ಕಾನೂನಿಗೆ ವಿರುದ್ಧವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರನ್ನು ಬಂಧಿಸಲಾಗಿತ್ತು. ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಅವರು ನಂತರ ನ್ಯಾಯಾಂಗ ಬಂಧನಕ್ಕೆ ಒಳಪಟ್ಟರು. ಇತ್ತೀಚೆಗೆ ಸೋನು ಶ್ರೀನಿವಾಸ್ ಗೌಡ ಅವರು ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಜೈಲಿನಲ್ಲಿ ಏನಾಯಿತು? ಜೈಲಿನ ಅನುಭವ ಹೇಗಿತ್ತು ಎನ್ನುವುದನ್ನು ಅವರು ವಿವರಿಸಿದ್ದಾರೆ.
‘ನನ್ನನ್ನು ಕಾನೂನಾತ್ಮಕವಾಗಿ ವಿಚಾರಣೆ ಮಾಡಿದರು. ಆ ಬಳಿಕ ನನ್ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು. ನಾಲ್ಕು ಗೋಡೆ, ಅಲ್ಲಿನ ಜನ ನೋಡಿ ನನಗೆ ಇದೆಲ್ಲ ಬೇಕಿತ್ತಾ ಅನಿಸಿತು. ಬೇರೆ ಬೇರೆ ಪ್ರಕರಣ ಮಾಡಿದವರು ಅಲ್ಲಿದ್ದರು. ಮೂರು ದಿನಕ್ಕೆ ಒಮ್ಮೆ ಫೋನ್ ಕೊಡ್ತಾರೆ. 3-4 ನಿಮಿಷ ಮಾತನಾಡಲು ಮೂರು ದಿನ ಕಾಯಬೇಕು. ಇದರಿಂದ ವ್ಯಕ್ತಿಯ ಬೆಲೆ ಗೊತ್ತಾಗುತ್ತದೆ. ನಾಲ್ಕು ಗೋಡೆ ಮಧ್ಯೆ ಇದ್ದು ಎಲ್ಲವೂ ಕಲಿತೆ’ ಎಂದಿದ್ದಾರೆ ಸೋನು ಗೌಡ.
‘ಜೈಲಿನಲ್ಲಿ ತುಂಬಾನೇ ಸೊಳ್ಳೆ. ಆ ಜೀವನವೇ ಬೇರೆ. 23ನೇ ವಯಸ್ಸಿಗೆ ಜೈಲು ನೋಡಿದ್ನಲ್ಲ ಅನ್ನೋದು ಬೇಸರದ ವಿಚಾರ. ಆದರೆ, ಕೆಟ್ಟದ್ದಿರಲಿ ಒಳ್ಳೆಯದಿರಲಿ ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕು. ಆ ಬಗ್ಗೆ ಖುಷಿ ಇದೆ’ ಎಂದಿದ್ದಾರೆ ಸೋನು.
‘ಯಾರೂ ಇಲ್ಲದೆ ತುಂಬಾ ಕಷ್ಟಪಟ್ಟೆ. ಟ್ರೋಲ್ ಪೇಜ್ಗಳು ನನ್ನನ್ನು ಸಪೋರ್ಟ್ ಮಾಡಿದ್ದಾರೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಇದು ಖುಷಿ ನೀಡಿದೆ. ಬಂದವನು ಫೋನ್ ನೋಡಿಲ್ಲ. ನಂತರ ನೋಡಿದೆ. ನನ್ನದು ಸಣ್ಣ ಸರ್ಕಲ್. ಎಲ್ಲರೂ ನನ್ನ ಜೊತೆ ನಿಂತರು. ನನ್ನ ಪ್ರಕರಣದ ಬಗ್ಗೆ ಹೆಚ್ಚಿನದ್ದನ್ನು ಹೇಳೋಕೆ ಆಗಲ್ಲ’ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.
ಇದನ್ನೂ ಓದಿ: ಜೈಲಿನಿಂದ ಹೊರಬಂದ ಬಳಿಕ ಸೋನು ಶ್ರೀನಿವಾಸ್ ಗೌಡ ಸಂಪೂರ್ಣ ಸೈಲೆಂಟ್
ಸೋನು ಶ್ರೀನಿವಾಸ್ ಗೌಡ ಅವರು ಟಿಕ್ಟಾಕ್ ಹಾಗೂ ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ಅವರ ವೈಯಕ್ತಿಕ ವಿಡಿಯೋ ಲೀಕ್ ಆಗಿ ಸುದ್ದಿ ಆದರು. ನಂತರ ‘ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ರ ಮೂಲಕ ಅವರು ಎಂಟ್ರಿ ಕೊಟ್ಟು ಗಮನ ಸೆಳೆದರು. ಈಗ ಅವರು ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಸಂಕಷ್ಟ ಅನುಭವಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Sat, 13 April 24