‘ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ’; ದರ್ಶನ್ ಬಗ್ಗೆ ರಾಕ್ಲೈನ್ ವೆಂಕಟೇಶ್ ಮಾತು
Rockline Venkatesh on Darshan: ಕಲಾವಿದರ ಸಂಘ ಇಷ್ಟು ದಿನ ಸೈಲೆಂಟ್ ಆಗಿತ್ತು. ಈಗ ಕಲಾವಿದರ ಸಂಘದಲ್ಲಿ ಹೋಮ-ಹವನ ಮಾಡಿಸಲಾಗುತ್ತಿದೆ. ಈ ವಿಚಾರ ಅಚ್ಚರಿ ತಂದಿದೆ. ದರ್ಶನ್ ಬಂಧನಕ್ಕೆ ಒಳಗಾಗಿರುವುದರಿಂದಲೇ ಈ ಹವನ ಮಾಡಿಸಲಾಗುತ್ತಿದೆ ಎಂದು ಅನೇಕರು ಭಾವಿಸಿದ್ದರು. ಈ ಬಗ್ಗೆ ರಾಕ್ಲೈನ್ ವೆಂಕಟೇಶ್ ಮಾತನಾಡಿದ್ದಾರೆ.
ದರ್ಶನ್ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಅವರು ಹೊರಕ್ಕೆ ಬರಲಿ ಎಂದು ಫ್ಯಾನ್ಸ್ ಹಾಗೂ ಕುಟುಂಬದವರು ಕೋರುತ್ತಿದ್ದಾರೆ. ಈ ಬೆನ್ನಲ್ಲೇ ಕಲಾವಿದರ ಸಂಘದಲ್ಲಿ ಚಿತ್ರರಂಗದ ಒಳಿತಿಗೆ ಹೋಮ-ಹವನ ಮಾಡಿಸಲಾಗುತ್ತಿದೆ. ಇಷ್ಟು ವರ್ಷ ಇಲ್ಲದೆ ಇರುವುದು ಈಗೇಕೆ ಎನ್ನುವ ಪ್ರಶ್ನೆ ಮೂಡೋದು ಸಹಜ. ದರ್ಶನ್ ಬಂಧನಕ್ಕೆ ಒಳಗಾಗಿರುವುದರಿಂದಲೇ ಈ ಹವನ ಮಾಡಿಸಲಾಗುತ್ತಿದೆ ಎಂದು ಅನೇಕರು ಭಾವಿಸಿದ್ದರು. ಈ ಬಗ್ಗೆ ರಾಕ್ಲೈನ್ ವೆಂಕಟೇಶ್ ಮಾತನಾಡಿದ್ದಾರೆ. ‘ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲಿ. ಚಿತ್ರರಂಗದ ಕುಟುಂಬದವರಿಂದ ಒಬ್ಬರು ಬಂಧನಕ್ಕೆ ಒಳಗಾಗಿದ್ದಾಗ ನಾನು ಫೀಲ್ ಮಾಡುತ್ತೇನೆ. ಅವರಿಗಾಗಿ ಹೋಮ-ಹವನ ಮಾಡಿಸುತ್ತಿದ್ದೇವೆ ಎಂದು ಯಾರಾದರೂ ಭಾವಿಸಿದ್ದರೆ ಆ ರೀತಿ ಇಲ್ಲ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 12, 2024 11:25 AM
Latest Videos