‘ಪುಷ್ಪ 2’ ಚಿತ್ರದ ವಿಶೇಷ ಸಾಂಗ್ನಲ್ಲಿ ಹೆಜ್ಜೆಹಾಕಲು ಕನ್ನಡದ ಹೀರೋಯಿನ್ಗೆ ಆಫರ್?
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ರಂದು ‘ಪುಷ್ಪ 2’ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಶೂಟಿಂಗ್ ವಿಳಂಬವಾದ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಡಿಸೆಂಬರ್ 6ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಸ್ಪೆಷಲ್ ಸಾಂಗ್ ಮಾಡಲಿದ್ದಾರಂತೆ.
ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ದಾಖಲೆಗಳನ್ನು ಸೃಷ್ಟಿಸಿದೆ. ಸಿನಿಮಾವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಚಿತ್ರದ ಹಾಡುಗಳು ಕೂಡ ಭಾರೀ ಹಿಟ್ ಆದವು. ಹಲವರು ಹಾಡುಗಳ ಮೇಲೆ ಫ್ಯಾನ್ಸ್ ರೀಲ್‌ಗಳನ್ನು ಮಾಡಿದ್ದಾರೆ. ಈ ಕಾರಣದಿಂದಲೂ ಹಾಡುಗಳು ಫೇಮಸ್ ಆದವು. ನಟಿ ಸಮಂತಾ ರುತ್ ಪ್ರಭು ಅವರು ಈ ಚಿತ್ರದಲ್ಲಿ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಿಂದ ಸಮಂತಾ ಖ್ಯಾತಿ ಮತ್ತು ಜನಪ್ರಿಯತೆ ಅಪಾರವಾಗಿ ಹೆಚ್ಚಾಯಿತು. ಈಗ ಎರಡನೇ ಪಾರ್ಟ್ನಲ್ಲಿ ಯಾರು ಹೆಜ್ಜೆ ಹಾಕಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
‘ಪುಷ್ಪ’ ಚಿತ್ರದ ಮೊದಲ ಭಾಗವು ಅಭಿಮಾನಿಗಳನ್ನು ಸಾಕಷ್ಟು ರಂಜಿಸಿತು. ಈಗ ಚಿತ್ರದ ಎರಡನೇ ಭಾಗದ ಶೂಟಿಂಗ್ ನಡೆಯುತ್ತಿದೆ. ಅಭಿಮಾನಿಗಳು ಕೂಡ ‘ಪುಷ್ಪ 2′ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಈ ವರ್ಷ ಸಮಂತಾ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಚಿತ್ರದಲ್ಲಿ ಐಟಂ ಸಾಂಗ್‌ಗೆ ಸಮಂತಾ ಬದಲಿಗೆ ಯಾವ ನಟಿ ಬರಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಪ್ರಸ್ತಾಪವನ್ನು ಸ್ವತಃ ಸಮಂತಾ ತಿರಸ್ಕರಿಸಿದ್ದಾರೆ. ಈ ವೇಳೆ ಸಮಂತಾ ಸ್ಥಾನಕ್ಕೆ ಇಬ್ಬರು ಖ್ಯಾತ ನಟಿಯರ ಹೆಸರು ಕೇಳಿಬಂದಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ, ‘ಪುಷ್ಪ 2’ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾನ್ಹವಿ ಕಪೂರ್ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಜಾನ್ವಿ ಜೊತೆಗೆ ಕನ್ನಡದ ನಟಿ ಶ್ರೀಲೀಲಾ ಹೆಸರು ಕೂಡ ಚರ್ಚೆಗೆ ಬಂದಿದೆ. ಆದರೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಸದ್ಯ ‘ಪುಷ್ಪ 2′ ಸಿನಿಮಾದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸ್ಕ್ರಿಪ್ಟ್ ಮೊಟಕುಗೊಳಿಸಬೇಕಾದರೆ ಐಟಂ ಹಾಡುಗಳನ್ನು ತೆಗೆದುಹಾಕಬಹುದು ಎಂಬ ಮಾತು ಕೂಡ ಇದೆ. ಹೀಗಾಗಿ ‘ಪುಷ್ಪ 2’ ಸಿನಿಮಾದಲ್ಲಿ ಏನೆಲ್ಲಾ ಡಿಫರೆಂಟ್ ಆಗಲಿದೆ ಎಂದು ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ. ಅಭಿಮಾನಿಗಳ ಮನದಲ್ಲಿ ಸಿನಿಮಾದ ಕುತೂಹಲ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಒಂದು ಕೈಯಲ್ಲಿ ಕೊಡಲಿ, ಇನ್ನೊಂದು ಕೈಯಲ್ಲಿ ಗನ್; ಫಹಾದ್ ಫಾಸಿಲ್ ಜನ್ಮದಿನಕ್ಕೆ ‘ಪುಷ್ಪ 2’ ಪೋಸ್ಟರ್
ಇನ್ನು ‘ಪುಷ್ಪ’ ಸಿನಿಮಾದ ಬಗ್ಗೆ ಮಾತನಾಡುತ್ತಾ, ಈ ಸಿನಿಮಾ ವಿಶ್ವಾದ್ಯಂತ 350 ಕೋಟಿ ರೂ. ಗಳಿಸಿದೆ. ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಇತರ ನಟರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಪುಷ್ಪ 2′ ಚಿತ್ರವು 6 ಡಿಸೆಂಬರ್ 2024 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅವರ ಕೆಮಿಸ್ಟ್ರಿ ಅಭಿಮಾನಿಗಳಿಗೆ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.