ದರ್ಶನ್​, ಪವಿತ್ರಾ ಸೇರಿ ಏಳು ಮಂದಿಗೆ ಸಂಕಷ್ಟ; ರದ್ದಾಗುತ್ತಾ ಜಾಮೀನು?

|

Updated on: Dec 30, 2024 | 1:40 PM

ದರ್ಶನ್ ಅವರಿಗೆ ಹೈಕೋರ್ಟ್ ಪೂರ್ಣ ಪ್ರಮಾಣದ ಜಾಮೀನು ನೀಡಿದ್ದು, ಬೆಂಗಳೂರು ಪೊಲೀಸರು ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಸಿದ್ಧರಾಗಿದ್ದಾರೆ. ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಜಾಮೀನು ಕೂಡ ರದ್ದುಗೊಳಿಸುವಂತೆ ಅವರು ಕೋರುತ್ತಿದ್ದಾರೆ. ಗೃಹ ಇಲಾಖೆಯಿಂದ ಈ ಕ್ರಮಕ್ಕೆ ಅನುಮತಿ ದೊರೆತಿದ್ದು, ಕೇಸ್ ಫೈಲ್ ಮತ್ತು ಚಾರ್ಜ್ ಶೀಟ್ ಅನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದೆ.

ದರ್ಶನ್​, ಪವಿತ್ರಾ ಸೇರಿ ಏಳು ಮಂದಿಗೆ ಸಂಕಷ್ಟ; ರದ್ದಾಗುತ್ತಾ ಜಾಮೀನು?
ದರ್ಶನ್
Follow us on

ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ಆರೋಪಿ ದರ್ಶನ್ ಅವರು ಪೂರ್ಣ ಪ್ರಮಾಣದ ಜಾಮೀನು ಪಡೆದು ಕೋರ್ಟ್​ನಿಂದ ಹೊರ ಬಂದಿದ್ದಾರೆ. ಅವರ ಜೊತೆ ಆಪ್ತೆ ಪವಿತ್ರಾ ಗೌಡ, ಮ್ಯಾನೇಜರ್ ನಾಗರಾಜು ಸೇರಿ ಅನೇಕರಿಗೆ ಜಾಮೀನು ಸಿಕ್ಕಿದೆ. ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಲು ಬೆಂಗಳೂರು ಪೊಲೀಸರು ರೆಡಿ ಆಗಿದ್ದಾರೆ. ಇವರಿಗೆ ಗೃಹ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರಿಂದ ದರ್ಶನ್​ಗೆ ಸಂಕಷ್ಟ ಎದುರಾಗಿದೆ.

ದರ್ಶನ್ ಅವರು ಆರಂಭದಲ್ಲಿ ಸರ್ಜರಿಯ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ದರು. ಆ ಬಳಿಕ ಪೂರ್ಣ ಪ್ರಮಾಣದ ಜಾಮೀನು ಪಡೆದರು. ಹೈಕೋರ್ಟ್​ನಿಂದ ಜಾಮೀನು ಸಿಗುತ್ತಿದ್ದಂತೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗ ಈ ಜಾಮೀನು ರದ್ದತಿಗೆ ಕೋರಿ ಪೊಲೀಸರು ಕೋರ್ಟ್ ಮೊರೆ ಹೋಗುತ್ತಿದ್ದಾರೆ.

ಈಗಾಗಲೇ ಗೃಹ ಇಲಾಖೆಯಿಂದ ಅನುಮತಿ ನೀಡಿ ಕಡತ ರವಾನೆ ಆಗಿದೆ. ಶೀಘ್ರದಲ್ಲೇ ಸುಪ್ರೀಂಕೋರ್ಟ್​ಗೆ ಪೊಲೀಸರು ಮೇಲ್ಮನವಿ ಸಲ್ಲಿಸಲಿದ್ದಾರೆ. ಮೆರಿಟ್ಸ್ ಆಫ್ ದಿ ಕೇಸ್ ಮೇಲೆ ಮನವಿ ಮಾಡಲು ಪೊಲೀಸರು ರೆಡಿ ಆಗಿದ್ದಾರೆ. ಕೇವಲ ದರ್ಶನ್ ಮಾತ್ರವಲ್ಲದೆ, ಬೇಲ್ ಪಡೆದ ಎಲ್ಲರ ಜಾಮೀನು ರದ್ದು ಮಾಡಲು ಮನವಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕೇಸ್ ಫೈಲ್ ಹಾಗೂ ಚಾರ್ಜ್​ಶೀಟ್​ನ​ ಇಂಗ್ಲಿಷ್​​ಗೆ ತರ್ಜುಮೆ ಮಾಡಲಾಗಿದೆ.

ವಕೀಲರು ಯಾರು?

ಈ ಮೊದಲು ಹೈಕೋರ್ಟ್​ನಲ್ಲಿ ಸರ್ಕಾರಿ ಪರ ವಕೀಲರಾಗಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದರು. ಅದೇ ರೀತಿ ಸುಪ್ರೀಂ ಕೋರ್ಟ್​ಗೆ ವಕೀಲರಾಗಿ ಅನಿಲ್ ಸಿ. ನಿಶಾನಿ ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಯಾರ ವಿರುದ್ಧ?

ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ, ಪ್ರದೋಶ್, ನಾಗರಾಜು, ಅನುಕುಮಾರ್, ಜಗದೀಶ್​ಗೆ ಹೈಕೋರ್ಟ್​ಜಾಮೀನು ನೀಡಿತ್ತು. ಇದನ್ನು ಬೆಂಗಳೂರು ಪೊಲೀಸರು ಪ್ರಶ್ನೆ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ದರ್ಶನ್ ಪ್ರಕರಣ ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆಗೆ ಒಳಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.