ಮತ್ತೊಮ್ಮೆ ಯಶ್​ ಅನ್ನು ಕೊಂಡಾಡಿದ ಕಿಂಗ್ ಖಾನ್ ಶಾರುಖ್

Shah Rukh Khan-Yash: ಕನ್ನಡದ ನಟನಿಂದ ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ಬೆಳೆದು ನಿಂತಿದ್ದಾರೆ ಯಶ್. ಈಗ ಯಶ್ ಎಂದರೆ ಬಾಲಿವುಡ್​ನ ಸ್ಟಾರ್​​ಗಳಿಗೂ ಪ್ರೀತಿ ಮತ್ತು ಗೌರವ. ‘ಕೆಜಿಎಫ್’ ಸಿನಿಮಾಗಳಿಂದ ಸಿಕ್ಕ ಗೆಲುವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡು, ದೊಡ್ಡದಾಗಿ ಬೆಳೆಯುತ್ತಿದ್ದಾರೆ. ಯಶ್ ಬಗ್ಗೆ ಬಾಲಿವುಡ್​ನ ಬಾದ್​​ಶಾ, ಕಿಂಗ್ ಖಾನ್ ಶಾರುಖ್ ಖಾನ್ ಸಹ ಮಾತನಾಡುವಂತಾಗಿದೆ.

ಮತ್ತೊಮ್ಮೆ ಯಶ್​ ಅನ್ನು ಕೊಂಡಾಡಿದ ಕಿಂಗ್ ಖಾನ್ ಶಾರುಖ್
Yash Srk

Updated on: Oct 30, 2025 | 10:10 PM

‘ಕೆಜಿಎಫ್’ (KGF) ಸಿನಿಮಾಗಳ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆ ಎರಡು ಸಿನಿಮಾಗಳು ಅವರನ್ನು ಕನ್ನಡದ ನಟನಿಂದ ಪ್ಯಾನ್ ಇಂಡಿಯಾ ಸ್ಟಾರ್ ನಟನನ್ನಾಗಿ ಮಾಡಿಬಿಟ್ಟಿವೆ. ಈಗ ಯಶ್ ಎಂದರೆ ಬಾಲಿವುಡ್​ನ ಸ್ಟಾರ್​​ಗಳಿಗೂ ಪ್ರೀತಿ ಮತ್ತು ಗೌರವ. ‘ಕೆಜಿಎಫ್’ ಸಿನಿಮಾಗಳಿಂದ ಸಿಕ್ಕ ಗೆಲುವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡು, ದೊಡ್ಡದಾಗಿ ಬೆಳೆಯುತ್ತಿದ್ದಾರೆ. ಯಶ್ ಬಗ್ಗೆ ಬಾಲಿವುಡ್​ನ ಬಾದ್​​ಶಾ, ಕಿಂಗ್ ಖಾನ್ ಶಾರುಖ್ ಖಾನ್ ಸಹ ಮಾತನಾಡುವಂತಾಗಿದೆ.

ಈ ಹಿಂದೆಯೂ ಸಹ ಕೆಲವು ಬಾರಿ ಶಾರುಖ್ ಖಾನ್, ಯಶ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದೀಗ ಮತ್ತೊಮ್ಮೆ ಶಾರುಖ್ ಖಾನ್ ಅವರು ಯಶ್ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ತಮ್ಮ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ. ಶಾರುಖ್ ಖಾನ್ ಆಗಾಗ ಟ್ವಿಟ್ಟರ್​​ನಲ್ಲಿ ಆಸ್ಕ್​​ ಎಸ್​​ಆರ್​​ಕೆ ಹೆಸರಲ್ಲಿ ಅಭಿಮಾನಿಗಳೊಟ್ಟಿಗೆ ಸಂವಾದ ಮಾಡುತ್ತಿರುತ್ತಾರೆ. ಅಭಿಮಾನಿಗಳು ಕೇಳುವ ಬೇರೆ ಬೇರೆ ರೀತಿಯ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಈಗಲೂ ಸಹ ಅಭಿಮಾನಿಗಳೊಟ್ಟಿಗೆ ನಡೆಸಿದ ಸಂವಾದದಲ್ಲಿ ಯಶ್ ಬಗ್ಗೆ ಮಾತನಾಡಿದ್ದಾರೆ.

ಶಾರುಖ್ ಖಾನ್ ಜೊತೆಗಿನ ಸಂವಾದದ ವೇಳೆ ರುಗ್ಗ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು, ‘ಯಶ್ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಹಾಗೂ ಅವರ ಮುಂದಿನ ಸಿನಿಮಾ ‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯ ಏನು?’ ಎಂದು ಕೇಳಿದರು. ರುಗ್ಗ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, ‘ಯಶ್​​ಗೆ ನನ್ನ ಪ್ರೀತಿಯ ಹಾರೈಕೆ, ಅವರು ಬಹಳ ಸಿಹಿಯಾದ ವ್ಯಕ್ತಿ’ ಎಂದು ಸರಳವಾಗಿ ಯಶ್ ಅವರ ವ್ಯಕ್ತಿತ್ವವನ್ನು ವಿವರಿಸಿದ್ದಾರೆ.

ಇದನ್ನೂ ಓದಿ:ಶಾರುಖ್ ಖಾನ್ ಜೊತೆ ತಮ್ಮನ್ನು ಹೋಲಿಸಿಕೊಂಡ ಕಂಗನಾ ರನೌತ್

ಈ ಮೊದಲು ಸಹ ಶಾರುಖ್ ಖಾನ್ ಅವರು ಯಶ್ ಬಗ್ಗೆ ಮಾತನಾಡಿದ್ದರು. ಯಶ್ ಅವರನ್ನು ‘ಅಪ್ನಾ ಯಶ್’ (ನಮ್ಮ ಯಶ್) ಎಂದು ಹೇಳಿದ್ದರು. ‘ರಾಕಿ ಭಾಯ್’ ಎಂದು ಸಹ ಪ್ರೀತಿಯಿಂದ ಕರೆದು ಮಾತನಾಡಿಸಿದ್ದರು. ಅಸಲಿಗೆ ‘ಕೆಜಿಎಫ್’ ಸಿನಿಮಾದಿಂದ ಶಾರುಖ್ ಖಾನ್ ಅವರ ‘ಜೀರೋ’ ಸಿನಿಮಾ ಭಾರಿ ಹೊಡೆತ ತಿಂದಿತ್ತು. ಹಾಗಿದ್ದರೂ ಸಹ ಅದನ್ನೆಲ್ಲ ಮರೆತು, ಯಶ್ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತಾ ಬರುತ್ತಿದ್ದಾರೆ ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:09 pm, Thu, 30 October 25