ಕನ್ನಡ ನಾಡಲ್ಲಿ ಮತ್ತೆ ಹುಟ್ಟಿ ಬರಲಿ; ಮಾಧ್ಯಮದ ಮುಂದೆ ಗಳ ಗಳನೆ ಅತ್ತ ನಟಿ ಉಮಾಶ್ರೀ
ಈ ಸಾವು ಎಷ್ಟರ ಮಟ್ಟಿಗೆ ನ್ಯಾಯ ಅಂತ ಎಲ್ಲರ ಮನಸಲ್ಲೂ ಕಾಡುತ್ತಿರುವ ಪ್ರಶ್ನೆ. ಬಂಗಾದರಂತಹ ಮನುಷ್ಯನಿಗೆ ಬಂಗಾರದಂತಹ ಮಗ ಪುನೀತ್.
ಹೃದಯಾಘಾತದಿಂದ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಪಾರ ಪ್ರಮಾಣದ ಅಭಿಮಾನಿಗಳನ್ನು ಅಗಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಪ್ಪು ಅಗಲಿಕೆ ತುಂಬಲಾರದ ನಷ್ಟ ಉಂಟಾಗಿದೆ. ಚಿತ್ರರಂಗದ ಕಲಾವಿದರು ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಪುನೀತ್ ಪಾರ್ಥಿವ ಶರೀರವನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಹಿರಿಯ ನಟಿ ಉಮಾಶ್ರೀ ಮಾಧ್ಯಮದೊಂದಿಗೆ ಮಾತನಾಡುವಾಗ ಗಳ ಗಳನೆ ಅತ್ತರು. ಈ ಸಾವು ಎಷ್ಟರ ಮಟ್ಟಿಗೆ ನ್ಯಾಯ ಅಂತ ಎಲ್ಲರ ಮನಸಲ್ಲೂ ಕಾಡುತ್ತಿರುವ ಪ್ರಶ್ನೆ. ಬಂಗಾದರಂತಹ ಮನುಷ್ಯನಿಗೆ ಬಂಗಾರದಂತಹ ಮಗ ಪುನೀತ್. ಎಲ್ಲರಿಗೂ ಒಂದೇ ರೀತಿ ಪ್ರೀತಿ ಹಂಚುತ್ತಿದ್ದ ಅಪ್ಪು ಮತ್ತೆ ಕನ್ನಡ ನಾಡಿನಲ್ಲಿ ಹಟ್ಟಿ ಬರಲಿ ಅಂತ ಮಾತನಾಡುತ್ತ ಉಮಾಶ್ರೀ ಕಣ್ಣೀರು ಹಾಕಿದರು.
Published on: Oct 30, 2021 01:37 PM
Latest Videos