ಸಣ್ಣ ಡೈಲಾಗ್ ಕೂಡ ಇಲ್ಲದೇ ಕಣ್ಣಲ್ಲೇ ಕಿಚ್ಚು ಹಚ್ಚಿದ ಭೈರತಿ ರಣಗಲ್ ಟೀಸರ್

|

Updated on: Oct 24, 2024 | 7:30 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಭೈರತಿ ರಣಗಲ್’ ಕೂಡ ಇದೆ. ನಿರ್ದೇಶಕ ನರ್ತನ್​ ಮತ್ತು ನಟ ಶಿವರಾಜ್​ಕುಮಾರ್ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗ ಈ ಚಿತ್ರದ ಹೊಸ ಟೀಸರ್​ ಲಾಂಚ್ ಆಗಿದೆ. ಸಿನಿಮಾ ಬಗ್ಗೆ ಕೌತುಕ ಹೆಚ್ಚಿಸುವಲ್ಲಿ ಈ ಟೀಸರ್​ ಯಶಸ್ವಿ ಆಗಿದೆ. ನ.15ರಂದು ಸಿನಿಮಾ ಬಿಡುಗಡೆ ಆಗಲಿದೆ.

ಸಣ್ಣ ಡೈಲಾಗ್ ಕೂಡ ಇಲ್ಲದೇ ಕಣ್ಣಲ್ಲೇ ಕಿಚ್ಚು ಹಚ್ಚಿದ ಭೈರತಿ ರಣಗಲ್ ಟೀಸರ್
ಶಿವರಾಜ್​ಕುಮಾರ್​
Follow us on

‘ಮಫ್ತಿ’ ಸಿನಿಮಾ ಮೂಲಕ ಮೋಡಿ ಮಾಡಿದ್ದ ನಿರ್ದೇಶಕ ನರ್ತನ್ ಅವರು ಈಗ ‘ಭೈರತಿ ರಣಗಲ್’ ಮೂಲಕ ಪ್ರೇಕ್ಷಕರಿಗೆ ಮಾಸ್​ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ನವೆಂಬರ್​ 15ರಂದು ‘ಭೈರತಿ ರಣಗಲ್’ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ. ಈಗಾಗಲೇ ಸಿನಿಮಾ ಬಗ್ಗೆ ಭಾರಿ ಹೈಪ್ ಕ್ರಿಯೇಟ್ ಆಗಿದೆ. ಇಂದು (ಅಕ್ಟೋಬರ್​ 24) ಈ ಸಿನಿಮಾದ ಹೊಸದೊಂದು ಟೀಸರ್ ಅನಾವರಣ ಆಗಿದೆ. ಶಿವರಾಜ್​ಕುಮಾರ್​ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದು, ಸಖತ್​ ಮಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮಫ್ತಿ’ ನೋಡಿ ಇಷ್ಟಪಟ್ಟಿದ್ದ ಎಲ್ಲರೂ ಈಗ ‘ಭೈರತಿ ರಣಗಲ್’ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

ಶಿವರಾಜ್​ಕುಮಾರ್​ ಅವರು ‘ಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಎಂಬ ಪಾತ್ರ ಮಾಡಿದ್ದರು. ಆ ಪಾತ್ರ ಜನರಿಗೆ ತುಂಬ ಇಷ್ಟ ಆಗಿತ್ತು. ಈಗ ಅದೇ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ನರ್ತನ್​ ಅವರು ಕಥೆಯನ್ನು ವಿಸ್ತರಿಸಿದ್ದಾರೆ. ಹಾಗಾಗಿ ಶಿವರಾಜ್​ಕುಮಾರ್​ ಅವರ ಅಭಿಮಾನಿಗಳಿಗೆ ಈ ಸಿನಿಮಾ ಸಖತ್ ಇಷ್ಟ ಆಗಲಿದೆ ಎಂಬ ನಿರೀಕ್ಷೆ ಇದೆ. ಟೀಸರ್​ನಲ್ಲಿ ಮೇಕಿಂಗ್​ ಗುಣಮಟ್ಟ ಗಮನ ಸೆಳೆಯುತ್ತಿದೆ.

‘ಭೈರತಿ ರಣಗಲ್’ ಟೀಸರ್:

ಆನಂದ್​ ಆಡಿಯೋ ಮೂಲಕ ಬಿಡುಗಡೆ ಆಗಿರುವ ಈ ಹೊಸ ಟೀಸರ್​ನಲ್ಲಿ ಶಿವರಾಜ್​ಕುಮಾರ್​ ಅವರು ಒಂದೇ ಒಂದು ಡೈಲಾಗ್​ ಕೂಡ ಹೇಳಿಲ್ಲ. ಹಾಗಿದ್ದರೂ ಕೂಡ ಅವರು ಕಿಚ್ಚು ಹತ್ತಿಸಿದ್ದಾರೆ. ಮಾಸ್​ ಲುಕ್​ನಲ್ಲಿ ಅಬ್ಬರಿಸಿದ್ದಾರೆ. ಸೈಲೆಂಟ್​ ಆಗಿಯೇ ಖಳರ ಎದೆಯಲ್ಲಿ ನಡುಕ ಹುಟ್ಟಿಸುವಂತಹ ಈ ಪಾತ್ರವನ್ನು ನೋಡಲು ಶಿವರಾಜ್​ಕುಮಾರ್​ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ‘ಭೈರತಿ ರಣಗಲ್’ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಜೊತೆ ಸಣ್ಣ ಪಾತ್ರ ಮಾಡಿದ್ದ ಈ ಕಲಾವಿದ ಈಗ ಬಾಲಿವುಡ್​ನ ಸ್ಟಾರ್ ಹೀರೋ

ಗೀತಾ ಶಿವರಾಜ್​ಕುಮಾರ್​ ಅವರು ‘ಗೀತಾ ಪಿಕ್ಚರ್ಸ್​’ ಮೂಲಕ ‘ಭೈರತಿ ರಣಗಲ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನವೀನ್​ ಕುಮಾರ್​ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ರವಿ ಬಸ್ರೂರು ಅವರು ಸಂಗೀತ ನೀಡಿದ್ದಾರೆ. ರಾಹುಲ್ ಬೋಸ್​, ರುಕ್ಮಿಣಿ ವಸಂತ್, ದೇವರಾಜ್, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನರ್ತನ್ ಅವರ ಡೈರೆಕ್ಷನ್​ ಮೇಲೆ ಪ್ರೇಕ್ಷಕರಿಗೆ ಭರವಸೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.