ಶಂಕರ್ ನಾಗ್ ತಾಕತ್ತು ಎಂಥದ್ದು? ‘ಜನ್ಮ ಜನ್ಮದ’ ಕಥೆ ವಿವರಿಸಿದ ರೋಹಿತ್ ಶ್ರೀನಾಥ್

|

Updated on: Aug 13, 2024 | 7:18 AM

ಶಂಕರ್ ನಾಗ್ ಅವರು ದೊಡ್ಡ ಕಲಾವಿದ. ಶ್ರೆಷ್ಠ ನಿರ್ದೇಶಕರು ಹೌದು. ಅವರ ನಿರ್ದೇಶನದಲ್ಲಿ ಮೂಡಿಬಂದ ‘ಜನ್ಮ ಜನ್ಮದ ಅನುಬಂಧ’ ಸಿನಿಮಾ ಯಶಸ್ಸು ಕಂಡಿತ್ತು. ಈ ಚಿತ್ರದ ಹಿಂದಿನ ಕಥೆಯನ್ನು ರೋಹಿತ್ ಶ್ರೀನಾಥ್ ಅವರು ಜೀ ಕನ್ನಡ ವೇದಿಕೆ ಮೇಲೆ ಮಾತನಾಡಿದ್ದಾರೆ.

ಶಂಕರ್ ನಾಗ್ ತಾಕತ್ತು ಎಂಥದ್ದು? ‘ಜನ್ಮ ಜನ್ಮದ’ ಕಥೆ ವಿವರಿಸಿದ ರೋಹಿತ್ ಶ್ರೀನಾಥ್
ಶಂಕರ್​-ರೋಹಿತ್
Follow us on

ಶಂಕರ್ ನಾಗ್ ಅವರು ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಕಲಾವಿದರನ್ನು ಪರಿಚಯಿಸಿದ ಖ್ಯಾತಿ ಅವರಿಗೆ ಇದೆ. ಶಂಕರ್ ನಾಗ್ ಅವರು ರೋಹಿತ್ ಶ್ರೀನಾಥ್ ಅವರು ಸಿನಿಮಾದಲ್ಲಿ ನಟಿಸಬೇಕು ಎಂದು ಒತ್ತಾಯ ಮಾಡಿದ್ದರು ಶಂಕರ್​ ನಾಗ್​. ಈ ಬಗ್ಗೆ ರೋಹಿತ್ ಅವರು ಜೀ ಕನ್ನಡ ವೇದಿಕೆ ಮೇಲೆ ಮಾತನಾಡಿದ್ದಾರೆ.

‘ಜನ್ಮ ಜನ್ಮದ ಅನುಬಂಧ’ ಸಿನಿಮಾ 1980ರಲ್ಲಿ ರಿಲೀಸ್ ಆಯಿತು. ಶಂಕರ್ ನಾಗ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರು. ಅನಂತ್ ನಾಗ್, ಶಂಕರ್ ನಾಗ್, ಜಯಂತಿ, ಜಯಮಾಲಾ, ಮಂಜುಳಾ ಈ ಸಿನಿಮಾದಲ್ಲಿ ನಟಿಸಿದ್ದರು. ಹೆಸರೇ ಹೇಳುವಂತೆ ಈ ಚಿತ್ರ ಪುನರ್​ಜನ್ಮದ ಕಥೆ. ಕಥಾ ನಾಯಕ ಅನಂತ್ ನಾಗ್ ಅವರು ಮರುಜನ್ಮ ತಾಳಿ ಬರುವ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಕಥಾ ನಾಯಕನ ಬಾಲ್ಯದ ಪಾತ್ರವನ್ನು ರೋಹಿತ್ ಮಾಡಿದ್ದರು. ಈ ಬಗ್ಗೆ ರೋಹಿತ್ ಈಗ ಮಾತನಾಡಿದ್ದಾರೆ.

‘ಜೀ ವರಮಹಾಲಕ್ಷ್ಮಿ ಉತ್ಸವ’ದಲ್ಲಿ ರೋಹಿತ್ ಮಾತನಾಡಿದ್ದಾರೆ. ‘ನನ್ನ ಎರಡನೇ ದೊಡ್ಡ ಸಿನಿಮಾ ಜನ್ಮ ಜನ್ಮದ ಅನುಬಂಧ. ಶಂಕರ್ ನಾಗ್ ಅವರ ನಿರ್ದೇಶನ ಈ ಸಿನಿಮಾಗೆ ಇತ್ತು. ಅವರು ನಮ್ಮ ಮನೆಗೆ ಬಂದರು. ನಮ್ಮ ಸಿನಿಮಾಗೆ ಇವನೇ ಬೇಕು ಎಂದು ಹಠ ಹಿಡಿದರು. ಈತ ಹೇಗೆ ನಟಿಸುತ್ತಾನೆ ಎಂಬ ಚಿಂತೆ ನಮ್ಮ ತಂದೆ-ತಾಯಿಯದ್ದಾಗಿತ್ತು’ ಎಂದಿದ್ದಾರೆ ರೋಹಿತ್.

ಇದನ್ನೂ ಓದಿ: ‘ಈ ಪ್ರಶಸ್ತಿಯನ್ನು ಶಂಕರ್ ನಾಗ್​ಗೆ ಅರ್ಪಿಸುತ್ತೇನೆ’; ಭಾವುಕರಾಗಿ ಪತ್ರ ಬರೆದ ರಿಷಬ್ ಶೆಟ್ಟಿ

‘ಸಿನಿಮಾ ಆರಂಭ ಆಗೋದು ನನ್ನಿಂದ. 15 ನಿಮಿಷ ಆ ಸಿನಿಮಾದಲ್ಲಿ ಇರೋದು. ಆ ನಟನೆ ನೋಡಿ ನನಗೆ ಅಚ್ಚರಿ ಆಗಿತ್ತು. ಎಂಥವರಿಂದಾದರೂ ನಟನೆ ತೆಗೆಸಬಹುದು ಅನ್ನೋದಕ್ಕೆ ಶಂಕರ್ ನಾಗ್ ಉತ್ತಮ ಉದಾಹರಣೆ’ ಎಂದಿದ್ದಾರೆ ರೋಹಿತ್. ರೋಹಿತ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.