂಬಲದಿಂದ ಈ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಗುರು ಬಹಳ ಇಂಟೆನ್ಸ್ ಆದ ನಟ. ಹೊಸ ನಟ ಅನಿಸಲಿಲ್ಲ. ಅವರೊಟ್ಟಿಗೆ ಕೆಲಸ ಮಾಡುವಾಗ ಪ್ರತಿದಿನವೂ ಹೊಸತು ಎನಿಸುತ್ತಿತ್ತು. ಯುವನಿಗೆ ಮೊದಲ ಶಾಟ್ ಓಡುವ ದೃಶ್ಯ ಚಿತ್ರೀಕರಣ ಮಾಡಿದೆವು. ಯುವ ಬಹಳ ವರ್ಷಗಳ ಕಾಲ ಇಲ್ಲಿ ನೆಲೆ ನಿಲ್ಲುವ ನಟ’ ಎಂದಿದ್ದಾರೆ ಸಂತೋಷ್ ಆನಂದ್​ರಾಮ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us