[lazy-load-videos-and-sticky-control id=”ILgnvfGjns8″]
ಚೆನ್ನೈ: ಕೊರೊನಾದಿಂದಾ ಆಸ್ಪತ್ರೆಗೆ ಸೇರಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಈ ಬಗ್ಗೆ ಗಾಯಕ ಎಸ್‌ಪಿಬಿ ಪುತ್ರ ಚರಣ್ ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಬಾಲಸುಬ್ರಹ್ಮಣ್ಯಂ ಅವರು ಸ್ಪಂದಿಸುತ್ತಿದ್ದು, ವೈದ್ಯರಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರು ಶೀಘ್ರವಾಗಿ ಅವರು ಚೇತರಿಸಿಕೊಂಡು ಬರುವ ವಿಶ್ವಾಸವಿದೆ ಎಂದು ಪುತ್ರ ಚರಣ್ ಹೇಳಿದ್ದಾರೆ.
ಅಷ್ಟೇ ಅಲ್ಲ ಗಾನ ಗಂಧರ್ವನಿಗೆ ಹಗಲಿರುಳು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರು, ಶುಭ ಹಾರೈಸಿದ ಅವರ ಅಸಂಖ್ಯಾತ ಅಭಿಮಾನಿಗಳಿಗೆಲ್ಲರಿಗೂ ಪುತ್ರ ಚರಣ್ ಧನ್ಯವಾದ ಹೇಳಿದ್ದಾರೆ.
#Spb health update 25/8/20 pic.twitter.com/pX1HXqcd2O
— S. P. Charan (@charanproducer) August 25, 2020
Published On - 5:48 pm, Tue, 25 August 20