‘ಕಿರಿಕ್ ಪಾರ್ಟಿ’ಗಿಂತ ಮೊದಲು ರಶ್ಮಿಕಾ ಎಷ್ಟು ಬಾರಿ ರಿಜೆಕ್ಟ್ ಆಗಿದ್ದರು ಗೊತ್ತಾ?
ಪ್ರತಿ ಯಶಸ್ಸಿನ ಹಿಂದೆ ಸಾಕಷ್ಟು ಶ್ರಮ ಇರುತ್ತದೆ. ರಶ್ಮಿಕಾ ಇಂದು ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಆರಂಭದಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ಬಂದಿದ್ದಾರೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಅವರು 20-25 ಆಡಿಷನ್ಗಳಲ್ಲಿ ರಿಜೆಕ್ಟ್ ಆಗಿದ್ದಾರಂತೆ.
ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಈಗ ದೇಶಾದ್ಯಂತ ಹಬ್ಬಿದೆ. ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿ ಆ ಬಳಿಕ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಫೇಮಸ್ ಆದರು. ಅವರು ಭಾರತದ ಕ್ರಶ್ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅವರ ಯಶಸ್ಸಿನ ಹಿಂದೆ ಒಂದು ಹೋರಾಟ ಇದೆ. ಆ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ.
ಪ್ರತಿ ಯಶಸ್ಸಿನ ಹಿಂದೆ ಒಂದು ಹೋರಾಟ ಇರುತ್ತದೆ. ರಶ್ಮಿಕಾ ಮಂದಣ್ಣ ಕೂಡ ಈ ರೀತಿಯ ಕಷ್ಟ ಅನುಭವಿಸಿ ಬಂದಿದ್ದಾರೆ. ಆದರೆ, ಆ ಬಗ್ಗೆ ಅವರು ಹೇಳಿಕೊಂಡಿದ್ದು ಕಡಿಮೆ. ‘ನಾನು ಆಡಿಷನ್ನಲ್ಲಿ ರಿಜೆಕ್ಟ್ ಆದ ಬಳಿಕ ಅಳುತ್ತಾ ಮನೆ ಸೇರುತ್ತಿದ್ದೆ. ನಾನು ಸಿನಿಮಾ ಒಂದಕ್ಕೆ ನಿರಂತರವಾಗಿ ಆಡಿಷನ್ ನೀಡಿ ಕೊನೆಯಲ್ಲಿ ಆಯ್ಕೆ ಆದೆ. 2-3 ತಿಂಗಳು ತರಬೇತಿ ಪಡೆದ ನಂತರ ಸಿನಿಮಾ ಕ್ಯಾನ್ಸಲ್ ಆಯಿತು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಅನೇಕರು ರಶ್ಮಿಕಾ ಅವರಿಗೆ ಸುಲಭದಲ್ಲಿ ‘ಕಿರಿಕ್ ಪಾರ್ಟಿ’ಯಲ್ಲಿ ಅವಕಾಶ ಸಿಕ್ಕಿತು ಎಂದುಕೊಂಡಿದ್ದಾರೆ. ಆದರೆ, ಅವರು 20-25 ಆಡಿಷನ್ಗಳಲ್ಲಿ ರಿಜೆಕ್ಟ್ ಆಗಿದ್ದಾರಂತೆ.
‘ಸಿನಿಮಾದಿಂದ ಸಿನಿಮಾಗೆ ಉತ್ತಮ ಆಗಬೇಕು ಎನ್ನುವ ಆಸೆ ನಮ್ಮ ಕೈಯಲ್ಲೇ ಇರುತ್ತದೆ. ನಾನು ನನ್ನ ಸಿನಿಮಾಗಳನ್ನು ನೋಡಿದಾಗ ನಾನು ಇನ್ನೂ ಉತ್ತಮವಾಗಿ ನಟಿಸಬಹುದು ಎಂದನಿಸುತ್ತದೆ’ ಎಂದಿದ್ದಾರೆ ಅವರು. ರಶ್ಮಿಕಾ ಮಂದಣ್ಣ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿವೆ.
ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ವಿಶೇಷ ಸಾಂಗ್ನಲ್ಲಿ ಹೆಜ್ಜೆಹಾಕಲು ಕನ್ನಡದ ಹೀರೋಯಿನ್ಗೆ ಆಫರ್?
ಡಿಸೆಂಬರ್ 6ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಅವರೇ ನಾಯಕಿ. ಇನ್ನು, ವಿಕ್ಕಿ ಕೌಶಲ್ ನಟನೆಯ ‘ಛವಾ’ ಸಿನಿಮಾ ಕೂಡ ಅದೇ ದಿನ ರಿಲೀಸ್ ಆಗೋ ಸಾಧ್ಯತೆ ಇದೆ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಈ ಮೂಲಕ ಅವರ ಖ್ಯಾತಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.