AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜ ಘಟನೆ ಆಧರಿತ ಸಿನಿಮಾದಲ್ಲಿ ಶುಭ ಪೂಂಜಾ: ಎಂದೂ ನೋಡಿರದ ಕತೆ ಎಂದ ನಿರ್ದೇಶಕ

Shubha Poonja: ನಟಿ ಶುಭಾ ಪೂಂಜಾ ನಟಿಸಿರುವ ನೈಜ ಘಟನೆ ಆಧರಿಸಿದ 'ಅಂಬುಜಾ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾ ಯಾವಾಗ ಬಿಡುಗಡೆ?

ನಿಜ ಘಟನೆ ಆಧರಿತ ಸಿನಿಮಾದಲ್ಲಿ ಶುಭ ಪೂಂಜಾ: ಎಂದೂ ನೋಡಿರದ ಕತೆ ಎಂದ ನಿರ್ದೇಶಕ
ಅಂಬುಜ
ಮಂಜುನಾಥ ಸಿ.
|

Updated on: Jul 09, 2023 | 10:20 PM

Share

ನಟಿ ಶುಭ ಪೂಂಜಾ (Shubha Poonja), ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಅಂಬುಜಾ (Ambhuja) ಸಿನಿಮಾದ ಟ್ರೈಲರ್ (Trailer) ಬಿಡುಗಡೆ ಆಗಿದೆ. ಇದು ನಿಜ ಘಟನೆ ಆಧರಿಸಿದ ಸಿನಿಮಾ ಎನ್ನಲಾಗಿದ್ದು, ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಶ್ರೀನಿ ಹನುಮಂತರಾಜು ”ಪ್ರೇಕ್ಷಕರು ಎಲ್ಲೂ ನೋಡಿರದ, ಕೇಳಿರದ ಕತೆ ಇದು. ಖಂಡಿತಾ ಚಿತ್ರ ನೋಡುವಾಗ ಪ್ರೇಕ್ಷಕರು ಬೆಚ್ಚಿ ಬೀಳುತ್ತಾರೆ. ನಾವು ಸುಮ್ಮನೇ ಇದನ್ನು ಹೇಳುತ್ತಿಲ್ಲ, ಭರವಸೆ ನೀಡುತ್ತಿದ್ದೇವೆ. ಚಿತ್ರ ನೋಡಿದ‌ ಮೇಲೆ‌ ನೀವೇ ಶಾಕ್ ಆಗುವುದು ಗ್ಯಾರೆಂಟಿ” ಎಂದಿದ್ದಾರೆ.

ಈ ಸಿನಿಮಾಕ್ಕೆ ಮೊದಲಿಗೆ ಕಲಾವಿದರಾಗಿ ಆಯ್ಕೆ ಆಗಿದ್ದು ನಟಿ ಶುಭಾ ಪೂಂಜಾ. ಆ ನಂತರ ರಜನಿ ಆಯ್ಕೆ ಆದರು. ಸಿನಿಮಾನ ಈಗಾಗಲೇ ಕೆಲವು ಜನ ನೋಡಿದ್ದಾರೆ. ಸಿನಿಮಾ ನೋಡುವಾಗ ಅವರ ಕೈ-ಕಾಲುಗಳು ನಡುಕ ಬಂದಿತ್ತು. ಮತ್ತು ಚಿತ್ರದ ವಸ್ತು ಬಗ್ಗೆ ಚರ್ಚೆ ಸಹ ಮಾಡಿ, ಇದೊಂದು ಅದ್ಭುತವಾದ ಸಿನಿಮಾ ಎಂದಿದ್ದಾರೆ ಎಂದರು.

ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ”ಮೊದಲು ಕಥೆ ಬರೆದಾಗ ಇಷ್ಟು ಚೆನ್ನಾಗಿ ಮೂಡಿ ಬರುತ್ತದೆ ಅಂದುಕೊಂಡಿರಲಿಲ್ಲ. ಚಿತ್ರತಂಡದ ಎಲ್ಲರೂ ಬಹಳ ಶ್ರಮ ಹಾಕಿ ಸಿನಿಮಾ ಮಾಡಿದ್ದಾರೆ. ರಜಿನಿ ಅವರಿಗೆ ಪಾಪ ಕಾಲು ನೋವಿದ್ದರು ಸಹ 25 ಕೆಜಿ ಭಾರದ ವಸ್ತ್ರಗಳನ್ನು ಹಾಕಿಕೊಂಡು ನೃತ್ಯ ಮಾಡಿದ್ದಾರೆ. ಶುಭಾ ಮೇಡಂ ಗೆ ಎತ್ತರವೆಂದರೆ ಭಯ. ಹಾಗಿದ್ದರೂ ಸಹ ಸಿನಿಮಾಕ್ಕಾಗಿ 3 km ಬೆಟ್ಟ ಹತ್ತಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರಕ್ಕಾಗಿ ಎಲ್ಲರೂ ಹೆಚ್ಚುವರಿ ಶ್ರಮ ಹಾಕಿದ್ದಾರೆ. ನಿರ್ದೇಶಕ ಶ್ರೀನಿ ಬಹಳ ಕಷ್ಟಪಟ್ಟು ಇಷ್ಟಪಟ್ಟು ‘ಅಂಬುಜ’ ಸಿನಿಮಾವನ್ನು ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:10 ಕೆಜಿ ದೇಹದ ತೂಕ ಇಳಿಸಿಕೊಂಡ ಶುಭಾ ಪೂಂಜಾ; ಹೇಗೆ ಎನ್ನುವ ಗುಟ್ಟು ಬಿಟ್ಟುಕೊಟ್ಟ ನಟಿ

ನಟಿ ಶುಭಾ ಪೂಂಜಾ ಮಾತನಾಡಿ, ”ಕ್ರೈಂ ವರದಿಗಾರ್ತಿ ಪಾತ್ರವನ್ನು ನಾನು ಮಾಡಿದ್ದೇನೆ. ಭಿನ್ನವಾದ ಶೇಡ್​ಗಳು ಇರುವ ಪಾತ್ರ ನನ್ನದು. ನನಗೆ ತುಂಬಾ ಇಷ್ಟವಾದ ಪಾತ್ರ ಇದು. ಈಗಾಗಲೇ ಚಿತ್ರವನ್ನು ನಾನು ನೋಡಿದ್ದೇನೆ, ಬಹಳ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಶ್ರೀನಿ ಜೊತೆ ಎರಡನೇ ಸಿನಿಮಾ ಇದು. ಕ್ರೈಂ, ಹಾರರ್, ಸಸ್ಪೆನ್ಸ್ , ಕಾಮಿಡಿ, ಸೆಂಟಿಮೆಂಟ್ ಎಲ್ಲ ಅಂಶಗಳನ್ನು ಸಿನಿಮಾದಲ್ಲಿರುವಂತೆ ಅವರು ನೋಡಿಕೊಳ್ಳುತ್ತಾರೆ ಜೊತೆಗೆ ಕುಟುಂಬವೆಲ್ಲ ಒಟ್ಟಿಗೆ ನೋಡುವಂತಹ ಚಿತ್ರ ಅಂಬುಜಾ ಎಂದರು ಶುಭಾ.

ನಟಿ ರಜಿನಿ ಮಾತನಾಡಿ, ”ಇದು ನನ್ನ ಮೊದಲನೇ ಸಿನಿಮಾ, ಮೊದಲನೇ ಸಿನಿಮಾದಲ್ಲಿಯೇ ಒಳ್ಳೆಯ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಥ್ಯಾಂಕ್ಸ್. ನನ್ನ ಪಾತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಾನು ನನ್ನ ಪಾತ್ರದ ಬಗ್ಗೆ ಹೇಳಿಕೊಳ್ಳುವುದದಕ್ಕಿಂತಲೂ ಜನ ನೋಡಿ ಪಾತ್ರವನ್ನು ಮೆಚ್ಚಿಕೊಂಡರೆ ಇನ್ನೂ ಹೆಚ್ಚಿನ ಖುಷಿ ಆಗುತ್ತದೆ ಎಂದರು.

ಸಿನಿಮಾದ ನಾಯಕನಾಗಿರುವ ದೀಪಕ್ ಸುಬ್ರಮಣ್ಯ, ‘ನನ್ನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ” ಎಂದರು. ಅಂಬುಜಾ ಸಿನಿಮಾವನ್ನು ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣ ಮಾಡಿರುವ ಜೊತೆಗೆ ಸಿನಿಮಾಕ್ಕೆ ಚಿತ್ರಕ್ಕೆ ಕಥೆ, ಸಾಹಿತ್ಯ ಸಹ ಬರೆದಿದ್ದಾರೆ. ಶ್ರೀನಿ ಹನುಂಮತರಾಜು ಅವರಿಗೆ ಇದು ಎರಡನೇ ಸಿನಿಮಾ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಇದೇ ತಿಂಗಳ 21 ರಂದು ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ