Puneeth Rajkumar: ‘ಜೇಮ್ಸ್​’ ಸಿನಿಮಾ ಖಂಡಿತ ರಿಲೀಸ್​ ಆಗತ್ತೆ; ಬಿಗ್​ ಅಪ್​ಡೇಟ್​​ ​ನೀಡಿದ ನಿರ್ದೇಶಕ ಚೇತನ್​ ಕುಮಾರ್

Puneeth Rajkumar James Movie: ‘ಜೇಮ್ಸ್​’ ಚಿತ್ರಕ್ಕೆ ಬಹುತೇಕ ಶೂಟಿಂಗ್​ ಮುಕ್ತಾಯ ಆಗಿತ್ತು. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಸಾಂಗ್​ ಶೂಟಿಂಗ್​ ಮಾಡಲು ನ.8ರಿಂದ ಪುನೀತ್​ ರಾಜ್​ಕುಮಾರ್​ ಅವರು ಡೇಟ್ಸ್​​ ನೀಡಿದ್ದರು.

Puneeth Rajkumar: ‘ಜೇಮ್ಸ್​’ ಸಿನಿಮಾ ಖಂಡಿತ ರಿಲೀಸ್​ ಆಗತ್ತೆ; ಬಿಗ್​ ಅಪ್​ಡೇಟ್​​ ​ನೀಡಿದ ನಿರ್ದೇಶಕ ಚೇತನ್​ ಕುಮಾರ್
ಚೇತನ್​ ಕುಮಾರ್​ - ಪುನೀತ್​ ರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 30, 2021 | 1:12 PM

ಪುನೀತ್​ ರಾಜ್​ಕುಮಾರ್​ ಅವರು ಬಹುಬೇಡಿಕೆಯ ನಟ ಆಗಿದ್ದರು. ಅವರ ಕಾಲ್​ಶೀಟ್​​ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಿದ್ದರು. ನಿಧನರಾಗುವುದಕ್ಕೂ ಮುನ್ನ ಅಪ್ಪು ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದ್ದರು. ಆ ಪೈಕಿ ‘ಜೇಮ್ಸ್​’ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಚಂದನವನದ ಯಶಸ್ವಿ ನಿರ್ದೇಶಕ ಚೇತನ್​ ಕುಮಾರ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿತ್ತು. ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ್ದಾರೆ. ಆದರೂ ಕೂಡ ‘ಜೇಮ್ಸ್​’ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಈಗ ಸಿಕ್ಕಿದೆ. ಈ ಕುರಿತು ಚೇತನ್​ ಕುಮಾರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಜೇಮ್ಸ್​ ಚಿತ್ರಕ್ಕೆ ಬಹುತೇಕ ಶೂಟಿಂಗ್​ ಮುಕ್ತಾಯ ಆಗಿತ್ತು. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಸಾಂಗ್​ ಶೂಟಿಂಗ್​ ಮಾಡಲು ನ.8ರಿಂದ ಪುನೀತ್​ ರಾಜ್​ಕುಮಾರ್​ ಅವರು ಡೇಟ್ಸ್​​ ನೀಡಿದ್ದರು. ಅವರ ಪಾತ್ರದ ಡಬ್ಬಿಂಗ್​ ಅರ್ಧ ಬಾಕಿ ಉಳಿದಿದೆ. ಈ ಸಿನಿಮಾ ಖಂಡಿತ ರಿಲೀಸ್​ ಆಗಲಿದೆ’ ಎಂದು ಚೇತನ್​ ಕುಮಾರ್​ ಹೇಳಿದ್ದಾರೆ.

ಪುನೀತ್​ ಅವರ ಇನ್ನುಳಿದ ಭಾಗದ ದೃಶ್ಯಗಳಿಗೆ ಸಹೋದರ ಶಿವರಾಜ್​ಕುಮಾರ್​ ಧ್ವನಿ ನೀಡುವ ಸಾಧ್ಯತೆ ಇದೆ. ಶಿವಣ್ಣ ಧ್ವನಿ ನೀಡಿದರೆ ಡಬ್ಬಿಂಗ್​ ಕೆಲಸ ಪೂರ್ಣಗೊಳ್ಳಲಿದೆ. ಆಗ ಸಿನಿಮಾ ಬಿಡುಗಡೆ ಮಾಡಬಹುದು. ಈ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕು ಎಂಬುದು ಅಭಿಮಾನಿಗಳ ಬಯಕೆ. ಪುನೀತ್​ ಬದುಕಿದ್ದಾಗ ರಿಲೀಸ್​ ಆದ ಅವರ ಕೊನೇ ಸಿನಿಮಾ ‘ಯುವರತ್ನ’. ಆ ಚಿತ್ರಕ್ಕೆ ಸಂತೋಷ್​ ಆನಂದ್​ ರಾಮ್​ ನಿರ್ದೇಶನ ಮಾಡಿದ್ದರು. ಇನ್ನು, ‘ಲೂಸಿಯಾ’ ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನದ ‘ದ್ವಿತ್ವ’ ಚಿತ್ರದಲ್ಲೂ ಪುನೀತ್​ ನಟಿಸಬೇಕಿತ್ತು. ಆ ಚಿತ್ರದ ಕೆಲಸಗಳು ಎಲ್ಲಿಯವರೆಗೆ ಬಂದಿದ್ದವು ಎಂಬ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ‘ದ್ವಿತ್ವ’ ಚಿತ್ರವನ್ನು ‘ಹೊಂಬಾಳೆ ಫಿಲ್ಸ್ಮ್​’ ಸಂಸ್ಥೆ ನಿರ್ಮಿಸುತ್ತಿತ್ತು.

ಪುನೀತ್​ ರಾಜ್​ಕುಮಾರ್​ ಅವರು ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಅವರ ಹೋಮ್​ ಬ್ಯಾನರ್​ ‘ಪಿಆರ್​ಕೆ ಪ್ರೊಡಕ್ಷನ್ಸ್​’ ಮೂಲಕ ಅನೇಕ ಸಿನಿಮಾಗಳು ಸಿದ್ಧವಾಗುತ್ತಿದ್ದವು. ಆದರೆ ಆ ಎಲ್ಲ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿ, ಪುನೀತ್​ ಸಾವಿನೂರಿನ ದಾರಿ ಹಿಡಿದಿದ್ದಾರೆ. ಬೆಂಗಳೂರಿನ ಕಂಠೀರವ ಸ್ಡುಡಿಯೋ ಆವರಣದಲ್ಲಿ ಶನಿವಾರ (ಅ.30) ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ:

Puneeth Rajkumar: ಪುನೀತ್​ ಹೃದಯಾಘಾತದ ವೈರಲ್​ ವಿಡಿಯೋ ಅಸಲಿಯೋ ನಕಲಿಯೋ? ಇಲ್ಲಿದೆ ಫ್ಯಾಕ್ಟ್​ ಚೆಕ್​

‘ಪುನೀತ್​ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್​ ಗೋಪಾಲ್​ ವರ್ಮಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ