‘ತಮ್ಮನಾಗಿ ಎಷ್ಟೋ ಬಾರಿ ಶಕ್ತಿ ತುಂಬಿದ್ದೀಯ’; ರಾಘವೇಂದ್ರ ರಾಜ್​ಕುಮಾರ್ ಬರ್ತ್​ಡೇಗೆ ಶಿವಣ್ಣ ಭಾವುಕ ಪೋಸ್ಟ್

ಶಿವರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಮಧ್ಯೆ ಸಾಕಷ್ಟು ಅನ್ಯೋನ್ಯತೆ ಇದೆ. ಪುನೀತ್ ಅವರನ್ನು ಕಳೆದುಕೊಂಡಾಗ ನೋವಿನಲ್ಲಿದ್ದರೂ ಅಣ್ಣನ ಸಮಾಧಾನ ಮಾಡುವ ಕೆಲಸವನ್ನು ರಾಘಣ್ಣ ಮಾಡಿದ್ದರು. ಈ ಕಾರಣದಿಂದಲೇ ಶಿವರಾಜ್​ಕುಮಾರ್ ಅವರು ಈ ಮಾತನ್ನು ಹೇಳಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

‘ತಮ್ಮನಾಗಿ ಎಷ್ಟೋ ಬಾರಿ ಶಕ್ತಿ ತುಂಬಿದ್ದೀಯ’; ರಾಘವೇಂದ್ರ ರಾಜ್​ಕುಮಾರ್ ಬರ್ತ್​ಡೇಗೆ ಶಿವಣ್ಣ ಭಾವುಕ ಪೋಸ್ಟ್
ವಿಜಯ್ ರಾಘವೇಂದ್ರ-ಶಿವರಾಜ್​ಕುಮಾರ್

Updated on: Aug 15, 2023 | 8:55 AM

ಡಾ. ರಾಜ್​ಕುಮಾರ್ ಅವರ ಮಗ, ನಟ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರಿಗೆ ಇಂದು (ಆಗಸ್ಟ್ 15) ಜನ್ಮದಿನದ ಸಂಭ್ರಮ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಅನೇಕರು ರಾಘವೇಂದ್ರ ರಾಜ್​ಕುಮಾರ್​ಗೆ ಶುಭಾಶಯ ತಿಳಿಸುತ್ತಿದ್ದಾರೆ. ರಾಘವೇಂದ್ರ ರಾಜ್​ಕುಮಾರ್ ಅವರಿಗೆ ಶಿವಣ್ಣ (Shivarajkumar) ಕೂಡ ಬರ್ತ್​ಡೇ ವಿಶ್ ತಿಳಿಸಿದ್ದಾರೆ. ‘ತಮ್ಮನಾಗಿ ಎಷ್ಟೋ ಬಾರಿ ಶಕ್ತಿ ತುಂಬಿದ್ದೀಯ’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.

ರಾಘವೇಂದ್ರ ರಾಜ್​ಕುಮಾರ್​ಗೆ ಹುಟ್ಟುಹಬ್ಬದ ಶುಭಾಶ ತಿಳಿಸಿ ಟ್ವೀಟ್ ಮಾಡಿರುವ ಶಿವರಾಜ್​ಕುಮಾರ್ ಅವರು, ‘ತಮ್ಮನಾಗಿ ನನಗೆ ಎಷ್ಟೋ ಬಾರಿ ಶಕ್ತಿ ತುಂಬಿದ್ದೀಯ. ಕುಟುಂಬದ ಪ್ರತಿಯೊಬ್ಬರ ಜೊತೆಗೂ ಸ್ಫೂರ್ತಿಯಾಗಿ ನಿಂತಿದ್ದೀಯ. ಯಶಸ್ಸು, ಆಯಸ್ಸು, ಸುಖ, ಸಂತೋಷ, ಎಲ್ಲವೂ ನಿನ್ನ ಪಾಲಿಗಿರಲಿ. ಹುಟ್ಟು ಹಬ್ಬದ ಶುಭಾಶಯಗಳು ರಾಘು’ ಎಂದು ಬರೆದುಕೊಂಡಿದ್ದಾರೆ.

ಶಿವರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಮಧ್ಯೆ ಸಾಕಷ್ಟು ಅನ್ಯೋನ್ಯತೆ ಇದೆ. ಪುನೀತ್ ಅವರನ್ನು ಕಳೆದುಕೊಂಡಾಗ ನೋವಿನಲ್ಲಿದ್ದರೂ ಅಣ್ಣನ ಸಮಾಧಾನ ಮಾಡುವ ಕೆಲಸವನ್ನು ರಾಘಣ್ಣ ಮಾಡಿದ್ದರು. ಈ ಕಾರಣದಿಂದಲೇ ಶಿವರಾಜ್​ಕುಮಾರ್ ಅವರು ಈ ಮಾತನ್ನು ಹೇಳಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಶಿವಣ್ಣ ಮಾಡಿರೋ ಟ್ವೀಟ್

ಇದನ್ನೂ ಓದಿ: ಎದೆಯೊಳಗಿದ್ದ ಅಪ್ಪುವನ್ನು ಎದೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಂಡ ರಾಘವೇಂದ್ರ ರಾಜ್​ಕುಮಾರ್ 

ರಾಘವೇಂದ್ರ ರಾಜ್​ಕುಮಾರ್ ಅವರು ರಾಜ್​ಕುಮಾರ್ ಅವರ ಮಗ. ಹೀಗಾಗಿ ಬಾಲ ಕಲಾವಿದನಾಗಿ ನಟಿಸಲು ಅವರಿಗೆ ಸುಲಭದಲ್ಲಿ ಅವಕಾಶ ದೊರೆಯಿತು. ‘ಶ್ರೀ ಶ್ರೀನಿವಾಸ ಕಲ್ಯಾಣ’ ಸೇರಿ ಎರಡು ಸಿನಿಮಾಗಳಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಿದರು. ‘ಚಿರಂಜೀವಿ ಸುಧಾಕರ್’ ಸಿನಿಮಾ ಮೂಲಕ ರಾಘವೇಂದ್ರ ರಾಜ್​ಕುಮಾರ್ ಹೀರೋ ಆದರು. ಈ ಸಿನಿಮಾ 1988ರಲ್ಲಿ ರಿಲೀಸ್ ಆಯಿತು. 1989ರಲ್ಲಿ ರಿಲೀಸ್ ಆದ ‘ನಂಜುಂಡಿ ಕಲ್ಯಾಣ’ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಚಿತ್ರದಲ್ಲಿ ರಾಘಣ್ಣ ಅತಿಥಿ ಪಾತ್ರ ಮಾಡಿದ್ದರು. ಸದ್ಯ ಕೆಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:54 am, Tue, 15 August 23