ಟಾಲಿವುಡ್​ನಲ್ಲಿ ರಾಬರ್ಟ್​ ರಿಲೀಸ್​ಗೆ ಗ್ರೀನ್​ ಸಿಗ್ನಲ್​ ಸಿಗೋ ಸಾಧ್ಯತೆ: ಭರವಸೆ ನೀಡಿದ ಸೌತ್​ ಇಂಡಿಯನ್​ ಫಿಲಂ​ ಚೇಂಬರ್

|

Updated on: Jan 31, 2021 | 5:13 PM

ರಾಬರ್ಟ್​ ರಿಲೀಸ್​ಗೆ ಗ್ರೀನ್​ ಸಿಗ್ನಲ್​ ಸಿಗುವ ಭರವಸೆ ಸಿಕ್ಕಿದೆ. ಚಿತ್ರದ ಬಿಡುಗಡೆಗೆ ಎಲ್ಲಾ ಸಹಕಾರ ನೀಡುವುದಾಗಿ ಸೌತ್​ ಇಂಡಿಯನ್​ ಫಿಲಂ​ ಚೇಂಬರ್ ಭರವಸೆ ನೀಡಿದೆ.

ಟಾಲಿವುಡ್​ನಲ್ಲಿ ರಾಬರ್ಟ್​ ರಿಲೀಸ್​ಗೆ ಗ್ರೀನ್​ ಸಿಗ್ನಲ್​ ಸಿಗೋ ಸಾಧ್ಯತೆ: ಭರವಸೆ ನೀಡಿದ ಸೌತ್​ ಇಂಡಿಯನ್​ ಫಿಲಂ​ ಚೇಂಬರ್
ಸೌತ್​ ಇಂಡಿಯನ್​ ಫಿಲಂ​ ಚೇಂಬರ್​ಗೆ ಮನವಿ ಸಲ್ಲಿಸಿದ KFCC ಸದಸ್ಯರು
Follow us on

ಬೆಂಗಳೂರು: ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ರಿಲೀಸ್​ಗೆ ಗ್ರೀನ್​ ಸಿಗ್ನಲ್​ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಚಿತ್ರತಂಡಕ್ಕೆ ಸಿನಿಮಾ ರಿಲೀಸ್​ಗೆ ಬೇಕಾದ ಅವಕಾಶ ಸಿಗೋದಕ್ಕೆ ಭರವಸೆ ಕೊಡಲಾಗಿದೆ.

ಟಾಲಿವುಡ್​ನಲ್ಲಿ ರಾಬರ್ಟ್​ ರಿಲೀಸ್​ಗೆ ಅವಕಾಶ ಸಿಗುತ್ತಿಲ್ಲವೆಂದು ದರ್ಶನ್​ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ, ಈ ಕುರಿತು ಫಿಲಂ ಚೇಂಬರ್​ ಮೆಟ್ಟಿಲೇರಿದ್ದರು. ಇದಾದ ಬಳಿಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಸೌತ್​ ಇಂಡಿಯನ್​ ಫಿಲಂ​ ಚೇಂಬರ್​ಗೆ ಭೇಟಿ ನೀಡಿ ಮನವಿ ಮಾಡಿದ್ದರು. ಮಂಡಳಿ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಮನವಿ ಮಾಡಿದ್ರು.

ಈ ಹಿನ್ನೆಲೆಯಲ್ಲಿ, ರಾಬರ್ಟ್​ ರಿಲೀಸ್​ಗೆ ಗ್ರೀನ್​ ಸಿಗ್ನಲ್​ ಸಿಗುವ ಭರವಸೆ ಸಿಕ್ಕಿದೆ. ಚಿತ್ರದ ಬಿಡುಗಡೆಗೆ ಎಲ್ಲಾ ಸಹಕಾರ ನೀಡುವುದಾಗಿ ಸೌತ್​ ಇಂಡಿಯನ್​ ಫಿಲಂ​ ಚೇಂಬರ್ ಭರವಸೆ ನೀಡಿದೆ. ಏಶಿಯನ್​ ಫಿಲಂನ ಸುನೀಲ್ ಹಾಗೂ ಸುರೇಶ್ ಬಾಬು ಪ್ರೊಡಕ್ಷನ್ಸ್​ನ ಜಗದೀಶ್ ಜೊತೆ ಟಾಲಿವುಡ್​ನಲ್ಲಿ ಸಿನಿಮಾ ರಿಲೀಸ್ ಮಾಡೋ ಬಗ್ಗೆ ಮಾತುಕತೆ ನಡೆದಿತ್ತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯರಾಜ್, ಕಾರ್ಯದರ್ಶಿ ಎನ್.ಎಂ.ಸುರೇಶ್ ಮತ್ತು ಮಾಜಿ ಅದ್ಯಕ್ಷ ಥಾಮಸ್ ಡಿಸೋಜ ಸೌತ್​ ಇಂಡಿಯನ್​ ಫಿಲಂ​ ಚೇಂಬರ್​ಗೆ ಮನವಿ ಮಾಡಿದರು. ಇದೀಗ, ರಾಬರ್ಟ್ ರಿಲೀಸ್​ಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳೋದಾಗಿ ಸೌತ್​ ಇಂಡಿಯನ್​ ಫಿಲಂ​ ಚೇಂಬರ್ ಭರವಸೆ ನೀಡಿದೆ.

ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿಗೆ ದಚ್ಚು ಡಿಚ್ಚಿ, ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ದೂರು ಸಲ್ಲಿಸಿದ ರಾಬರ್ಟ್​ ನಿರ್ಮಾಪಕರು